More

    ವರ್ಮಾ VS ಜಗನ್: ಟಿಕೆಟ್ ಬೆಲೆ ಬಗ್ಗೆ RGV ಕೇಳಿದ 22 ಪ್ರಶ್ನೆಗೆ ಸಿಎಂ ಬಳಿ ಉತ್ತರ ಇದ್ಯಾ?

    ಆಂಧ್ರ ಪ್ರದೇಶ: ದಿನ ಕಳೆದಂತೆ, ದಿನಕ್ಕೆ ಒಬ್ಬರು ಅಂತ ಸಿನಿ ತಾರೆಯರೂ ಜಗನ್ ಸರ್ಕಾರಕ್ಕೆ ನೇರವಾಗಿ ಚೀಮಾರಿ ಹಾಕುತ್ತಿದ್ದಾರೆ. ಹೌದು, ಆಂಧ್ರ ಪ್ರದೇಶದಲ್ಲಿ ಸಿನಿಮಾ ಟಿಕೆಟ್ ದರ ಇಳಿಕೆ ವಿಚಾರ ಎಲ್ಲರಿಗೆ ತಿಳಿದೆ ಇದೆ. ಆಂಧ್ರದಲ್ಲಿ ಈಗ ದಿನಸಿ ಅಂಗಡಿಗಳು ಮಾಡುತ್ತಿರುವ ಲಾಭ ಕೂಡ ಚಿತ್ರಮಂದಿರಗಳು ಮತ್ತು ಸಿನಿಮಾ ನಿರ್ಮಾಪಕರು ಮಾಡುತ್ತಿಲ್ಲ. 300ಕ್ಕೂ ಹೆಚ್ಚು ಚಿತ್ರಮಂದಿರಗಳು ಕ್ಲೋಸ್ ಆಗಿವೆ ಎನ್ನಲಾಗಿದೆ. ನಟ ನಾನಿ ಚಿತ್ರ ಶ್ಯಾಮ್ ಸಿಂಘ ರಾಯ್ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕರೂ, ಕಲೆಕ್ಷನ್ ವಿಚಾರದಲ್ಲಿ ಫುಲ್ ಲಾಸ್ ಎಂದು ಹೇಳಲಾಗುತ್ತಿದೆ. ಬೇರೆ ಸಿನಿಮಾತಂಡಗಳು ತಮ್ಮ ಚಿತ್ರವನ್ನು ಬಿಡುಗಡೆ ಮಾಡಲು ಹೆದರುತ್ತಿದ್ದಾರೆ. ಹೀಗಾಗಿ, ಇಡೀ ತೆಲುಗು ಚಿತ್ರರಂಗ ಜಗನ್ ಮೋಹನ್ ರೆಡ್ಡಿ ಸರ್ಕಾರದ ವಿರುದ್ಧವಾಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಇದೀಗ, ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಜಗನ್ ವಿರುದ್ಧ ಗುಡುಗಿದ್ದಾರೆ.
    ಹೌದು, ನಟ ಪವನ್ ಕಲ್ಯಾಣ್, ನಾನಿ, ಅಲ್ಲು ಅರ್ಜುನ್ ಸೇರಿ ಹಲವು ಸ್ಟಾರ್ ನಟರು ಜಗನ್ ಸರ್ಕಾರದ ವಿರುದ್ಧ ತುಂಬಾ ಕಟುವಾಗಿ ಮಾತಾಡಿದ್ದಾರೆ. ಅದೇ ಹಾದಿಯಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಜಗನ್ ಸರ್ಕಾರಕ್ಕೆ ಒಂದಲ್ಲ, ಎರಡಲ್ಲ, ಬದಲಿಗೆ ಬರೋಬ್ಬರಿ 22 ಪ್ರಶ್ನೆಗಳನ್ನು ಕೇಳಿ ತಬ್ಬಿಬ್ಬು ಮಾಡಿದ್ದಾರೆ. ಹಾಗಾದರೆ, ಆ 22 ಪ್ರಶ್ನೆಗಳು ಯಾವುವು…?
    1. ಉತ್ಪಾದಕರು ಹಾಗೂ ಗ್ರಾಹಕರ ನಡುವೆ ಇರುವ ಸಂಬಂಧ ಮಧ್ಯೆ ಸರ್ಕಾರಕ್ಕೆ ‘ಮೂಗು’ ತೊರಿಸುವ ಅಧಿಕಾರವಿದೆಯೇ?
    2. ಉತ್ಪಾದಕರು ಹಾಗೂ ಗ್ರಾಹಕರ ನಡುವೆ ಇರುವ ಸಂಬಂಧ ಮಧ್ಯೆ ಸರ್ಕಾರ ‘ಮೂಗು’ ತೊರಿಸುವುದು ಸರಿಯೇ?
    3. ಸಿನಿಮಾ ರಂಗಕ್ಕೆ ಮತ್ತು ಪ್ರೇಕ್ಷಕರ ನಡುವೆ ಯಾವುದೇ ಸಮಸ್ಯೆ ಇಲ್ಲವೆಂದರೆ, ಸರ್ಕಾರ ಯಾಕೆ ಮಧ್ಯೆ ಪ್ರವೇಶಿಸುತ್ತಿದೆ?
    4. ಉತ್ಪಾದಕ ಉತ್ಪಾದಿಸುವ ವಸ್ತುವಿಗೆ ಸರ್ಕಾರ ಯಾಕೆ ಬೆಲೆ ನಿಗದಿಪಡಿಸಬೇಕು?
    5. ಉತ್ಪಾದಕರ ಖರ್ಚನ್ನು ಪರಿಗಣಿಸದೆ ಸರ್ಕಾರ ಅದು ಹೇಗೆ ಬೆಲೆ ನಿಗದಿ ಮಾಡುತ್ತೆ?
    6. ಇದೇ ಸರ್ಕಾರವೇ, ಇತ್ತೀಚೆಗೆ ಸಿನಿಮಾಗಳು ಜನರಿಗೆ ಅವಶ್ಯಕ ಎಂದು ಹೇಳಿದೆ. ಹಾಗಿದ್ದರೆ, ಟಿಕೆಟ್ ಬೆಲೆ ಕಡಿಮೆ ಮಾಡಿ ಜನರಿಗೆ ಒಳಿತು ಮಾಡಿದಂತೆ, ನಿರ್ಮಾಪಕರಿಗೂ ಸಬ್ಸಿಡಿ ನೀಡಿ ಹೆಚ್ಚು ಹೆಚ್ಚು ಸಿನಿಮಾಗಳನ್ನು ನಿರ್ಮಿಸಲು ಸಹಾಯ ಮಾಡಬೇಕು ತಾನೆ?
    7. ರೇಷನ್ ಅಂಗಡಿಗಳು ಅಥವಾ ನ್ಯಾಯ ಬೆಲೆ ಅಂಗಡಿಗಳ ಮೂಲಕ ರೈತರಿಂದ ಬೆಳೆ ಖರೀದಿಸಿ ಕಡಿಮೆ ಬೆಲೆಗೆ ಜನರಿಗೆ ಮಾರಾಟ ಮಾಡುತ್ತಾರೆ. ಅದೇ ಮಾದರಿಯಲ್ಲಿಯೇ ಸರ್ಕಾರವೇ ನಿರ್ಮಾಪಕರಿಂದ ಸಿನಿಮಾವನ್ನು ನಮ್ಮ ಬೆಲೆಗೆ ಖರೀದಿಸಿ, ಅವರೇ ನ್ಯಾಯಬೆಲೆ ಚಿತ್ರಮಂದಿರಗಳನ್ನುತೆರೆದು ಜನರಿಗೆ ಕಡಿಮೆ ಬೆಲೆಗೆ ಸಿನಿಮಾವನ್ನು ತೋರಿಸಬಹುದು ಅಲ್ವಾ?
    8. ಟಿಕೆಟ್​ಗಳನ್ನು ಯಾವ ಬೆಲೆಗೆ ಸೇಲ್ ಮಾಡಬೇಕು ಎಂದು ನಿರ್ಮಾಪಕರು ಮತ್ತು ಚಿತ್ರಮಂದಿರಗಳು ನಿರ್ಧರಿಸಿದ್ದಾರೋ , ಅದೇ ಬೆಲೆಗೆ ಸರ್ಕಾರ ನಮ್ಮಿಂದ ಟಿಕೆಟ್ ಖರೀದಿ ಮಾಡಿ, ಬೇಕೆಂದರೆ ಜನರಿಗೆ ಉಚಿತವಾಗಿ ನೀಡಿದರೆ, ನಮಗೆ ನಮ್ಮ ದುಡ್ಡು ಉಳಿಯುತ್ತೆ, ಸರ್ಕಾರಕ್ಕೆ ಚುನಾವಣೆಯಲ್ಲಿ ಮತಗಳು ಸಿಗುತ್ತೆ. ಈ ಐಡಿಯಾ ಹೇಗಿದೆ?
    9. ಸ್ಟಾರ್ ನಟರನ್ನು ನೋಡಿಯೇ ಜನ ಸಿನಿಮಾ ನೋಡಲು ಬರುವುದು. ಅವರಿಗೆ ಎಷ್ಟು ಸಂಭಾವನೆ ಕೊಡಬೇಕು ಎಂಬುದು ನೀವು ಹೇಗೆ ಹೇಳುತ್ತೀರಿ?
    10. ಕೇವಲ ಸ್ಟಾರ್ ನಟ ಎಂಬ ಕಾರಣಕ್ಕೆ ಒಬ್ಬ ವ್ಯಕ್ತಿಯ ಸಂಭಾವನೆ ನಿರ್ಧಾರ ಮಾಡಲಾಗುವುದಿಲ್ಲ. ಆ ಸ್ಟಾರ್ ನಟನ ಈ ಹಿಂದಿನ ಸಿನಿಮಾಗಳ ಗಳಿಕೆಯನ್ನು ಪರಿಗಣಿಸಿ ನಿರ್ಮಾಪಕರು ನಟನ ಸಂಭಾವನೆಯನ್ನು ನಿರ್ಧರಿಸುತ್ತಾರೆ. ಸಂಭಾವನೆ ಅನ್ನುವುದು ಕೊಡುವವರ ಮತ್ತು ಪಡೆಯುವವರ ಇಷ್ಟ. ಈ ವ್ಯವಹಾರವನ್ನು ಪ್ರಶ್ನಿಸಲು ನೀವು ಯಾರು?
    11. ರೈತರ ಬೆಳೆಗೆ ನೀವೇ ಬೆಲೆ ನಿರ್ಧಾರ ಮಾಡುತ್ತಿರುವುದರಿಂದ ಇಂದು ಅವರು ಸಾಯುತ್ತಿದ್ದಾರೆ. ಹಾಗೆ, ನಾವು ಸಾಯ ಬೇಕೆ?
    12. ಸಣ್ಣ ಸಿನಿಮಾಗಳಿಗೆ ಮೋಸವಾಗುತ್ತಿದೆ ಎನ್ನುತ್ತೀರಿ? ಹಾಗಾದರೆ, ದೊಡ್ಡ ಬಜೆಟ್ ಸಿನಿಮಾಗಳಿಗೆ ಅನ್ಯಾಯವಾಗುತ್ತಿಲ್ಲವೇ?
    13. ಒಂದು ಸಿನಿಮಾ ಚೆನ್ನಾಗಿರುತ್ತೆ. ಮತ್ತೊಂದು ಚೆನ್ನಾಗಿರಲ್ಲ. ಆಗ, ಎರಡೂ ಸಿನಿಮಾಗಳಿಗೆ ಒಂದೇ ಬೆಲೆಗೆ ಟಿಕೆಟ್ ಸೇಲ್ ಮಾಡುವುದು ನ್ಯಾಯವೇ?
    14. ಚೆನ್ನಾಗಿರುವು ಸಿನಿಮಾಗಳಿಗೆ ಅಥವಾ ಚೆನ್ನಾಗಿರದ ಸಿನಿಮಾಗಳಿಗೆ ಬೆಲೆ ಎಷ್ಟು ಅಂತ ನಿಮಗೆ ನಿರ್ಧರಿಸಲು ಸಾಧ್ಯವೇ?
    15. ಊಟ ಮಾಡಿ, ಸ್ಟಾರ್ ಹೋಟೆಲ್​​ನಲ್ಲಿ ಊಟ ಚೆನ್ನಾಗಿಲ್ಲ ಅಂತ ಬಿಲ್ ಕಟ್ಟದೆ ಬರುಲು ಸಾಧ್ಯವೇ? ಹಾಗೆ, ಇಷ್ಟವಾಗದ ಸಿನಿಮಾದಿಂದ ಪ್ರೇಕ್ಷಕರಿಗೂ ಲಾಸ್ ಆದಂಗೆ. ನೀವು ಪ್ರೇಕ್ಷಕರಿಗೆ ಆಗ ದುಡ್ಡು ವಾಪಸ್ ಕೊಡುತ್ತೀರಾ?
    16. ಒಂದು ವೇಳೆ ಹಣ ವಾಪಸ್ ಕೊಟ್ಟರೆ, ಸರ್ಕಾರಕ್ಕೂ ಲಾಸ್ ಮತ್ತು ನಿರ್ಮಾಪಕನಿಗೂ ಲಾಸ್. ಜೊತೆಗೆ, ಪ್ರೇಕ್ಷಕರು ನೋಡಿದ ಸಿನಿಮಾವನ್ನು ನಮಗೆ ವಾಪಸ್ ಕೊಡಲು ನಿಮಗೆ ಸಾಧ್ಯವೇ?
    17. ಸಾವಿರಾರು ಭರವಸೆಗಳನ್ನು ಕೊಟ್ಟು ಅಧಿಕಾರಕ್ಕೆರುವ ರಾಜಕಾರಣಿಗಳು, ಜನರ ಭರವಸೆಗಳನ್ನು ಈಡೇರಿಸಲಿಲ್ಲವೆಂದರೆ ರಾಜಕಾರಣಿಗಳು ತಮ್ಮ ಪದವಿಗಳಿಗೆ ರಾಜೀನಾಮೆ ಕೊಡುತ್ತಾರೆ?
    18. ನಾವು ಸರ್ಕಾರವನ್ನು ಕೆಳಗಿಳಿಸಿ ಎಂದರೆ ಇಳಿಸುತ್ತಾರೆಯೇ?
    19. ಸರ್ಕಾರದ ಬಳಿಯೇ ದೂರದರ್ಶನ ಚಾನೆಲ್ ಇದೆ. ಹಾಗಾಗಿ, ಸರ್ಕಾರವೇ ‘ಬಾಹುಬಲಿ’ಯ ಅಪ್ಪನಂತಹಾ ಸಿನಿಮಾಗಳನ್ನು ನಿರ್ಮಾಣ ಮಾಡಿ, ದೂರದರ್ಶನದಲ್ಲಿಯೇ ಪ್ರಸಾರ ಮಾಡಬಹುದು. ಯಾಕೆ ಸಿನಿರಂಗದವರು ಮೇಲೆ ಚಿತ್ರ ತೆಗೆಯಲು ಅವಲಂಬಿತರಾಗುವುದು?
    20. ಯಾಕೆ ಎಲ್ಲಾ ಸಿನಿಮಾಗಳು ಒಂದೇ ರೀತಿ ಬಜೆಟ್ ಇರಲ್ಲ ಅಂತ ಕೇಳುತ್ತೆ ಸರ್ಕಾರ. ಸಣ್ಣ ಸಿನಿಮಾಗಳಿಗೆ 30 ರಿಂದ 40 ಕಲಾವಿದರು ಕೆಲಸ ಮಾಡುತ್ತಾರೆ. ದೊಡ್ಡ ಸಿನಿಮಾಗಳಿಗೆ ಬಹಳಷ್ಟು ಜನ ಕೆಲಸ ಮಾಡುತ್ತಾರೆ. ಅಷ್ಟು ಜನಕ್ಕೆ ಅವರು ಸಂಭಾವನೆ ಕೊಡಬೇಕು ಅಲ್ವಾ?
    21. ಸಿನಿಮಾ ಪ್ರೊಡಕ್ಷನ್ ವರ್ಕರ್ಸ್​ಗೆ ಒಬ್ಬೊಬ್ಬರಿಗೆ ಒಂದು ಸಂಭಾವನೆ ಇರುತ್ತೆ? ಉತ್ತಮವಾಗಿ ಕೆಲಸ ಮಾಡಿದವನಿಗೆ ಉತ್ತಮವಾಗಿಯೇ ಸಂಭಾವನೆ ನೀಡಬೇಕು ಅಲ್ವಾ? ಸರ್ಕಾರದಲ್ಲಿ ಎಲ್ಲಾ ಅಧಿಕಾರಿಗಳಿಗೆ ಒಂದೇ ಸಂಬಳ ಇರುತ್ತೆ?
    22. ಸರ್ಕಾರದ ಈ ಜನಪರ ನಿರ್ಧಾರ ಕೇವಲ ಚಿತ್ರರಂಗದ ವಿಷಯದಲ್ಲಿ ಯಾಕೆ? ಬೀದಿ ಬದಿ ಇಡ್ಲಿ 5 ರೂ.ಗೆ ಸಿಗುತ್ತೆ. ಮತ್ತೆ ನಾವು ಯಾಕೆ ಸ್ಟಾರ್ ಹೋಟೆಲ್​​ಗಳಲ್ಲಿ ಅದೇ ಇಡ್ಲಿಗೆ 500 ರೂ. ಕೊಡಬೇಕು?
    ಸದ್ಯ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೇಳಿರುವ ಪ್ರಶ್ನೆಗಳಿಗೆ ಒಂದಕ್ಕಾದರೂ ಉತ್ತರ ಸಿಗುವುದಿಲ್ಲ ಎಂಬ ಅಭಿಪ್ರಾಯಗಳು ಬಹಳಷ್ಟು ಕಡೆ ಕೇಳಿಬರುತ್ತಿವೆ. ಹೀಗಿರುವಾಗ, ಜಗನ್ ಸರ್ಕಾರ ಅಥವಾ ಜಗನ್ ಸರ್ಕಾರದ ಸಚಿವರು ಯಾರಾದರೂ ರಾಮ್ ಗೋಪಾಲ್ ವರ್ಮಾಗೆ ಉತ್ತರ ಕೊಡುತ್ತಾರಾ ಎಂದು ಕಾದು ನೋಡಬೇಕಿದೆ.

    ನಮಸ್ತೆ ಘೋಷ್ಟ್​ ಚಿತ್ರಕ್ಕೂ ಸುದೀಪ್​ಗೂ ಸಂಬಂಧವಿಲ್ಲ: ಸುಳ್ಳು ಸುದ್ದಿ ಬೆನ್ನಲ್ಲೇ ಚಿತ್ರತಂಡದಿಂದ ಸ್ಪಷ್ಟನೆ

    ಮುಖ ತೋರಿಸ್ರೀ.. ಅಂತ ಅದಿತಿ ಕೇಳಿದ್ರೂ ಭಾವಿಪತಿ ಕಿವಿಗೊಡಲಿಲ್ಲ! ವಿಡಿಯೋ ವೈರಲ್

    ‘ಐ ಲವ್ ಯೂ ರಮ್ಯಾ’, ಪ್ಲೀಸ್ ಈ ಒಂದು ಬೇಡಿಕೆ ಈಡೇರಿಸು ಎಂದ ರಚ್ಚು! ಏನದು…?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts