

ಮುಂಬೈ: ಕೇಂದ್ರ ಸಚಿವ ರಾಮದಾಸ್ ಅಠಾವಳೆ ಅವರಿಗೆ ಕರೊನಾ ಸೋಂಕು ತಗುಲಿದ್ದು, ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ರಾಮದಾಸ್ ಅವರು ಫೆಬ್ರವರಿಯಲ್ಲಿಯೇ ' ಗೋ ಕರೊನಾ.. ಗೋ ಕರೊನಾ' ಎಂಬ ಮಂತ್ರ ಪಠಿಸಿ ಭರ್ಜರಿ ಸುದ್ದಿಯಾಗಿದ್ದರು. ಮುಂಬೈನಲ್ಲಿನ ಚೀನಾ ರಾಯಭಾರಿ ಟ್ಯಾಂಗ್ ಗುಯೊಕೈ ಮತ್ತು ಬೌದ್ಧ ಭಿಕ್ಷುಗಳೊಂದಿಗೆ ಸೇರಿ ಪ್ರಾರ್ಥನಾ ಸಭೆ ನಡೆಸಿದ ವೇಳೆ, ಗೋ ಕರೊನಾ ಎಂದು ಪಠಿಸಿದ್ದರು. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.
ಅಠಾವಳೆ ಅವರಿಗೆ 60 ವರ್ಷವಾಗಿದ್ದು, ಡಯಾಬಿಟಿಕ್ ಇದೆ ಎಂದು ಅವರ ಆಪ್ತಸಹಾಯಕ ತಿಳಿಸಿದ್ದಾರೆ. ಸೋಮವಾರವಷ್ಟೇ ಮುಂಬೈನಲ್ಲಿ ನಡೆದ ಒಂದು ಸಮಾರಂಭದಲ್ಲಿ ನಟಿ ಪಾಯಲ್ ಘೋಷ್ ಜತೆ ಪಾಲ್ಗೊಂಡಿದ್ದರು. (ಏಜೆನ್ಸೀಸ್)