ಪಶ್ಚಿಮ ಘಟ್ಟದಲ್ಲೇಕೆ ಮಳೆ ಹೆಚ್ಚು? ಕಾಡಿನಿಂದಾಗಿ ಮಳೆಯೋ? ಮಳೆಯಿಂದಾಗಿ ಕಾಡೋ?

western ghats
Published on
ಪಶ್ಚಿಮ ಘಟ್ಟದಲ್ಲಿ ಮರಗಳು ಹೆಚ್ಚು ಇರುವುದರಿಂದ ಮಳೆ ಬರುತ್ತದೆಯೋ? ಅಥವಾ ಹೆಚ್ಚು ಮಳೆ ಬರುವುದರಿಂದ ಮರಗಳು ಹೆಚ್ಚಾಗಿವೆಯೇ? ಎಂದರೆ, ಪಶ್ಚಿಮಘಟ್ಟದಲ್ಲಿ ಇವೆರಡೂ ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುತ್ತವೆ. ಮರಗಳಿಂದ ಬಾಷ್ಪವಿಸರ್ಜನೆಯಾಗಿ ಮೋಡಗಳಾಗುತ್ತವೆ, ಅಲ್ಲಿ ಹೆಚ್ಚು ಮಳೆ ಬರುತ್ತದೆ. ಹೆಚ್ಚು ಮಳೆ ಬರುವುದರಿಂದ ಅಲ್ಲಿ ಸಸ್ಯಗಳ ರಾಶಿ ಬೆಳೆದಿದೆ. ಆದರೆ, ಅದಕ್ಕಿಂತ ಮುಖ್ಯವಾಗಿ ಪಕ್ಕದಲ್ಲಿರುವ ಸಮುದ್ರ ತೀರದ ಉಷ್ಣಾಂಶ, ಬೀಸುವ ಗಾಳಿಯ ಒತ್ತಡ, ಸಮುದ್ರದಿಂದ ಆವಿ ಹೆಚ್ಚಾಗಿ ಮೋಡಗಳು ಭೂಪ್ರದೇಶಕ್ಕೆ ಬರುತ್ತವೆ. ಸಮುದ್ರದಿಂದ ಬರುವ ಗಾಳಿಯ ತೇವಾಂಶವನ್ನು ಬೆಡ್ಡಗುಡ್ಡಗಳು ಮತ್ತು ಮರಗಳು ತಮ್ಮ ಕಾಂತೀಯ ಶಕ್ತಿಯಿಂದ ಆಕರ್ಷಿಸುವುದರಿಂದ ಪಶ್ಚಿಮ ಘಟ್ಟದಲ್ಲಿ ಹೆಚ್ಚು ಮಳೆ ಬರುತ್ತದೆ. ಅತಿ ಎತ್ತರದ ಪ್ರದೇಶಗಳಲ್ಲಿ ಹೆಚ್ಚು ಮಳೆ ಬೀಳುತ್ತದೆ. ಪಶ್ಚಿಮಘಟ್ಟದಲ್ಲಿ ಅಂದಾಜು 2000 ಮಿ.ಮೀ. ನಿಂದ 5000 ಮಿ.ಮೀ. ವರೆಗೆ ಮಳೆ ಬೀಳುತ್ತದೆ. ಆದರೆ ಎಲ್ಲ ಕರಾವಳಿ ಪ್ರದೇಶದಲ್ಲೂ ಇದೇ ರೀತಿ ಇರುತ್ತದೆ ಎಂದು ಹೇಳಲಾಗುವುದಿಲ್ಲ.

ಉದಾಹರಣೆಗೆ, ದಕ್ಷಿಣ ಅಮೆರಿಕದ ಚಿಲಿ ದೇಶದಲ್ಲಿ, ಒಂದು ಸಾವಿರ ಕಿ.ಮೀ. ಉದ್ದದ ಶಾಂತಸಾಗರ ಕಡಲತೀರದ ಪಕ್ಕದಲ್ಲಿಯೇ 1,40,000 ಚದರ ಕಿ.ಮೀ. ಅಗಲದ (ಕರ್ನಾಟಕ ರಾಜ್ಯದ ಮುಕ್ಕಾಲು ಭಾಗದಷ್ಟು) ಅಟಕಾಮಾ ಮರುಭೂಮಿಯಿದೆ. ಅದರ ಪಶ್ಚಿಮಕ್ಕೆ ಕಡಲತೀರವಿದೆ, ಪೂರ್ವಕ್ಕೆ ಅದರ ಪಕ್ಕದಲ್ಲಿಯೇ ಆ್ಯಂಡಿಸ್ ಪರ್ವತಗಳಿವೆ. ನಾವುಗಳು ಚಲನಚಿತ್ರಗಳಲ್ಲಿ ನೋಡಿ ಮರುಭೂಮಿ ಎಂದಾಕ್ಷಣ ಅತಿ ಹೆಚ್ಚು ಉಷ್ಣಾಂಶವಿರುವ ಬರೀ ಮರಳು ಪ್ರದೇಶ ಎಂದುಕೊಳ್ಳುತ್ತೇವೆ. ಆದರೆ ಅದು ಹಾಗಲ್ಲ. ಯಾವ ಪ್ರದೇಶದಲ್ಲಿ ಸುಮಾರು ಇಪ್ಪತ್ತೈದು ಸೆ.ಮೀ. (250 ಮಿ.ಮೀ.) ಗಿಂತಲೂ ಕಡಿಮೆ ಮಳೆ ಬೀಳುತ್ತದೋ ಅಂತಹ ಪ್ರದೇಶವನ್ನು ಮರುಭೂಮಿ ಪ್ರದೇಶ ಎಂದು ಕರೆಯುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net