More

    67 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ; ಕೃತಿಯಾಗಿ ಪ್ರಕಟವಾಗಲಿದೆ ಪುರಸ್ಕೃತರ ಅನುಭವ ಕಥನ..

    ಬೆಂಗಳೂರು: 67ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ವಿವಿಧ ಕ್ಷೇತ್ರಗಳ 67 ಸಾಧಕರಿಗೆ ಇಂದು ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ರಾಜಧಾನಿಯ ಜೆ.ಸಿ.ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಸುನೀಲ್​ಕುಮಾರ್​, ಆರ್. ಅಶೋಕ, ಸಂಸದ ತೇಜಸ್ವಿ ಸೂರ್ಯ, ವಿಧಾನಪರಿಷತ್ ಸದಸ್ಯ ಟಿ.ಎ. ಶರವಣ, ಶಾಸಕ ಉದಯ್ ಗರುಡಾಚಾರ್ ಸೇರಿ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    ಇದನ್ನೂ ಓದಿ: ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟ: ಇಸ್ರೋ ಶಿವನ್, ನಟರಾದ ದತ್ತಣ್ಣ-ಅವಿನಾಶ್ ಸೇರಿ 67 ಸಾಧಕರು, 10 ಸಂಸ್ಥೆಗಳಿಗೆ ಪ್ರಶಸ್ತಿ

    ರಾಜ್ಯೋತ್ಸವ ಪ್ರಶಸ್ತಿ ಪಡೆದವರನ್ನು ಗುರುತು ಮಾಡಿ ಅವರ ಅನುಭವ, ಸಂದೇಶವನ್ನು ಕಲೆ ಹಾಕಿ‌ ಎಂದು ಸಚಿವ ಸುನೀಲ್ ಕುಮಾರ್ ಅವರಿಗೆ ಸಿಎಂ ಹೇಳಿದರು. ಪ್ರಶಸ್ತಿ ಪಡೆದವರು ನಾಡು ಕಟ್ಟುವಲ್ಲಿ ಹೇಗೆ ಶ್ರಮಿಸಿದ್ದರು ಎನ್ನುವುದನ್ನು ತಿಳಿದುಕೊಳ್ಳಬೇಕು. ಅವರ ಅನುಭವದಿಂದ ನಾಡು ಕಟ್ಟುವ ಒಂದು ಕೃತಿ ಬಿಡುಗಡೆ ಮಾಡಬೇಕು. ಆ ಕೃತಿಯನ್ನು ಎಲ್ಲ ವಿದ್ಯಾರ್ಥಿಗಳಿಗೆ ಹಂಚಬೇಕು. ನಾಡು ಕಟ್ಟಲು ಭಿನ್ನಾಭಿಪ್ರಾಯ ಇರಬಾರದು, ನಾವೆಲ್ಲ ಒಗ್ಗಟ್ಟಾಗಿ ಇರಬೇಕು. ಜನರನ್ನ ಫಲಾನುಭವಿಗಳನ್ನಾಗಿಸದೆ ಪಾಲುದಾರರನ್ನಾಗಿ ಮಾಡಬೇಕು ಎಂದು ಸಿಎಂ ತಿಳಿಸಿದರು.

    67 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ; ಕೃತಿಯಾಗಿ ಪ್ರಕಟವಾಗಲಿದೆ ಪುರಸ್ಕೃತರ ಅನುಭವ ಕಥನ.. 67 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ; ಕೃತಿಯಾಗಿ ಪ್ರಕಟವಾಗಲಿದೆ ಪುರಸ್ಕೃತರ ಅನುಭವ ಕಥನ.. 67 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ; ಕೃತಿಯಾಗಿ ಪ್ರಕಟವಾಗಲಿದೆ ಪುರಸ್ಕೃತರ ಅನುಭವ ಕಥನ.. 67 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ; ಕೃತಿಯಾಗಿ ಪ್ರಕಟವಾಗಲಿದೆ ಪುರಸ್ಕೃತರ ಅನುಭವ ಕಥನ..

    ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಮುಂದಿನ ವರ್ಷ ಮಹತ್ವದ ಬದಲಾವಣೆ; ಸಿಎಂ ಘೋಷಣೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts