ಸಿದ್ದರಾಮಯ್ಯ ವಿರುದ್ಧ ಫೇಕ್ ಸ್ಟಿಂಗ್​ ಆಪರೇಷನ್​​? "ದೆಹಲಿ ಮಂತ್ರಿಯನ್ನ" ಜೈಲಿಗಟ್ಟಿ ಎಂದ ಯತೀಂದ್ರ; ಎಚ್​​ಡಿಕೆ ವಿರುದ್ಧ ಪ್ರಿಯಾಂಕ ಖರ್ಗೆ ವಾಗ್ದಾಳಿ! Sting Operation

CCB terms the sting operation against Siddaramaiah a fabrication; Yathindra Siddaramaiah demands action against those who shared the video, while Priyank Kharge leaves H.D. Kumaraswamy rattled.
ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಕಟ್ಟುಕಥೆ ಎಂದ ಸಿಸಿಬಿ; ವಿಡಿಯೋ ಹಂಚಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಯತೀಂದ್ರ ಸಿದ್ದರಾಮಯ್ಯ, ಹೆಚ್‌ಡಿಕೆ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ
Published on: 

ಬೆಂಗಳೂರು: ಇತ್ತೀಚಿನ ಕೆಲ ದಿನಗಳಲ್ಲಿ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್​ ವಿಡಿಯೋ ಎಂಬ ಸುದ್ದಿ ಸಾಕಷ್ಟು ಸದ್ದು ಮಾಡುತ್ತಿತ್ತು. ಈಗ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮಹತ್ವದ ಪ್ರಕಟನೆಯೊಂದನ್ನು ಹೊರಡಿಸಿದ್ದಾರೆ.

ಈ ಸ್ಟಿಂಗ್​​ ಆಪರೇಷನ್​ ಎನ್ನುವುದು ಒಂದು ಕಟ್ಟುಕತೆಯಾಗಿದ್ದು, ಇದರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರದ್ದು ಯಾವ ಪಾತ್ರವೂ ಇಲ್ಲವೆಂದು ಸಿಸಿಬಿ ಪೊಲೀಸರು ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಈ ಮಾಧ್ಯಮ ಪ್ರಕಟನೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ ಹಾಗೂ ನಗರಾಭಿವೃದ್ದಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ರಾಜ್ಯ ಗೃಹ ಸಚಿವ ಪ್ರಿಯಾಂಕ್​ ಖರ್ಗೆ ಸೇರಿದಂತೆ ಇತತರು ತೀಕ್ಣ ಪ್ರತಿಕ್ರಿಯೆ ನೀಡಿದ್ದಾರೆ.

Attachment
PDF
CCPS PRESSNOTE 29-10-2026 - KANNADA
Preview

ಕಠಿಣ ಕ್ರಮ ತೆಗೆದುಕೊಳ್ಳಲೇ ಬೇಕು!

ಸಿಸಿಬಿ ಪೊಲೀಸರು ಸ್ಟಿಂಗ್​ ಆಪರೇಷನ್​ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ ಪಾತ್ರವಿಲ್ಲ ಎಂದು ಪ್ರಕಟ ಮಾಡಿದ ಹಿನ್ನಲೆ ಪುತ್ರ ಹಾಗೂ ನಗರಾಭಿವೃದ್ದಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ಇದೊಂದು ಕಟ್ಟುಕಟ್ಟು ಕಥೆ ಎಂದು ಸ್ಟಿಂಗ್ ಮಾಡಿದವೆರೇ ಹೇಳಿದ್ದಾರೆ. ಈ ವಿಡಿಯೋನಲ್ಲಿ ಮುಸ್ಲಿಂ ಮಹಿಳೆ ಮಾತಾಡಿದ್ದು ಫೇಕ್ ಎಂದು ಗೊತ್ತಾಗಿದೆ.

ಸ್ಟಿಂಗ್ ಆಪರೇಷನ್ ಮಾಡಿದವರದ್ದು ಎಷ್ಟು ತಪ್ಪೋ, ವಿಡಿಯೋ ಹಂಚಿದವರದ್ದು ಅಷ್ಟೇ ತಪ್ಪಿದೆ. ಹೀಗಾಗಿ ಈ ಕೆಲಸವನ್ನು ಮಾಡಿದವರೂ ಯಾರೇ ಆಗಿರಲೀ, ದೆಹಲಿಯ ಮಂತ್ರಿಗಳೇ ಆಗಿರಲೀ, ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲೇಬೇಕಂದು ಡಾ. ಯತೀಂದ್ರ ಸಿದ್ದರಾಮಯ್ಯ ಪೊಲೀಸ್​ ಇಲಾಖೆಯಲ್ಲಿ ಒತ್ತಾಯಿಸಿದ್ದಾರೆ.

ಕುಮಾರಸ್ವಾಮಿಗೆ ಕಾಮನ್ ಸೆನ್ಸ್ ಇದ್ಯಾ? ಗುಡುಗಿದ ಗೃಹ ಸಚಿವ!

ಇನ್ನು ಈ ಸಿಸಿಬಿ ಪ್ರಕಟನೆ ಬಗ್ಗೆ ಮಾತನಾಡಿರುವ ಗೃಹ ಸಚಿವ ಪ್ರಿಯಾಂಕ​ ಖರ್ಗೆ, ಯಾರು ಅತಿಯಾಗಿ ಮಾತನಾಡುತ್ತಿದ್ದಾರೆ, ಅವರ ಬಾಗಿಲ ಬುಡಕ್ಕೆ ಇದು ಬರುತ್ತದೆ ಎಂದು ನಾನು ಮೊದಲೇ ಹೇಳಿದ್ದೆ. ಕುಮಾರಸ್ವಾಮಿ ಅವರೇ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಲಿಲ್ಲ. ಇವರ ಅಣ್ಣನ ಮಗನ ಪೆನ್ ಡ್ರೈವ್​ ಅನ್ನು ಇವರೇ ಹಂಚಿದ್ದಾರೆ. ಕುಮಾರಸ್ವಾಮಿಗೆ ಕಾಮನ್ ಸೆನ್ಸ್ ಇದ್ಯಾ ಎಂದು ರಾಜ್ಯ ಗೃಹ ಸಚಿವ ಪ್ರಿಯಾಂಕ​ ಖರ್ಗೆ ಗುಡುಗಿದ್ದಾರೆ.

ಮಾಧ್ಯಮಗಳಲ್ಲಿ , ಸಾಮಾಜಿಕ ಜಾಲತಾಣದಲ್ಲಿ ಬೇರೆ ಬೇರೆ ಸುದ್ದಿ ಬರ್ತಿತ್ತು ಹೀಗಾಗಿ ಇದಕ್ಕೆ ಇಂದು ಸಿಸಿಬಿ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಇದರ ಬಗ್ಗೆ ಎಲ್ಲಾ ಮಾಹಿತಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಳಿ ಇದೆ. ಇನ್ನು ಕಾಂಗ್ರೆಸ್​ ನಾಯಕಿ ಕೃಪಾ ಆಳ್ವ ಕುರಿತು ಮಾತನಾಡಿದ ಗೃಹ ಸಚಿವರು, ಕೃಪಾ ಆಳ್ವಾ ಅವರಿಗೆ ಪಕ್ಷದಿಂದ ನೋಟಿಸ್​ ನೀಡಲಾಗಿದೆ. ಸದ್ಯ ಅವರು ವಿದೇಶ ಪ್ರಯಾಣದಲ್ಲಿದ್ದಾರೆ. ಅವರ ಬಳಿ ಕೂಡ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ ಎಂದಿದ್ದಾರೆ.

ನಮಗೆ ಈ ಬಗ್ಗೆ ಯಾವಾಗ ಅನುಮಾನ ಬಂತೋ, ಆವಾಗ ನಾವು ನೋಟಿಸ್​ ಕೊಟ್ಟೆವು. ಆಗ ಪಾದಯಾತ್ರೆ, ಪೊಲೀಸ್​ ಕಚೇರಿ ಮುತ್ತಿಗೆ ಹಾಕಿದರು. ಹಾಗಾದರೆ, ಈ ಸ್ಟಿಂಗ್​ ಮಾಡಿದ ವ್ಯಕ್ತಿ, ಕುಮಾರಸ್ವಾಮಿ ಅವರಿಗೆ ಪರಿಚಯ ಇಲ್ಲವೆಂದು ಹೇಳಲಿ. ಸದ್ಯಕ್ಕೆ ಪಾರದರ್ಶಕ ತನಿಖೆ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಸತ್ಯಾಸತ್ಯತೆ ಹೊರಬೀಳಲಿದೆ ಎಂದು ಪ್ರಿಯಾಂಕ ಖರ್ಗೆ ಹೇಳಿದ್ದಾರೆ.

ಇವೆಲ್ಲಾ ಬರೀ ಫೇಕ್​!

ಇನ್ನು ಈ ಪ್ರಕಟನೆಗೆ ಪ್ರತಿಕ್ರಿಯಿಸಿರುವ ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವ ಚಲುವರಾಯಸ್ವಾಮಿ, ಸಿದ್ದರಾಮಯ್ಯರಂತಹ ಹಿರಿಯ ನಾಯಕರ ಮೇಲೆ ಫೇಕ್​ ವಿಡಿಯೋ ಮಾಡಿದ್ದು ತಪ್ಪು. ಇದೊಂದು ಫೇಕ್​ ವಿಡಿಯೋ ಎಂದು ಮೊದಲೇ ತಿಳಿದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ನಾವು ಹೇಳಿಕೆ ನೀಡುವುದು ಸರಿಯಲ್ಲ.

ಆದರೆ, ದೆಹಲಿಯ ಬುದ್ದಿ ಜೀವಿಗಳು ಪೋನ್ ಎಲ್ಲಿ ಖರೀದಿ ಮಾಡಿದ್ದಾರೆ? ಖರೀದಿ ಮಾಡಿ ಯಾರ ಮನೆಗೆ ‌ತೆಗೆದುಕೊಂಡು ಹೋಗಿದ್ದಾರೆ? ಯಾರು ಅಪ್ ಸ್ಕ್ಯಾಂಡ್ ಆಗಿದಾರೆ? ಎನ್ನುವುದು ಎಲ್ಲವೂ ಗೊತ್ತಿದೆ ಎಂದು ಸಚಿವರು ಹೇಳಿದ್ದಾರೆ.