ಕೃಷಿಯಲ್ಲಿ ಮೂಲಪದ್ಧತಿ ಅನಿವಾರ್ಯ - ತೋಟಗಾರಿಕೆ ಇಲಾಖೆ ಡಿಡಿ ಮಂಜುನಾಥ ಮಾಹಿತಿ - ರೈತ ಸಂಘದಿಂದ ಕಾರ್ಯಾಗಾರ

PTR_1 SEP_1
Published on

ಪುತ್ತೂರು: ಕೃಷಿಯಲ್ಲಿ ಮೂಲಪದ್ಧತಿ ಜಾರಿಗೆ ತಂದಾಗ ರೋಗ ಕಡಿಮೆ ಮಾಡಬಹುದು. ಔಷಧವೊಂದೇ ಪರಿಹಾರವಾಗದೆ, ನಿರ್ವಹಣೆ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಮಣ್ಣು ಪರೀಕ್ಷೆ ನಡೆಸಿ ಸುಣ್ಣ ನೀಡುವುದರಿಂದ ಮಣ್ಣಿನ ರಸ ಸಾರ ಹೆಚ್ಚಾಗುತ್ತದೆ ಎಂದು ಮಂಗಳೂರು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಂಜುನಾಥ ಡಿ. ಹೇಳಿದರು.

ರೈತಸಂಘದ ಕೇಂದ್ರ ಕಚೇರಿಯಲ್ಲಿ ಸೊಮವಾರ ತೋಟಗಾರಿಕೆ ಬೆಳೆ ಮತ್ತು ಬೆಳೆ ವಿಮೆ ಯೋಜನೆ ಸೇರಿ ವಿವಿಧ ವಿಷಯಗಳ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಕೃಷಿಯಲ್ಲಿ ಏನೇ ಮಾಡಿದರೂ, ವಿಜ್ಞಾನವನ್ನು ಬಿಡಬಾರದು. ಅಡಕೆ ತೋಟದಲ್ಲಿ ಹಿಂಗಾರ ಒಣಗುವ ಸಮಸ್ಯೆಯಿಂದ ಬೆಳೆಗಾರರಿಗೆ ತೀವ್ರ ಸಮಸ್ಯೆಯಾಗುತ್ತಿದ್ದು, ಸುಳಿ ಹಾಗೂ ಎಲೆಗೂ ಬೋಡೋ ದ್ರಾವಣ ಸಿಂಪಡಣೆ ಮಾಡುವುದರಿಂದ ಪರಿಹಾರ ಕಂಡುಕೊಳ್ಳಬಹುದು. ರೈತರು ಆದಾಯ ಹೆಚ್ಚಿಸಿಕೊಳ್ಳಲು ಆಧುನಿಕ ಯಂತ್ರೋಪಕರಣ ಬಳಕೆ ಹೆಚ್ಚು ಮಾಡಬೇಕು. ಕೋಕೊ, ಕಾಳುಮೆಣಸು ಸೇರಿ ಉಪಬೆಳೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.

ಪುತ್ತೂರು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕಿ ರೇಖಾ ಎ., ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು, ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ಮುಖಂಡರಾದ ಮುರುವ ಮಹಾಬಲ ಭಟ್, ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ಗೌಡ ಸವಣೂರು, ಶಿವಣ್ಣ ಗೌಡ ಇಡ್ಯಾಡಿ, ಎನ್.ಕೆ.ಇದಿನಬ್ಬ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net