ಅಣ್ಣಾತ್ತೆ ಚಿತ್ರೀಕರಣ ಮುಗಿಸಿದ ಬೆನ್ನಲ್ಲೇ ಕರೊನಾ ಲಸಿಕೆ ಪಡೆದ ರಜನಿಕಾಂತ್

Rajanikanth - Final
Published on

ಚೆನ್ನೈ: ಅಣ್ಣಾತ್ತೆ ಸಿನಿಮಾ ಚಿತ್ರೀಕರಣ ಮುಗಿಸಿರುವ ಸೂಪರ್ ಸ್ಟಾರ್ ರಜನಿಕಾಂತ್ ಗುರುವಾರದಂದು ಕರೊನಾ ಲಸಿಕೆ ತೆಗೆದುಕೊಂಡಿದ್ದಾರೆ. ಈ ಕುರಿತಾಗಿ ಅವರ ಮಗಳು ಸೌಂದರ್ಯ ರಜನಿಕಾಂತ್ ಟ್ವೀಟ್ ಮಾಡಿದ್ದಾರೆ.

ರಜನಿಕಾಂತ್ ಅವರು ಮಾಸ್ಕ್ ತೊಟ್ಟು, ಲಸಿಕೆ ಪಡೆಯುತ್ತಿರುವ ಫೋಟೋವನ್ನು ಹಂಚಿಕೊಂಡಿರುವ ಸೌಂದರ್ಯ ರಜನಿಕಾಂತ್, ನಮ್ಮ ತಲೈವಾರ್ ಇಂದು ಕರೊನಾ ಲಸಿಕೆ ಪಡೆದಿದ್ದಾರೆ. ಕರೊನಾ ವೈರಸ್ ವಿರುದ್ಧದ ಈ ಯುದ್ಧವನ್ನು ಜತೆಯಾಗಿ ಹೋರಾಟ ಮಾಡಿ ಗೆಲ್ಲೋಣ ಎಂದು ಬರೆದುಕೊಂಡಿದ್ದಾರೆ.

ಕರೊನಾ ಮತ್ತು ಲಾಕ್ಡೌನ್ನಿಂದ ಅತಂತ್ರವಾಗಿದ್ದ ಬಿಗ್ಬಜೆಟ್ ಮತ್ತು ಸ್ಟಾರ್ ಚಿತ್ರಗಳ ಪೈಕಿ ರಜನಿಕಾಂತ್ ಅಭಿನಯದ ಅಣ್ಣಾತ್ತೆ ಸಹ ಒಂದು. 2020ರಲ್ಲಿ ಆರಂಭವಾಗಿದ್ದ ಚಿತ್ರೀಕರಣ ಬುಧವಾರ ಹೈದರಾಬಾದ್ನಲ್ಲಿ ಮುಗಿದಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net