More

    ಅಮಿತಾಬ್​ ಚಿತ್ರಕ್ಕೆ ಅಜಯ್​ ದೇವ್​ಗನ್ ಆ್ಯಕ್ಷನ್​ ಕಟ್​; ರಾಕುಲ್​ ಪ್ರೀತ್​ ನಾಯಕಿ

    ಮುಂಬೈ: ಬಾಲಿವುಡ್​ ನಟ ಅಜಯ್​ ದೇವಗನ್​ ನಿರ್ದೇಶನಕ್ಕಿಳಿದ ಬಗ್ಗೆ ಇತ್ತೀಚೆಗಷ್ಟೇ ಹೇಳಿಕೊಂಡಿದ್ದರು. ಆ ಚಿತ್ರದಲ್ಲಿ ಬಾಲಿವುಡ್​ ಬಿಗ್​ ಬಿ ಅಮಿತಾಬ್​ ಬಚ್ಚನ್​ ನಟಿಸಲಿದ್ದಾರೆ ಎಂಬ ವಿಚಾರವನ್ನೂ ತಂಡ ಹೇಳಿಕೊಂಡಿತ್ತು. ಅದರಂತೆ ಇದೀಗ, ಆ ಸಿನಿಮಾ ಬಗ್ಗೆ ಹೊಸದಾದ ಮಾಹಿತಿ ಲಭ್ಯವಾಗಿದೆ. ನಾಯಕಿಯಾಗಿ ರಾಕುಲ್​ ಪ್ರೀತ್​ ಎಂಟ್ರಿಕೊಟ್ಟಿದ್ದಾರೆ.

    ಇದನ್ನೂ ಓದಿ: ಶೂಟಿಂಗ್​ ಶುರುವಾಗುವುದಕ್ಕೂ ಮುನ್ನವೇ ‘ಆದಿಪುರುಷ್’ ರಿಲೀಸ್ ದಿನಾಂಕ ಪ್ರಕಟ

    ಈಗಾಗಲೇ ದಕ್ಷಿಣ ಭಾರತದ ಸಿನಿಮಾರಂಗದ ಜತೆಗೆ ಬಾಲಿವುಡ್​ನಲ್ಲಿಯೂ ಹೆಸರು ಮಾಡುತ್ತಿದ್ದಾರೆ ನಟಿ ರಾಕುಲ್​ ಪ್ರೀತ್​. ಸದ್ಯ ಹಿಂದಿ ಸಿನಿಮಾಗಳಲ್ಲಿಯೇ ಹೆಚ್ಚು ತೊಡಗಿಸಿಕೊಂಡಿರುವ ಅವರು, ಇದೀಗ ಅಮಿತಾಬ್​ ಬಚ್ಚನ್ ಜತೆಗೆ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ. ಇದೇ ಚಿತ್ರದಲ್ಲಿ ಅಜಯ್​ ದೇವಗನ್​ ಸಹ ನಟಿಸುತ್ತಿರುವುದು ವಿಶೇಷ.

    ಇದನ್ನೂ ಓದಿ: ಭೋಜಪುರಿಗೆ ಹರ್ಷಿಕಾ; ಲಂಡನ್​ನಲ್ಲಿ ಇಡೀ ಚಿತ್ರದ ಚಿತ್ರೀಕರಣ

    ‘ಮೇಡೇ’ ಶೀರ್ಷಿಕೆಯ ಈ ಸಿನಿಮಾದಲ್ಲಿ ಸುದೀರ್ಘ 13 ವರ್ಷಗಳ ಬಳಿಕ ಅಮಿತಾಬ್ ಬಚ್ಚನ್ ಮತ್ತು ಅಜಯ್​ ದೇವಗನ್​ ಒಂದಾಗುತ್ತಿದ್ದಾರೆ. ಇತ್ತ ‘ದೇ ದೇ ಪ್ಯಾರ್ ದೇ’ ಸಿನಿಮಾದಲ್ಲಿ ಅಜಯ್​ ಜತೆ ರಾಕುಲ್​ ನಟಿಸಿದ್ದರು. ಇದೀಗ ಮೇಡೇ ಚಿತ್ರದಲ್ಲಿ ಮತ್ತೆ ಜತೆಯಾಗಿದ್ದಾರೆ. ಆದರೆ, ರಾಕುಲ್​ಗಿದು ಅಮಿತಾಬ್​ ಜತೆ ನಟಿಸುತ್ತಿರುವ ಮೊದಲ ಸಿನಿಮಾ. ನಟನೆ, ಮತ್ತು ನಿರ್ಮಾಣದ ಜತೆಗೆ ನಿರ್ದೇಶನದ ಜವಾಬ್ದಾರಿಯನ್ನು ಅಜಯ್ ಹೊತ್ತಿದ್ದು, ಡಿಸೆಂಬರ್​ ತಿಂಗಳಲ್ಲಿ ಹೈದರಾಬಾದ್​ನಲ್ಲಿ ಈ ಚಿತ್ರದ ಚಿತ್ರೀಕರಣ ಶುರುವಾಗಲಿದೆ. (ಏಜೆನ್ಸೀಸ್​)

    ಪಟಾಕಿ ನಿಷೇಧ ವಿಚಾರ: ಐಪಿಎಸ್​ ಅಧಿಕಾರಿ ಡಿ. ರೂಪಾ ಟ್ವಿಟ್​ಗೆ ಕಂಗನಾ ಟಾಂಗ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts