More

    ರಾಕುಲ್ ಪ್ರೀತ್ ಸಿಂಗ್ ಜೊತೆ ಹನಿಮೂನ್ ಪ್ಲಾನ್: ರಣಬೀರ್​ ಫಾಲೋ ಮಾಡುತ್ತಿರುವ ಜಾಕಿ..!

    ಮುಂಬೈ: ಇತ್ತೀಚೆಗಷ್ಟೇ ಟಾಲಿವುಡ್ ಸ್ಟಾರ್ ಹೀರೋಯಿನ್ ರಾಕುಲ್ ಪ್ರೀತ್ ಸಿಂಗ್ ತನ್ನ ಗೆಳೆಯ, ಬಾಲಿವುಡ್ ನಿರ್ಮಾಪಕ ಜಾಕಿ ಭಗ್ನಾನಿ ಅವರನ್ನು ಮದುವೆಯಾಗಿದ್ದು ತಿಳಿದ ಸಂಗತಿಯೇ. ಆದರೆ ಮದುವೆಯಾಗಿ ವಾರ ಕಳೆದಿರುವುದರಿಂದ ಈ ನೆಟ್​ ಮತ್ತು ಬಾಲಿವುಡ್​ನಲ್ಲಿ ಇವರ ಹನಿಮೂನ್​ ಯಾವಾಗ? ಹೇಗೆ ನಡೆಯಲಿದೆ ಎಂಬುದರ ಕುರಿತು ಚರ್ಚೆ ನಡೆಯುತ್ತಿದೆ. ಇನ್ನು ಜಾಕಿ ಭಗ್ನಾನಿ ಈ ವಿಷಯದಲ್ಲಿ ರಣಬೀರ್ ಕಪೂರ್ ನನ್ನು ಫಾಲೋ ಮಾಡುತ್ತಿದ್ದಾರಂತೆ. ಹಾಗಾದರೆ ಆ ದೊಡ್ಡ ಪ್ಲಾನ್ ಏನು ಎಂಬುದು ಬಾಲಿವುಡ್ ವಲಯದಲ್ಲಿ ಸಂಚಲನ ಮೂಡಿಸಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ಇದನ್ನೂ ಓದಿ: ಬಯಲಾಯ್ತು ಸಾನಿಯಾ ಶೊಯೆಬ್ ಗೆ ಹೇಗೆ ಡಿವೋರ್ಸ್ ಕೊಟ್ಟಿದ್ದು ಅಂತ..! ಖುಲಾ ತಲಾಖ್ ಎಂದರೇನು ಗೊತ್ತಾ?

    ಬಾಲಿವುಡ್ ಸ್ಟಾರ್ ನಿರ್ಮಾಪಕರಲ್ಲಿ ತನಗೊಂದು ವಿಶೇಷ ಇಮೇಜ್ ಕ್ರಿಯೇಟ್ ಮಾಡಿಕೊಂಡಿರುವ ಜಾಕಿ ನಿರ್ಮಾಪಕ ಮಾತ್ರವಲ್ಲದೆ ನಟ ಕೂಡ. ಈ ಹುಡುಗ 2011ರಿಂದ ಟಾಲಿವುಡ್ ಸ್ಟಾರ್ ಹೀರೋಯಿನ್ ರಾಕುಲ್ ಪ್ರೀತ್ ಸಿಂಗ್ ರನ್ನು ಪ್ರೀತಿಸುತ್ತಿದ್ದ. ದಶಕದ ಹಿಂದೆಯೇ ಪ್ರೀತಿ ಶುರುವಾಗಿದ್ದರೂ, 2021ರಲ್ಲಿ ಬಹಿರಂಗಪಡಿಸಿದ್ದರು.

    ಈ ಪ್ರೇಮಿಗಳು ಇತ್ತೀಚೆಗೆ ಗೋವಾದ ರೆಸಾರ್ಟ್ ಒಂದರಲ್ಲಿ ಮದುವೆಯಾದರು. ಕುಟುಂಬದವರು, ಸಂಬಂಧಿಕರು ಮತ್ತು ಸೆಲೆಬ್ರಿಟಿಗಳ ನಡುವೆ ಈ ಜೋಡಿ ಏಳು ಹೆಜ್ಜೆ ಹಾಕಿದರು. ಪ್ರಧಾನಿ ಮೋದಿಯವರು ಸಹ ಶುಭ ಹಾರೈಸಿದ್ದು ಇವರ ಮದುವೆ ಬಗ್ಗೆ ಇಡೀ ದೇಶವೇ ಮಾತನಾಡುವಂತೆ ಮಾಡಿತು.

    ವಿಷಯ ಇದಲ್ಲ, ಈ ದಂಪತಿ ಬಗ್ಗೆ ಸುದ್ದಿಯೊಂದು ಹೊರಬಿದ್ದಿದೆ. ಅದು ಇವರ ಹನಿಮೂನ್ ಟ್ರಿಪ್ ಪ್ಲಾನ್ ಮಾಡುತ್ತಿರುವುದು. ಹನಿಮೂನ್ ನೆನಪು ಶಾಶ್ವತವಾಗಿ ಉಳಿಯಲು ವಿವಿಧ ರೀತಿಯಲ್ಲಿ ಯೋಜಿಸಿದ್ದಾರೆ ಎಂದು ವರದಿಯಾಗಿದೆ.

    ಹನಿಮೂನ್ ವಿಚಾರದಲ್ಲಿ ಜಾಕಿಯು ರಣಬೀರ್ ಕಪೂರ್ ನನ್ನು ಫಾಲೋ ಮಾಡುತ್ತಿದ್ದಾರಂತೆ. ಹನಿಮಲ್​ ಚಿತ್ರದಲ್ಲಿ, ರಣಬೀರ್, ರಶ್ಮಿಕಾ ಹನಿಮೂನ್ ವಿಮಾನದಲ್ಲಿ ಯೋಜಿಸಿದ್ದರು. ಈ ಸಿನಿಮಾ ನೋಡಿದ ಬಳಿಕ ಜಾಕಿ ಮದುವೆಗೂ ಮುನ್ನವೇ ರಾಕುಲ್ ಗೆ ಈ ವಿಚಾರ ತಿಳಿಸಿದ್ದು, ನಾವೂ ಕೂಡ ಹನಿಮೂನ್ ನ್ನು ವೆರೈಟಿಯಾಗಿ ಪ್ಲಾನ್ ಮಾಡಿಕೊಳ್ಳೋಣ ಎಂದಿದ್ದಾರಂತೆ.

    ಇದರಲ್ಲಿ ಷ್ಟರಮಟ್ಟಿಗೆ ಸತ್ಯವಿದೆಯೋ ಗೊತ್ತಿಲ್ಲ, ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಬಾಲಿವುಡ್ ವಲಯದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಸದ್ಯ ರಾಕುಲ್ ಪ್ರೀತ್ ಸಿಂಗ್ ಅಕ್ಷಯ್ ಕುಮಾರ್ ಜೊತೆ ಸಿನಿಮಾ ಮಾಡುತ್ತಿದ್ದಾಳೆ. ಜಾಕಿ ಭಗ್ನಾನಿ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಜೊತೆ ಬಡೇ ಮಿಯಾನ್ ಚೋಟೆ ಮಿಯಾನ್ ಎಂಬ ಸಿನಿಮಾವನ್ನೂ ನಿರ್ಮಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆದ ನಂತರ ಹನಿಮೂನ್ ಟ್ರಿಪ್ ಪ್ಲಾನ್ ಮಾಡಲು ಬಯಸಿದ್ದಾರಂತೆ. ಈ ಎಲ್ಲ ಕಾರಣಗಳಿಗೆ ಈ ಸುದ್ದಿ ಬಾಲಿವುಡ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ಚಾಲಕನಿಲ್ಲದಿದ್ರೂ 100ಕಿಮೀ ವೇಗದಲ್ಲಿ ಚಲಿಸಿತು ಗೂಡ್ಸ್​ ರೈಲು!! ಭಾರತದಲ್ಲಿ ಇದೇ ಮೊದಲು..ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts