More

    ರಾಮಾಯಣ ಧಾರಾವಾಹಿಯಲ್ಲಿ ನಟಿಸಿ ಮನಗೆದ್ದಿದ್ದ ನಟ ಚಂದ್ರಶೇಖರ್​ ನಿಧನ

    ಮುಂಬೈ: 60ರ ದಶಕದಲ್ಲಿ ಪ್ರಸಾರವಾಗಿದ್ದ ರಾಮಾಯಣ ಧಾರಾವಾಹಿಯಲ್ಲಿ ನಟಿಸಿ ಅನೇಕರ ಮನಗೆದ್ದಿದ್ದ ನಟ ಚಂದ್ರಶೇಖರ್​ ಬುಧವಾರದಂದು ನಿಧನರಾಗಿದ್ದಾರೆ. 98 ವರ್ಷ ವಯಸ್ಸಾಗಿದ್ದ ಅವರು ವಯೋಸಹಜ ಕಾಯಲೆಯಿಂದಾಗಿ ಕೊನೆಯುಸಿರೆಳೆದಿರುವುದಾಗಿ ತಿಳಿಸಲಾಗಿದೆ.

    1987ರಲ್ಲಿ ಪ್ರಸಾವಾಗುತ್ತಿದ್ದ ರಾಮಾಯಣ ಧಾರಾವಾಹಿಯಲ್ಲಿ ಚಂದ್ರಶೇಖರ್ ಅವರು ದಶರಥ ಮಹಾರಾಜನ ಮಂತ್ರಿ ಸುಮಂತನ ಮಾತ್ರದಲ್ಲಿ ಕಾಣಿಸಿಕೊಂಡಿದ್ದರು. 1954ರಲ್ಲಿಯೇ ಔರತ್ ಥೇರಿ ಯೆಹಿ ಕಹಾನಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದಿದ್ದ ಅವರು ಸುಮಾರು 250ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರು.

    ಚಂದ್ರಶೇಖರ್ ಅವರು ಸಿನಿಮಾ ಕ್ಷೇತ್ರದ ಜತೆ ಸಾಮಾಜಿಕ ಹೋರಾಟಗಾರರಾಗಿಯೂ ಗುರುತಿಸಿಕೊಂಡಿದ್ದರು. ಸಾಕಷ್ಟು ದಿನಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ 7 ಗಂಟೆಯ ಹೊತ್ತಿಗೆ ಕೊನೆಯುಸಿರು ಎಳೆದಿದ್ದಾರೆ ಎಂದು ಅವರ ಮಗ ಅಶೋಕ್ ಶೇಖರ್ ತಿಳಿಸಿದ್ದಾರೆ. (ಏಜೆನ್ಸೀಸ್)

    ಗಂಡನನ್ನು ಕೊಂದು ಆತನ ಮರ್ಮಾಂಗ ಫ್ರೈ ಮಾಡಿದ ಹೆಂಡತಿ! ಮಹಿಳೆಯ ಹುಚ್ಚಾಟ ಕೇಳಿದರೆ ಶಾಕ್ ಆಗೋದು ಗ್ಯಾರಂಟಿ

    ನಾಲ್ಕು ವರ್ಷದ ಕಂದಮ್ಮನಿಗೆ ಕ್ರೂರ ಶಿಕ್ಷೆ ಕೊಟ್ಟು ಕೊಂದ ಅಮ್ಮ! ಹಿರಿ ಮಗಳಿಂದ ಬಯಲಾಯಿತು ಭಯಾನಕ ಸತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts