More

    ಸೌರವ್​ ಗಂಗೂಲಿ ಬಯೋಪಿಕ್​ನಲ್ಲಿ ರಣಬೀರ್​ ಕಪೂರ್​? ಏನಿದು ಹೊಸ ಸುದ್ದಿ?

    ಕೊಲ್ಕತ್ತಾ: ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಸೌರವ್​ ಗಂಗೂಲಿ ಬಗ್ಗೆ ಒಂದು ಸಿನಿಮಾ ಆಗುತ್ತಿದೆ ಎಂಬ ವಿಷಯ ಹೊಸದೇನಲ್ಲ. ಕೆಲವು ತಿಂಗಳುಗಳಿಂದ ಇಂಥದ್ದೊಂದು ಸುದ್ದಿ ಕೇಳಿ ಬರುತ್ತಿದ್ದು, ಇದೀಗ ಸೌರವ್​ ಗಂಗೂಲಿ ಪಾತ್ರದಲ್ಲಿ ನಟ ರಣಬೀರ್​ ಕಪೂರ್​ ಕಾಣಿಸಿಕೊಳ್ಳುತ್ತಾರಾ? ಎಂಬ ಪ್ರಶ್ನೆ ಎದುರಾಗಿದೆ.

    ಇದನ್ನೂ ಓದಿ: ಬರೀ ರಾಮಾಚಾರಿ ಅಲ್ಲ, ‘ರಾಮಾಚಾರಿ 2.0’; ಇದು ತೇಜ್​ ಹೊಸ ಸಿನಿಮಾ

    ಇಂಥದ್ದೊಂದು ಪ್ರಶ್ನೆ ಬರುವುದಕ್ಕೂ ಕಾರಣವಿದೆ. ಸದ್ಯದಲ್ಲೇ ಬಿಡುಗಡೆಯಾಗಲಿರುವ ‘ತೂ ಝೂಟಿ ಮೇ ಮಕ್ಕಾರ್​’ ಚಿತ್ರದ ಪ್ರಮೋಷನ್​ನಲ್ಲಿ ತೊಡಗಿಸಿಕೊಂಡಿರುವ ರಣಬೀರ್​ ಕಪೂರ್​, ಇತ್ತೀಚೆಗೆ ಕೊಲ್ಕತ್ತಾದ ಎಡನ್​ ಗಾರ್ಡನ್ಸ್​ನಲ್ಲಿ ಒಟ್ಟಿಗೆ ಕ್ರಿಕೆಟ್​ ಆಡಿದ್ದಾರೆ. ಅವರಿಬ್ಬರೂ ಒಟ್ಟಿಗೆ ಕ್ರಿಕೆಟ್​ ಆಡಿದ್ದು ಒಂದು ಇವೆಂಟ್​ಗಾದರೂ, ಅದು ಹೊರಗಿನವರಿಗೆ ಬೇರೆಯದೇ ಅರ್ಥ ಕಲ್ಪಿಸಿದೆ.

    ಪ್ರಮುಖವಾಗಿ, ಸೌರವ್​ ಗಂಗೂಲಿ ಕುರಿತು ಬಯೋಪಿಕ್​ ಆಗುತ್ತಿರುವ ಬಗ್ಗೆ ಚರ್ಚೆ ಆಗುತ್ತಿದೆ. ಇಂಥ ಸಂದರ್ಭದಲ್ಲಿ ಗಂಗೂಲಿ ಜತೆಗೆ ರಣಬೀರ್​ ಸಹ ಕಾಣಿಸಿಕೊಂಡಿರುವುದು, ಆ ಬಯೋಪಿಕ್​ನಲ್ಲಿ ಗಂಗೂಲಿ ಪಾತ್ರವನ್ನು ರಣಬೀರ್​ ಮಾಡಬಹುದು ಎಂಬ ಅನುಮಾನ ಹುಟ್ಟುಹಾಕಿದೆ.

    ಇದನ್ನೂ ಓದಿ: ಬಿಡುಗಡೆಗೂ ಮುನ್ನವೇ 400 ಕೋಟಿ ರೂ. ಬಾಚಿದ ವಿಜಯ್​ ಅಭಿನಯದ ‘ಲಿಯೋ’

    ಆದರೆ, ಇದನ್ನು ಜಾಸ್ತಿ ಎಳೆಯುವುದಕ್ಕೆ ಇಬ್ಬರೂ ಬಿಟ್ಟಿಲ್ಲ. ಈ ಕುರಿತು ಮಾತನಾಡಿರುವ ರಣಬೀರ್​ ಕಪೂರ್​. ‘ದಾದಾ ಬರೀ ಭಾರತದಲ್ಲಷ್ಟೇ ಅಲ್ಲ, ಇಡೀ ಜಗತ್ತಿನಲ್ಲಿ ಜನಪ್ರಿಯರು. ಅವರ ಬಗ್ಗೆ ಬಯೋಪಿಕ್​ ಆಗುತ್ತಿರುವುದು ಬಹಳ ಖುಷಿಯ ವಿಷಯ. ಆದರೆ, ಅವರ ಪಾತ್ರವನ್ನು ನನಗೆ ಮಾಡಿ ಎಂದು ಯಾರೂ ಕೇಳಿಲ್ಲ. ಬಹುಶಃ ಚಿತ್ರದ ಕಥೆ ಇನ್ನೂ ಸಿದ್ಧವಾಗಿಲ್ಲವೇನೋ ಗೊತ್ತಿಲ್ಲ. ಒಟ್ಟಿನಲ್ಲಿ ಈ ವಿಷಯವಾಗಿ ಯಾರೂ ನನ್ನನ್ನು ಸಂಪರ್ಕಿಸಿಲ್ಲ’ ಎಂದು ಹೇಳುವ ಮೂಲಕ ಹಲವು ಊಹಾಪೋಹಗಳಿಗೆ ಫುಲ್​ಸ್ಟಾಪ್​ ಹಾಕಿದ್ದಾರೆ.

    ಆಂಟಿ ಎಂಬುದು ಇಂದು ಅಶ್ಲೀಲ ಪದವಾಗಿದೆ: ಆಂಟಿ ಟ್ರೆಂಡ್​ಗೆ ನಟಿ ಕಸ್ತೂರಿ ಖಡಕ್​ ತಿರುಗೇಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts