More

    ಬೇಕಿದ್ರೆ ಬೆಟ್ ಕಟ್ತೀನಿ ಈ ಜಗತ್ತಿನಲ್ಲಿ ರಾಮುಗಿಂತ ಉತ್ತಮ ಸಲಹೆಗಾರ ಯಾರೂ ಇಲ್ಲ ಅಂದ್ರು ಆನಂದ್​ ಮಹೀಂದ್ರಾ!

    ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಉದ್ಯಮಿ ಹಾಗೂ ಮಹೀಂದ್ರಾ ಗ್ರೂಪ್​ ಆಫ್​ ಚೇರ್ಮನ್​ ಆನಂದ್​ ಮಹೀಂದ್ರಾ ತಮ್ಮ ಕಣ್ಣಿಗೆ ಬಿದ್ದಂತಹ ವಿಶೇಷತೆಗಳನ್ನು ಜನರಿಗೆ ಆಗಾಗ ಪರಿಚಯಿಸುತ್ತಿರುತ್ತಾರೆ. ಅದರಂತೆ ಇಂದು ಮಧ್ಯಾಹ ಮಹೀಂದ್ರಾ ಅವರು ಎಕ್ಸ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿರುವ ವಿಡಿಯೋ ಅನೇಕರ ಗಮನ ಸೆಳೆದಿದೆ.

    ವಿಡಿಯೋದಲ್ಲಿ ಏನಿದೆ?: ಆಶ್ರಮವೊಂದರಲ್ಲಿ ಇರುವ ಎತ್ತು ಅಥವಾ ಹೋರಿಯೊಂದು ತನ್ನಷ್ಟಕ್ಕೆ ತಾನೇ ಎತ್ತಿನಬಂಡಿಯನ್ನು ಚಲಾಯಿಸಿ, ವಿವಿಧ ಕೆಲಸಗಳನ್ನು ಮಾಡುತ್ತಿರುವ ರೋಮಾಂಚನಕಾರಿ ದೃಶ್ಯಗಳಿವೆ.

    ಎಲ್ಲಿಯೂ ಯಾರೊಬ್ಬರ ಸಹಾಯವನ್ನು ಕೋರದೆ ತನ್ನ ಕೆಲಸವನ್ನು ಹೋರಿ ತಾನೇ ಮಾಡಿಕೊಳ್ಳುತ್ತದೆ. ಈ ವಿಡಿಯೋವನ್ನು ಆನಂದ್​ ಮಹೀಂದ್ರಾ ಅವರು ಇಂದು ಮಧ್ಯಾಹ್ನ ಶೇರ್​ ಮಾಡಿದ್ದು, ಒಂದು ವೇಳೆ ರಾಮು (ಹೋರಿಯ ಹೆಸರು) ಚೆನ್ನಾಗಿ ಮಾತನಾಡುತ್ತಿದ್ದರೆ, ಪ್ರಪಂಚದಲ್ಲಿ ಇರುವ ಸ್ವಯಂ ಘೋಷಿತ ಪ್ರೇರಣ ಭಾಷಣಕಾರರಿಗಿಂತ ರಾಮು ಪಾಸಿಟಿವ್​ ಲೈಫ್​ ಬಗ್ಗೆ ಒಳ್ಳೆಯ ಸಲಹೆಗಳನ್ನು ನೀಡುತ್ತಾನೆ ಎಂದಿದ್ದಾರೆ.

    ಜಾಗರೂಕ್​ ಕಿಶಾನ್​ ಹೆಸರಿನ ಯೂಟ್ಯೂಬ್​ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಕೆಲವೇ ದಿನಗಳಲ್ಲಿ 70 ಸಾವಿರಕ್ಕೂ ಅಧಿಕ ವೀಕ್ಷಣೆ ಗಳಿಸಿದೆ. ಆನಂದ್​ ಮಹೀಂದ್ರಾ ಅವರು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡ ಒಂದೇ ಗಂಟೆಯಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. 5 ಸಾವಿರಕ್ಕೂ ಅಧಿಕ ಮಂದಿ ಲೈಕ್​ ಮಾಡಿದ್ದಾರೆ. ಹೀಗೆ ಸಾಕಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಗರ್ಭಿಣಿ ಮೇಲೆ ಟ್ರ್ಯಾಕ್ಟರ್​ ಹರಿಸಿ ಲೋನ್​ ರಿಕವರಿ ಏಜೆಂಟ್​ನಿಂದ ಹತ್ಯೆ ಆರೋಪ: ಮೌನ ಮುರಿದ ಆನಂದ್​ ಮಹೀಂದ್ರಾ

    ಅವಮಾನಿಸಿದ್ದ ಯುವ ರೈತನ ಮನೆಗೆ ಹೊಸ ಗೂಡ್ಸ್ ಜೀಪ್ ಕಳುಹಿಸಿ ಆನಂದ್​ ಮಹೀಂದ್ರಾ ಹೇಳಿದ್ದು ಹೀಗೆ…

    ಪುತ್ರನಿಗಾಗಿ ವಾಹನ ಆವಿಷ್ಕರಿಸಿದ ತಂದೆಗೆ ಬಂಪರ್​ ಆಫರ್​ ನೀಡಿ ಸರ್ಕಾರವನ್ನು ಟೀಕಿಸಿದ ಆನಂದ್​ ಮಹೀಂದ್ರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts