ಸೆ.11ರಿಂದ 13ರವರೆಗೆ ರಾಮಕೃಷ್ಣ ಮಠದಲ್ಲಿ ಶೈಕ್ಷಣಿಕ ವಿಚಾರ ಸಂಕಿರಣ

kkkkkkkkkkkkk
Published on



ಮಂಗಳೂರು : ರಾಮಕೃಷ್ಣ ಮಿಷನ್ ಮಂಗಳೂರು ಇದರ ವತಿಯಿಂದ ನಗರದ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಸೆ.11ರಿಂದ 13ರವರೆಗೆ ಶಿಕ್ಷಣ ಮತ್ತು ಮಾನವ ಶ್ರೇಷ್ಠತೆ ವಿಷಯದ ಬಗ್ಗೆ ಶೈಕ್ಷಣಿಕ ವಿಚಾರ ಸಂಕಿರಣ ಹಾಗ ಸಂವಾದ ಕಾರ್ಯಕ್ರಮ
ನಡೆಯಲಿದೆ.
ಸೆ.11ರಂದು ಬೆಳಗ್ಗೆ 9.30ಕ್ಕೆ ವೃತ್ತಿಪರ ಕೋರ್ಸುಗಳ ವಿದ್ಯಾರ್ಥಿಗಳಿಗೆ ನಡೆಯುವ ಪ್ರಜ್ಞಾ ವಿಚಾರ ಸಂಕಿರಣವನ್ನು ಸಂಸದ ಕ್ಯಾ.ಬ್ರಿಜೇಶ್ ಚೌಟ ಉದ್ಘಾಟಿಸಲಿದ್ದಾರೆ. ಮಂಗಳೂರು ವಿ.ವಿ.ಯ ಕುಲಪತಿ ಪ್ರೊ.ಪಿ.ಎಲ್.ಧರ್ಮ , ಶಾಸಕ ಡಿ.ವೇದವ್ಯಾಸ ಕಾಮತ್ ಮುಖ್ಯ ಅತಿಥಿಗಳಾಗಿ
ಭಾಗವಹಿಸಲಿದ್ದಾರೆ.
ಸೆ.12ರಂದು ಬೆಳಗ್ಗೆ 9.30ಕ್ಕೆ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನಡೆಯುವ ಶ್ರದ್ಧಾ ವಿಚಾರ ಸಂಕಿರಣವನ್ನು ಸ್ಪೀಕರ್ ಯು.ಟಿ.ಖಾದರ್ ಉದ್ಘಾಟಿಸಲಿದ್ದಾರೆ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ , ಬಿಎಎಸ್‌ಎಫ್‌ನ ನಿರ್ದೇಶಕ ಶ್ರೀನಿವಾಸ ಪ್ರಾಣೇಶ್ ಮುಖ್ಯ ಅತಿಥಿಗಳಾಗಿ
ಭಾಗವಹಿಸಲಿದ್ದಾರೆ.
ಸೆ.13ರಂದು ಬೆಳಗ್ಗೆ 9.30ಕ್ಕೆ ಪದವಿ ವಿದ್ಯಾರ್ಥಿಗಳಿಗೆ ನಡೆಯುವ ಮೇಧಾ ವಿಚಾರ ಸಂಕಿರಣವನ್ನು ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಉದ್ಘಾಟಿಸಲಿದ್ದಾರೆ. ಎಂಎಲ್‌ಸಿ ಮಂಜುನಾಥ ಭಂಡಾರಿ, ಕೋಡ್‌ಕ್ರಾಫ್ಟ್ ಟೆಕ್ನಾಲಜೀಸ್‌ನ ಸಂಸ್ಥಾಪಕ ದೀಕ್ಷಿತ್ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾನ್ಪುರ ರಾಮಕೃಷ್ಣ ಮಿಷನ್‌ನ ಸ್ವಾಮಿ ಆತ್ಮಶ್ರದ್ಧಾನಂದಜಿ , ಹೈದರಾಬಾದ್‌ನ ಮಾನವ ಸಂಪನ್ಮೂಲ ಕಾರ್ಯನಿರ್ವಾಹಕ ಎಸ್.ಎನ್.
ಶ್ರೀನಿವಾಸ್, ಡಾ. ಚಂದ್ರಶೇಖರ್ ಜೆ ಸೊರಕೆ , ಪರಿಸರವಾದಿ ಅರ್ಜುನ್ ಮಸ್ಕರೇನ್ಹಸ್ , ಹಿರಿಯ ಕಾರ್ಯಕ್ರಮ ನಿರ್ವಾಹಕ ಸಂದೀಪ್ ವಸಿಷ್ಠ , ಡಾ. ವಿರೂಪಾಕ್ಷ ದೇವರಮನೆ , ಉದ್ಯಮಿ ರಾಘವೇಂದ್ರ ನೆಲ್ಲಿಕಟ್ಟೆ , ಎಂಆರ್‌ಪಿಎಲ್‌ನ ಎಚ್‌ಆರ್ ಸ್ಟೀವನ್ ಪಿಂಟೊ, ಮಾನಸಿಕ ಆರೋಗ್ಯ ಶಿಕ್ಷಣಾಧಿಕಾರಿ ಸುಭಾಷ್ ಎಚ್. ಜೆ. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಪೂರ್ವ ನೋಂದಣಿ ಮೂಲಕ ಈ ವಿಚಾರ ಸಂಕಿರಣಗಳಿಗೆ ಪ್ರವೇಶ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net