ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಬೋರ್ ಆಗದೆ ಇರುವ ವಿಷಯ ಅಂದರೆ ಅದು ನಟಿ ರಮ್ಯಾ ಅವರ ಮದುವೆ ಸುದ್ದಿ.‘
ಹೌದು…ಮೋಹಕ ತಾರೆ, ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ವಿವಾಹ ಆಗುತ್ತಿದ್ದಾರೆ. ರಮ್ಯಾಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು, ಇದೇ ನವೆಂಬರ್ ತಿಂಗಳಲ್ಲಿ ಹಸೆಮಣೆ ಏರುವ ಸಾಧ್ಯತೆ ಇದೆ. ಇಷ್ಟರಲ್ಲೇ ನಿಶ್ಚಿತಾರ್ಥ ಕಾರ್ಯಕ್ರಮ ಕೂಡ ನಡೆಯಲಿದ್ದು, ರಮ್ಯಾ ಅವರು ಉದ್ಯಮಿಯೊಬ್ಬರನ್ನು ಕೈ ಹಿಡಿಯಲಿದ್ದಾರೆ. ಅವರ ಹುಟ್ಟುಹಬ್ಬದ ದಿನ (ನವೆಂಬರ್ 29) ಮದುವೆ ನಡೆಯಲಿದೆ ಎನ್ನುವ ಸುದ್ದಿ ಹರಡಿತ್ತು.
ಇದನ್ನೂ ಓದಿ: Viral Video: ಗೋಡೌನ್ನಲ್ಲಿ ಮೂಟೆಗಳ ಅಡಿ ಸಿಲುಕಿದ ಕಾರ್ಮಿಕ ಸಾವು, ನಾಲ್ವರ ಸ್ಥಿತಿ ಗಂಭೀರ; ವಿಡಿಯೋ ವೈರಲ್
ಸೆಪ್ಟೆಂಬರ್ 8 ರಂದು ರಮ್ಯಾ ಅವರು ಆಪ್ತರೊಬ್ಬರ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಾಗ ಸುದ್ದಿ ಹಬ್ಬಿತು. ಈ ಸುದ್ದಿ ಹಬ್ಬಿದಾಗ ಬಹಳಷ್ಟು ಮಂದಿ ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ಚರ್ಚೆ ಮಾಡ ತೊಡಗಿದ್ದರು. ಯಾರು ವರ? ಏನು ಮಾಡುತ್ತಿದ್ದಾರೆ? ಎಲ್ಲಿಯವರು? ಎಂದೆಲ್ಲ. ಯಾವಾಗ ಈ ಸುಳ್ಳು ಎಂದು ತಿಳಿಯಿತೋ ಅಭಿಮಾನಿಗಳಿಗೆ ನಿರಾಸೆಯಾಗಿತ್ತು.
ತನ್ನ ಮದುವೆ ವಿಷಯದ ಕುರಿತಾಗಿ ನಟಿ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ, ನನ್ನನ್ನು ಕೇಳದೆ ಯಾವುದೇ ಸುದ್ದಿ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಮಾಧ್ಯಮಗಳಿಂದ ನಾನು ಹಲವಾರು ಬಾರಿ ಮದುವೆಯಾಗಿದ್ದೇನೆ, ಆ ಬಗ್ಗೆ ಲೆಕ್ಕಾ ಇಲ್ಲ ಎಲ್ಲಿ ಯಾರನ್ನ ನಾನು ಮದುವೆಯಾಗ್ತಿನಿ ಅದನ್ನು ನಾನೇ ಖುದ್ದು ತಿಳಿಸುತ್ತೇನೆ. ಸುದ್ದಿ ಮಾಡುವ ಮೊದಲು ಪರಿಶೀಲಿಸಿ, ವದಂತಿಗಳನ್ನು ಹಬ್ಬಿಸಬೇಡಿ ಎಂದು ನಟಿ ರಮ್ಯಾ ಬರೆದುಕೊಂಡಿದ್ದಾರೆ.
2003ರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಅಭಿ ಚಿತ್ರದ ಮೂಲಕ ರಮ್ಯಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಸುಮಾರು 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ರಮ್ಯಾ, ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಚಿತ್ರರಂಗದಲ್ಲೂ ಮಿಂಚಿದ್ದಾರೆ. ರಮ್ಯಾ ಅವರು ಸಿನಿಮಾ ರಂಗ ಮಾತ್ರವಲ್ಲ ರಾಜಕಾರಣದಲ್ಲಿ ಕೂಡ ಹೆಸರು ಮಾಡಿದವರು. ಮಂಡ್ಯದ ಮಾಜಿ ಸಂಸದೆಯಾಗಿದ್ದರು. 2013ರಲ್ಲಿ ರಮ್ಯಾ ಮಂಡ್ಯದಲ್ಲಿ ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
ಕೇಂದ್ರ ಸಚಿವರನ್ನು ಭೇಟಿ ಮಾಡಿದ ಎಂ.ಬಿ. ಪಾಟೀಲ್; ರಾಜ್ಯದ ಬೇಡಿಕೆಗಳ ಕುರಿತು ಚರ್ಚೆ