ಇಮಾಮಸಾಬ ವಲ್ಲೆಪ್ಪನವರಗೆ ರಾಜ್ಯೋತ್ಸವ ಪ್ರಶಸ್ತಿ

30 Dwd 5 Imamsab Valleppanavar, Dharwad
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಜಿಲ್ಲೆಯ ನವಲಗುಂದ ತಾಲೂಕಿನ ಜಾನಪದ ಗಾಯಕ ಇಮಾಮಸಾಬ ಎಂ. ವಲ್ಲೆಪ್ಪನವರ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜಾನಪದ ಕ್ಷೇತ್ರಕ್ಕೆ ನೀಡಿದ ಗಣನೀಯ ಕೊಡುಗೆಯನ್ನು ಗುರುತಿಸಿ ಸರ್ಕಾರ 2024ನೇ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಒಕ್ಕಲಿಗ್ಯಾಗ ಚಕ್ಕಡಿ ಬೇಕ... ಇಂದು- ನಾಳೆ ಯಾಕ ಚಿಂತಿ... ಜಾತಿ ಜಾತಿ ಅಂತಾ ಜಗಳಾ ಯಾಕ ಮಾಡತಿ... ಗುಡಿಯ ನೋಡಿರಣ್ಣ... ಎಂಥಾ ಹೆಂಡತಿ ಗಂಟ ಬಿತ್ತ... ಏನ್ ಬೆರಕಿ ಮಾವನ ಮಗಳ... ಮಂತಾದ ಜಾನಪದ ಗೀತೆಗಳಿಂದ ಇಮಾಮಸಾಬ ಉತ್ತರ ಕರ್ನಾಟಕದ ಮನೆ ಮಾತಾಗಿದ್ದಾರೆ.

ಇಮಾಮಸಾಬ ತಂಡದ ತತ್ವ ಪದಗಳು, ಡೊಳ್ಳಿನ ಪದಗಳು, ಜಾನಪದ ಗೀತೆಗಳು ಕ್ಯಾಸೆಟ್ ಮತ್ತು ಸಿಡಿಗಳಾಗಿವೆ. ಅವರ ಗಾಯನ ರೇಡಿಯೋ ಕಾರ್ಯಕ್ರಮಗಳಲ್ಲಿ ಪ್ರಸಾರವಾಗಿವೆ. ದೂರದರ್ಶನ ಸೇರಿ ಹಲವಾರು ಸುದ್ದಿವಾಹಿನಿಗಳಲ್ಲಿ ಜಾನಪದ ಕಾರ್ಯಕ್ರಮ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net