More

    ನಾಯಕಿಯಾಗುವಷ್ಟು ಪ್ರತಿಭೆ ತನಗಿಲ್ಲ ಎಂದು ರಾಖಿ ಹೇಳಿದ್ದೇಕೆ?

    ಮುಂಬೈ: ಬಾಲಿವುಡ್​ ನಟಿ ರಾಖಿ ಸಾವಂತ್​ ಯಾವಾಗಲೂ ತಮ್ಮ ನೇರ ಮಾತುಗಳಿಂದ ಸದಾ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ತಮ್ಮ ಬಗ್ಗೆಯೇ ಮಾತನಾಡಿಕೊಂಡಿದ್ದು, ನಾಯಕಿಯಾಗುವಷ್ಟು ಪ್ರತಿಭೆ ತನಗಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಇಷ್ಟಕ್ಕೂ ರಾಖಿ ಹಾಗೆ ಹೇಳಿದ್ದು ಯಾಕೆ? ಅದಕ್ಕೆ ಇಲ್ಲಿದೆ ಉತ್ತರ.

    ಇದನ್ನೂ ಓದಿ: ಟೆಲಿವಿಷನ್ ಸಂಘದವರಿಗೆ ಮೂರು ದಿನಗಳ ಕಾಲ ಉಚಿತ ಲಸಿಕೆ

    ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಎಲ್ಲರಿಗೂ ಲೀಡ್​ ಪಾತ್ರದಲ್ಲಿ ಕಾಣಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಕೆಲವರು ನಾಯಕಿಯರಾದರೆ, ಇನ್ನೂ ಕೆಲವರು ಪೋಷಕ ಪಾತ್ರಗಳಿಗೆ ಅಥವಾ ಐಟಂ ಡ್ಯಾನ್ಸ್​ ಮಾಡುವುದಕ್ಕೆ ಸೀಮಿತವಾಗುತ್ತಾರೆ. ನನಗೆ ನಾಯಕಿಯಾಗುವಷ್ಟು ಪ್ರತಿಭೆಯಾಗಲೀ ಅಥವಾ ಒಂದು ಚಿತ್ರವನ್ನು ಮುನ್ನಡೆಸುವ ಶಕ್ತಿಯಾಗಲೀ ಖಂಡಿತಾ ಇಲ್ಲ. ಹಾಗಾಗಿ ಐಟಂ ಡ್ಯಾನ್ಸ್​ ಮಾಡುವುದಕ್ಕೆ ಸೀಮಿತವಾದೆ ಎಂದು ಅವರು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ವೈರಸ್​ಗೆ ಅಗೌರವ ತೋರಿದರೆ ಬಹಳಷ್ಟು ಜನರಿಗೆ ಬೇಸರವಾಗುತ್ತೆ: ಕಂಗನಾ

    ಚಿತ್ರಗಳಲ್ಲಿ ಐಟಂ ಡ್ಯಾನ್ಸರ್​ ಆಗಿ ಗುರುತಿಸಿಕೊಂಡಿರುವುದಕ್ಕೆ ರಾಖಿಗೆ ಬೇಸರವಿಲ್ಲವಂತೆ. ಅದರಿಂದ ನನಗೆ ಅನ್ನ ಸಿಕ್ಕಿದೆ ಮತ್ತು ನನ್ನ ಮನೆಯವರನ್ನು ನಾನು ಚೆನ್ನಾಗಿ ನೋಡಿಕೊಂಡಿದ್ದೇನೆ. ಹಾಗಾಗಿ ಐಟಂ ಡ್ಯಾನ್ಸರ್​ ಆಗಿದ್ದಿಕ್ಕೆ ನನಗೆ ಯಾವುದೇ ಬೇಸರವಿಲ್ಲ. ಬದಲಿಗೆ, ನನಗೆ ಇಂಥದ್ದೊಂದು ವೇದಿಕೆ ಸಿಕ್ಕಿದ್ದಿಕ್ಕೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.

    ಜೂನಿಯರ್ ಎನ್ಟಿಆರ್ ಜನ್ಮದಿನಕ್ಕೆ RRR ಚಿತ್ರತಂಡದಿಂದ ಭರ್ಜರಿ ಗಿಫ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts