ದಾಖಲೆ ಮೊತ್ತಕ್ಕೆ ಮಾರಾಟವಾದ ಬಂಡೂರು ಟಗರು; ಬೆಲೆ ಎಷ್ಟು ಗೊತ್ತೇ?

tagaru
Published on

ಮಂಡ್ಯ: ಸುಮಾರು ಎರಡು ಲಕ್ಷ ರೂಪಾಯಿಗಳಿಗೆ ಮಾರಾಟವಾಗುವ ಮೂಲಕ ಬಂಡೂರು ಟಗರೊಂದು ದಾಖಲೆ ನಿರ್ಮಿಸಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕು ದೇವಿಪುರ ಗ್ರಾಮದಲ್ಲಿ ದಾಖಲೆ ಬೆಲೆಗೆ ಟಗರು ಮಾರಾಟವಾಗಿದ್ದು, ಸುತ್ತಮುತ್ತಲ ಗ್ರಾಮಸ್ಥರಲ್ಲಿ ಸಂಚಲನ ಮೂಡಿಸಿದೆ.

ಬರೋಬ್ಬರಿ 1 ಲಕ್ಷದ 91 ಸಾವಿರಕ್ಕೆ ಮಾರಟವಾಗುವ ಮೂಲಕ ಮಂಡ್ಯ ಜಿಲ್ಲೆಯಲ್ಲೇ ಅತ್ಯಧಿಕ ಬೆಲೆಗೆ ಟಗರು ಮಾರಾಟದ ದಾಖಲೆ ಸೃಷ್ಟಿಯಾಗಿದೆ. ದೇವಿಪುರ ಗ್ರಾಮದ ಸಣ್ಣಪ್ಪ ಟಗರು ಮಾರಿದ ರೈತ. 2 ವರ್ಷದ ಹಿಂದೆ 1 ಲಕ್ಷದ 5 ಸಾವಿರಕ್ಕೆ ಬಂಡೂರು ಟಗರು ಖರೀದಿಸಿದ್ದರು, ಸಣ್ಣಪ್ಪ. ಇದೀಗ ಅದೇ ಟಗರನ್ನು ಇಂದು 1 ಲಕ್ಷದ 91 ಸಾವಿರ ರೂಪಾಯಿಗೆ ಬಿದರಕೋಟೆಯ ಕೃಷ್ಣಗೌಡ ಖರೀದಿಸಿದ್ದಾರೆ.

ಗ್ರಾಮಸ್ಥರು ದಾಖಲೆ ಬೆಲೆಗೆ ಮಾರಾಟವಾದ ಟಗರಿನ ಮೆರವಣಿಗೆ ಮಾಡಿದರು. ನಂತರ ಗ್ರಾಮದ ಹಿರಿಯಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಟಗರನ್ನು ಖರೀದಿದಾರ ಕೃಷ್ಣಗೌಡರ ಜೊತೆ ಕಳುಹಿಸಿಕೊಟ್ಟರು. ಮಾರಾಟ ಬೆಲೆಯಲ್ಲಿ ದಾಖಲೆ ನಿರ್ಮಿಸಿದ ಟಗರನ್ನು ನೋಡಲು ಜನಗಳ ದಂಡು ಸೇರಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net