blank

ವಿದೇಶದಲ್ಲಿ ನನ್ನ ಜೀವನ ಭಿಕ್ಷುಕಿಯಂತೆ ಆಗಿಬಿಟ್ಟಿದೆ! ಕಣ್ಣೀರಿಟ್ಟ Rakhi Sawant

blank

Rakhi Sawant :  ಭಾರತದಲ್ಲಿ  ಬಾಲಿವುಡ್​​ ನಟಿ ರಾಖಿ ಸಾವಂತ್​ಗೆ ಬಂಧನದ ಭೀತಿ ಇರುವ ಕಾರಣ ಅವರು ವಿದೇಶಕ್ಕೆ ಪಲಾಯನ ಮಾಡಿದ್ದು, ಅಲ್ಲಿ ಭಿಕ್ಷುಕಿಯಂತೆ ಬದುಕುತ್ತಿದ್ದಾರಂತೆ. ಈ ಕುರಿತಾದ ಸುದ್ದಿಯೊಂದು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗುತ್ತಿದೆ.

ರಾಖಿ ಸಾವಂತ್ ಮಾಜಿ ಪತಿ ಮೈಸೂರಿನ ಆದಿಲ್, ರಾಖಿ ವಿರುದ್ಧ ವಂಚನೆ, ಕಳ್ಳತನ, ಮಾನಹಾನಿ ಇನ್ನಿತರೆ ದೂರುಗಳನ್ನು ದಾಖಲಿಸಿದ್ದು, ಭಾರತಕ್ಕೆ ಬಂದರೆ ಪೊಲೀಸರು ತಮ್ಮನ್ನು ಬಂಧಿಸುವ ಸಾಧ್ಯತೆ ಇರುವ ಕಾರಣದಿಂದಾಗಿ ರಾಖಿ ಸಾವಂತ್ ದುಬೈ ಅಲ್ಲಿ ಕಳೆದ ಕೆಲ ವಾರಗಳಿಂದಲೂ ವಾಸವಿದ್ದು, ಅವರೇ ಹೇಳಿರುವಂತೆ ಹಣ ಇಲ್ಲದ ಕಾರಣ ಭಿಕ್ಷುಕಿಯಂತೆ ಜೀವನ ನಡೆಸುತ್ತಿದ್ದಾರಂತೆ.

2022 ರ ಮೇ ತಿಂಗಳಲ್ಲಿ ರಾಖಿ ಸಾವಂತ್ ಹಾಗೂ ಮೈಸೂರಿನ ಉದ್ಯಮಿ ಆದಿಲ್ ಖಾನ್ ವಿವಾಹ ಆಗಿದ್ದರು. ಆದಿಲ್, ಐಶಾರಾಮಿ ಕಾರುಗಳನ್ನು ರಾಖಿಗೆ ಉಡುಗೊರೆಯಾಗಿ ಕೊಟ್ಟಿದ್ದರು. ಆದರೆ ಮದುವೆಯಾದ ಕೆಲವೇ ದಿನಕ್ಕೆ ಆದಿಲ್ ವಿರುದ್ಧ ರಾಖಿ ಸಾವಂತ್ ದೂರು ನೀಡಿದ್ದರು. ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ಇದರಿಂದಾಗಿ ಆದಿಲ್ ಕೆಲ ಸಮಯ ಜೈಲಿನಲ್ಲಿ ಸಮಯ ಕಳೆಯಬೇಕಾಯ್ತು.

ಜೈಲಿನಿಂದ ಹೊರಬಂದ ಬಳಿಕ ಆದಿಲ್, ರಾಖಿ ವಿರುದ್ಧ ವಂಚನೆ, ಕಳ್ಳತನ ಇನ್ನಿತರೆ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದರ ನಡುವೆ ರಾಖಿ ಸಾವಂತ್ ದುಬೈಗೆ ಪಲಾಯನಗೊಂಡಿದ್ದಾರೆ. ಇದೀಗ ವಿದೇಶದಲ್ಲಿ ಭಿಕ್ಷುಕಿಯಂತೆ ಜೀವನ ನಡೆಸುತ್ತಿದ್ದೇನೆಂದು ಕಣ್ಣೀರು ಹಾಕುತ್ತಿದ್ದಾರೆ.

ರಾಖಿ ಮಾತನಾಡಿ, ‘ಎಷ್ಟು ದಿನ ನಾನು ಸಹಾಯಕ್ಕೆ ಕೇಳುತ್ತಾ ಇರಲಿ, ಎಷ್ಟು ಜನರನ್ನು ಕೇಳಲಿ, ನನ್ನ ಜೀವನ ಭಿಕ್ಷುಕಿಯಂತೆ ಆಗಿಬಿಟ್ಟಿದೆ. ನನಗೆ ಭಾರತೀಯ ಕಾನೂನಿನ ಮೇಲೆ ವಿಶ್ವಾಸವಿದೆ, ನಾನು ಭಾರತಕ್ಕೆ ಮರಳಲಿದ್ದೇನೆ. ಸಲ್ಮಾನ್ ಖಾನ್, ಫರ್ಹಾನ್ ಖಾನ್, ಶಾರುಖ್ ಖಾನ್ ಅವರ ಸಹಾಯವನ್ನೇಕೆ ಕೇಳಬಾರದು ಎಂಬ ಮಾಧ್ಯಮದವರ ಪ್ರಶ್ನೆಗೆ, ‘ನಾನು ಯಾರನ್ನೂ ಸಹ ಸಹಾಯಕ್ಕಾಗಿ ಕೇಳುವುದಿಲ್ಲ. ಇದು ನನ್ನ ಯುದ್ಧ ನಾನೇ ಹೋರಾಡುತ್ತೇನೆ. ಶಾರುಖ್, ಸಲ್ಮಾನ್ ಅವರನ್ನು ಕೇಳಿದೆ ಎಂದರೆ ಕೇವಲ ಒಂದು ನಿಮಿಷದಲ್ಲಿ ನನಗೆ ಜಾಮೀನು ಕೊಡಿಸಬಲ್ಲರು, ಆದರೆ ನಾನು ಹಾಗೆ ಮಾಡುವುದಿಲ್ಲ, ಈ ಯುದ್ಧವನ್ನು ನಾನೇ ಹೋರಾಡುತ್ತೀನಿ’ ಎಂದಿದ್ದಾರೆ ರಾಖಿ.

TAGGED:
Share This Article

ಋತುಸ್ರಾವದ ಸಮಯದಲ್ಲಿ ಮೊಸರು ಸೇವಸಬಹುದೇ.. ಬೇಡವೇ; ಗೊಂದಲಕ್ಕೆ ಇಲ್ಲಿದೆ ಪರಿಹಾರ | Health Tips

ಮೊಸರು ಅಥವಾ ಉಪ್ಪಿನಕಾಯಿ ತಿನ್ನುವುದರಿಂದ ಋತುಸ್ರಾವದ ಸಮಯದಲ್ಲಿ ಸಮಸ್ಯೆಯಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಯಾವುದೇ ಆಹಾರವು…

ಉಸಿರಾಟದ ವ್ಯಾಯಾಮ ಗೊರಕೆ ಸಮಸ್ಯೆಗೆ ಪರಿಹಾರ; ಇದು ಸುಳ್ಳೋ-ಸತ್ಯವೋ.. ವೈದ್ಯರು ಹೇಳೋದೇನು? | Health Tips

ನಿದ್ರಿಸುವಾಗ ಗೊರಕೆ ಹೊಡೆಯುವ ವ್ಯಕ್ತಿಗೆ ಮಾತ್ರವಲ್ಲದೆ ಸುತ್ತಮುತ್ತಲಿನವರಿಗೂ ತೊಂದರೆಯ ಅನುಭವವಾಗುತ್ತದೆ. ಸಾಮಾನ್ಯವಾಗಿ ಇದನ್ನು ಲಘುವಾಗಿ ತೆಗೆದುಕೊಳ್ಳಲಾಗುತ್ತದೆ.…

Vastu Tips : ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ!ಸಾಲದ ಸುಳಿಗೆ ಸಿಲುಕುತ್ತೀರಿ..!

Vastu Tips: ದೃಷ್ಟ ಚೆನ್ನಾಗಿದ್ದರೆ ಕೆಲವರು ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುತ್ತಾರೆ. ಕೆಲವರು  ಐಷಾರಾಮಿ ಜೀವನ ನಡೆಸಲು ಕಷ್ಟಪಡುತ್ತಾರೆ. ಅವರು…