More

    ರಣ್​ಬೀರ್​ – ದೀಪಿಕಾ ಮ್ಯಾಚಿಂಗ್​ ಮಾಸ್ಕ್​; ಈ ಮಾಸ್ಕ್​ ಬೆಲೆ ಕೇಳಿದರೇ ತಲೆ ತಿರುಗತ್ತೆ!

    ಮುಂಬೈ: ಸೆಲೆಬ್ರಿಟಿಗಳು ತೊಡುವ ಬಟ್ಟೆಯ ಬೆಲೆಯಲ್ಲಿ ಸಾಮಾನ್ಯ ಕುಟುಂಬವೊಂದು ಪೂರ್ತಿ ತಿಂಗಳು ಹೊಟ್ಟೆ ತುಂಬ ಊಟ ಮಾಡಬಹುದು. ದುಬಾರಿ ಬಟ್ಟೆಯಲ್ಲೇ ಮಿಂಚುವ ಸೆಲೆಬ್ರಿಟಿಗಳು ಇದೀಗ ಮಾಸ್ಕ್​ನಲ್ಲೂ ಈ ದುಬಾರಿ ಗೀಳನ್ನು ಶುರುಮಾಡಿಕೊಂಡಿದ್ದಾರೆ. ಇತ್ತೀಚೆಗೆ ಬಾಲಿವುಡ್​ನ ರಣಬೀರ್​ ಮತ್ತು ದೀಪಿಕಾ ಪಡುಕೋಣೆ ಮ್ಯಾಚಿಂಗ್​ ಮಾಸ್ಕ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಆ ಮಾಸ್ಕ್​ನ ಬೆಲೆ ಕೇಳಿದರೆ ಒಮ್ಮೆಲೆ ನಿಮಗೆ ತಲೆ ತಿರುಗುವುದು ಗ್ಯಾರಂಟಿ.

    ರಣ್​ಬೀರ್​ ಮತ್ತು ದೀಪಿಕಾ ಪಡುಕೋಣೆ ಕಪ್ಪು ಬಣ್ಣದ ಮಾಸ್ಕ್​ ತೊಟ್ಟು ಓಡಾಡಿರುವ ಹೆಚ್ಚಾಗಿ ಕಂಡುಬಂದಿದೆ. ಆ ಮಾಸ್ಕ್​ ಮೇಲೆ ಎಲ್​ವಿ ಇನ್ಶಿಯಲ್​ ಇರುವ ಲೋಗೋ ಕಾಣಬಹುದಾಗಿದೆ. ಅಂದ ಹಾಗೆ ಈ ಮಾಸ್ಕ್​ ಲೂಯಿಸ್​ ವಿಟಾನ್ ಬ್ರ್ಯಾಂಡ್​ನ ಮಾಸ್ಕ್​ ಆಗಿದೆ. ಈ ಒಂದು ಮಾಸ್ಕ್​ನ ಬೆಲೆ ಬರೋಬ್ಬರಿ 355 ಡಾಲರ್​ ಅಂದರೆ ಸರಿ ಸುಮಾರು 25,777 ರೂಪಾಯಿ.

    ರಣ್​ಬೀರ್​ - ದೀಪಿಕಾ ಮ್ಯಾಚಿಂಗ್​ ಮಾಸ್ಕ್​; ಈ ಮಾಸ್ಕ್​ ಬೆಲೆ ಕೇಳಿದರೇ ತಲೆ ತಿರುಗತ್ತೆ!
    25 ಸಾವಿರ ರೂಪಾಯಿಯಷ್ಟು ಹಣ ಕೊಡುವಂತದ್ದು ಈ ಮಾಸ್ಕ್​ನಲ್ಲಿ ಏನಿದೆ ಎಂದರೆ ಅದಕ್ಕೆ ಅಂತಹ ವಿಶೇಷ ಉತ್ತರವೇನು ಇಲ್ಲ. ಮಾಸ್ಕ್​ನ ಜತೆಯಲ್ಲಿ ಒಂದು ಪೌಚ್​ ಕೊಡಲಾಗುತ್ತಿದ್ದು, ಮಾಸ್ಕ್​ ಬಳಸದ ಸಮಯದಲ್ಲಿ ಅದರಲ್ಲಿ ಮಾಸ್ಕ್​ ಇಟ್ಟುಕೊಳ್ಳಬಹುದು ಎನ್ನಲಾಗಿದೆ. ವಿಶೇಷ ಬ್ರ್ಯಾಂಡ್​ನ ಈ ವಿಶೇಷ ಮಾಸ್ಕ್​ನ ಬೆಲೆಯಲ್ಲಿ ಮಧ್ಯಮ ವರ್ಗದ ಒಂದು ಕುಟುಂಬದ ಒಂದು ತಿಂಗಳ ಜೀವನ ಅರಾಮವಾಗಿ ನಡೆದುಹೋಗುತ್ತದೆ ಎನ್ನುತ್ತಾರೆ ಅನೇಕರು. (ಏಜೆನ್ಸೀಸ್​)

    ಫಾಸ್ಟ್ಯಾಗ್​ ಇದ್ದರೆ ಓಕೆ, ಇಲ್ಲ ಅಂದ್ರೆ ನಾಳೆಯಿಂದ ಡಬಲ್​ ಟೋಲ್​! ಸರ್ಕಾರದ ಹೊಸ ಆದೇಶ

    1,500 ರೂ. ಬದಲು 1.5 ಲಕ್ಷ ರೂ. ಮೊತ್ತದ ಕರೆಂಟ್​ ಬಿಲ್​ ಕೊಟ್ಟ ಅಧಿಕಾರಿಗಳು! ಭಯದಿಂದ ರೈತ ಆತ್ಮಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts