

ಉತ್ತರಾಖಂಡ: ಸೂಪರ್ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್' ಚಿತ್ರ ಬಿಡುಗಡೆಗೊಂಡು ಇದೀಗ ಬಾಕ್ಸ್ ಆಫೀಸ್ನಲ್ಲಿ ದಾಖಲೆ ಮಾಡುತ್ತಿದ್ದು, ದೇಶ-ವಿದೇಶಗಳಲ್ಲಿ ಹೊಸ ರೆಕಾರ್ಡ್ ಅನ್ನು ನಿರ್ಮಿಸಿದೆ. ಜಾಗತಿಕವಾಗಿ ಚಿತ್ರ ಯಶಸ್ವಿಯಾಗಿದೆ. ಈ ಬೆನ್ನಲ್ಲೇ ತಲೈವಾ ತಮ್ಮ ಆಧ್ಯಾತ್ಮಿಕ ಒಲವಿನತ್ತ ಪ್ರಯಾಣ ಬೆಳೆಸಿದ್ದಾರೆ.
ಆಗಸ್ಟ್ 10 ರಂದು ಜೈಲರ್ ಚಿತ್ರ ಏಕಕಾಲಕ್ಕೆ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿತು. ಆದ್ರೆ, ಚಿತ್ರ ರಿಲೀಸ್ ಆಗುವ ಹಿಂದಿನ ದಿನವೇ ರಜನಿಕಾಂತ್ ತಮ್ಮ ಸ್ನೇಹಿತರೊಡನೆ ಹಿಮಾಲಯಕ್ಕೆ ತೆರಳಿದ್ದರು. ಹಿಮಾಲಯ ಸೇರಿದಂತೆ ಸುತ್ತಮುತ್ತಲಿನ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಿರುವ ನಟ, ಇಂದು ಬದರೀನಾಥ ದೇಗುಲಕ್ಕೆ ತೆರಳಿ, ದೇವರ ದರ್ಶನ ಪಡೆದುಕೊಂಡಿದ್ದಾರೆ.
ಒಂದೆಡೆ ಚಿತ್ರತಂಡ ಸಿನಿಮಾದ ಯಶಸ್ಸಿನ ಸಂಭ್ರಮದಲ್ಲಿದ್ದರೇ, ಈ ಖುಷಿ ಸಂಗತಿಯನ್ನು ಆಚರಿಸಲು ತಲೈವಾ ತಂಡದ ಜತೆಯಿಲ್ಲ ಎಂಬ ಬೇಸರ ಮತ್ತೊಂದೆಡೆ. ಚಿತ್ರಮಂದಿರಗಳಲ್ಲಿ ರಜನಿಕಾಂತ್ ಅವರ ನಟನೆಯನ್ನು ನೋಡಿ ಫಿದಾ ಆಗಿರುವ ಪ್ರೇಕ್ಷಕರು, ಚಿತ್ರದ ಗೆಲುವನ್ನು ತಮ್ಮ ಗೆಲುವಿನಂತೆ ಸಂಭ್ರಮಿಸುತ್ತಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಕಾನೂನು ಕಾಲೇಜು ಆರಂಭಕ್ಕೆ ಪ್ರಸ್ತವಾನೆ
ಸಿನಿಮಾದಲ್ಲಿ ಸೂಪರ್ಸ್ಟಾರ್ ಜತೆಗೆ ತೆರೆ ಹಂಚಿಕೊಂಡ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರ ವಿಶೇಷ ಪಾತ್ರ ಅಭಿಮಾನಿಗಳ ಗಮನವನ್ನು ಸೆಳೆದಿದ್ದು, ಶಿವಣ್ಣನ ರೋಲ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ,(ಏಜೆನ್ಸೀಸ್).