ಅತಿ ಹೆಚ್ಚು ತೆರಿಗೆ ಪಾವತಿಸಿದ ನಟರಲ್ಲಿ ರಜನಿಕಾಂತ್​,ಅಕ್ಷಯ್​​ ಕುಮಾರ್​ ಅಗ್ರಸ್ಥಾನ: ಪಾವತಿಸಿದ ಮೊತ್ತ ಎಷ್ಟು?

Rajanikanth-akshay
Published on

ನವದೆಹಲಿ: ಸಿನಿಮಾ ರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಸ್ಟಾರ್​ ನಟರಲ್ಲಿ ರಜನಿಕಾಂತ್​ ಹಾಗೂ ಅಕ್ಷಯ್​ ಕುಮಾರ್ ಅಗ್ರ ಸ್ಥಾನದಲ್ಲಿದ್ದಾರೆ. ಸದ್ಯ ಈ ಇಬ್ಬರು ನಟರು ಈಗ ಸುದ್ದಿಯಲ್ಲಿದ್ದಾರೆ.

ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ದಾಖಲೆ ಬರೆದಿರುವ ರಜನಿಕಾಂತ್​​ ಹಾಗೂ ಬಾಲಿವುಡ್​ನಲ್ಲೂ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಅಕ್ಷಯ್​ ಕುಮಾರ್​ ಅತಿ ಹೆಚ್ಚು ತೆರಿಗೆ ಪಾವತಿಸುವ ಮೂಲಕ ತೆರಿಗೆ ಇಲಾಖೆಯಿಂದ ಭೇಷ್​ ಎನಿಸಿಕೊಂಡಿದ್ದಾರೆ.

ವರ್ಷದಲ್ಲಿ ಅತಿ ಹೆಚ್ಚು ಸಿನಿಮಾ ಮಾಡುವ ಅಕ್ಷಯ್ ಕುಮಾರ್ ಚಿತ್ರವೊಂದಕ್ಕೆ 40 ಕೋಟಿಗೂ ಅಧಿಕ ಸಂಭಾವನೆ ಪಡೆಯುತ್ತಾರೆ. ವಾರ್ಷಿಕವಾಗಿ ಅತಿ ಹೆಚ್ಚು ಹಣ ಗಳಿಸುವ ವಿಶ್ವ ನಟರ ಪೈಕಿ ಅಕ್ಷಯ್​ಗೆ ಹೆಸರಿದ್ದು, ಫೋರ್ಬ್ಸ್ ಪತ್ರಿಕೆಯಲ್ಲಿ ಹೆಸರು ಪಡೆದ ಏಕೈಕ ನಟಗಾರಾಗಿದ್ದಾರೆ.

ಕಳೆದ 5 ವರ್ಷದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸಿದ ನಟ ಎನಿಸಿಕೊಂಡಿದ್ದಾರೆ. 2019ರಲ್ಲೇ ಅಕ್ಷಯ್​ ಬರೋಬ್ಬರಿ 30 ಕೋಟಿ ರೂ. ಹಾಗೂ ಈ ವರ್ಷ 60 ಕೋಟಿ ರೂ.ತೆರಿಗೆ ಪಾವತಿಸಿದ್ದಾರೆ. ಇನ್ನು ರಜನಿಕಾಂತ್ ಕೂಡ ಚಿತ್ರವೊಂದಕ್ಕೆ ಭಾರೀ ಸಂಭಾವನೆ ಪಡೆಯುತ್ತಾರೆ. ಅವರೂ ಕೂಡ ತೆರಿಗೆ ಪಾವತಿಸುವಲ್ಲಿ ಹಿಂದೆ ಬಿದ್ದಿಲ್ಲ. ತಮಿಳುನಾಡಿನಲ್ಲೇ ಅತಿ ಹೆಚ್ಚು ತೆರಿಗೆ ಪಾವತಿಸಿದ ಖ್ಯಾತಿ ರಜನಿಕಾಂತ್ ಅವರಿಗೆ ಸಲ್ಲುತ್ತದೆ, ಇದೀಗ ಆದಾಯ ತೆರಿಗೆ ಇಲಾಖೆಯಿಂದ ನೀಡಲಾದ ಪ್ರಶಂಸನಾ ಪತ್ರವನ್ನು ಅವರ ಪುತ್ರಿ ಐಶ್ವರ್ಯಾ ಸ್ವೀಕರಿಸಿದ್ದದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net