

ರಜಿನಿಕಾಂತ್ ಅಭಿನಯದ, ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ 2023ರ ಹಿಟ್ ಸಿನಿಮಾ "ಜೈಲರ್'. ಚಿತ್ರದಲ್ಲಿ ಟೈಗರ್ ಮುತ್ತುವೇಲ್ ಪಾಂಡ್ಯನ್ ಎಂಬ ನಿವೃತ್ತ ಜೈಲರ್ ಪಾತ್ರದಲ್ಲಿ ರಜಿನಿಕಾಂತ್ ಮಿಂಚಿದ್ದರು. ಪ್ಯಾನ್ ಇಂಡಿಯಾ ರಿಲೀಸ್ ಆಗಿದ್ದ ಈ ಚಿತ್ರ ಬಾಕ್ಸಾಫಿಸಿನಲ್ಲಿ 600 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿಕೊಂಡಿತ್ತು.
ಇದೀಗ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ನಿರ್ದೇಶಕ ನೆಲ್ಸನ್ ಟೀಸರ್ ಮೂಲಕ "ಜೈಲರ್ 2' ಘೋಷಿಸಿದ್ದಾರೆ. ಒಂದು ಕೈಯಲ್ಲಿ ಕತ್ತಿ ಮತ್ತೊಂದು ಕೈಯಲ್ಲಿ ಬಂದೂಕು ಹಿಡಿದು ದುಷ್ಟರ ಬೇಟೆಯಾಡುತ್ತಾ ಬರುವ 74 ವರ್ಷದ ರಜಿನಿಕಾಂತ್ ಸ್ಟೈಲಿಶ್ ಆಗಿ ಮಿಂಚಿದ್ದಾರೆ. ಕೊನೆಗೆ "ಹುಕುಮ್, ಟೈಗರ್ ಕಾ ಹುಕುಮ್' ಎಂಬ ಅವರ ಜನಪ್ರಿಯ ಡೈಲಾಗ್ ಮೂಲಕ ಟೀಸರ್ ಕೊನೆಯಾಗುತ್ತದೆ. ಅನಿರುದ್ಧ್ ರವಿಚಂದರ್ ಹಿನ್ನೆಲೆ ಸಂಗೀತ ಟೀಸರ್ಗೆ ಮೆರುಗು ತಂದಿದೆ. ಪ್ರಾರಂಭದಲ್ಲೇ "ಜೈಲರ್ 2' ಕುತೂಹಲ, ನಿರೀಕ್ಷೆ ಹೆಚ್ಚಿಸಿದೆ.
ಮೊದಲ ಭಾಗದಲ್ಲಿ ರಜಿನಿ ಜತೆ ರಮ್ಯಾಕೃಷ್ಣ, ವಿನಾಯಕನ್, ತಮನ್ನಾ ಭಾಟಿಯಾ, ವಸಂತ್ ರವಿ, ಯೋಗಿ ಬಾಬು ಪ್ರಮುಖ ಪ್ರಮುಖ ತಾರಾಗಣದಲ್ಲಿ ನಟಿಸಿದ್ದರು. ಜತೆಗೆ ಶಿವರಾಜಕುಮಾರ್, ಮೋಹನ್ ಲಾಲ್, ಕಿಶೋರ್, ಜಾಕಿ ಶ್ರ್ಾ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಸೀಕ್ವೆಲ್ನಲ್ಲೂ ಅವರು ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ. &ಏಜೆನ್ಸೀಸ್