ಮಳೆಯಿಂದ ಜನ ಜೀವನ ಆಸ್ತವ್ಯಸ್ತ -ಮಾನ್ವಿಯ ಬಲ್ಲಟಗಿಯಲ್ಲಿ 32.5 ಮಿ,ಮೀ ದಾಖಲೆ ಮಳೆ

raichur
raichur
Published on

ರಾಯಚೂರು ನಗರ ಸೇರಿದಂತೆ ಜಿಲ್ಲಾಧ್ಯಂತ ಗುರುವಾರ ತಡರಾತ್ರಿಯಿಂದ ಸುರಿಯುತ್ತಿರುವುದರಿಂದ ಜಿಟಿ ಜಿಟಿ ನಿರಂತರವಾಗಿ ಮಳೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ ಮಾನ್ವಿ ತಾಲೂಕಿನ ಬಲ್ಲಟಗಿ ಗ್ರಾಮದಲ್ಲಿ 32.5 ಮಿ.ಮೀ ಮಳೆ ವರದಿಯಾಗಿದೆ.

ಜಿಲ್ಲೆಯ ಕೆಲವು ಭಾಗದಲ್ಲಿ ಜಿಟಿಜಿಟಿ ಮಳೆಯಾದರೆ, ಕೇಲವು ಕಡೆ ಜೋರು ಮಳೆಯಾಗುತ್ತಿರುವುದರಿಂದ ಜನಸಾಮಾನ್ಯರು ದಿನನಿತ್ಯದ ಕೆಲಸ ಕಾರ್ಯಗಳಿಗೆ ಹಾಗೂ ವಿದ್ಯಾರ್ಥಿಗಳು ಕಾಲೇಜುಗಳಿಗೆ ತೆರಳಲು ಪ್ರಯಾಸ ಪಡುವಂತಾಗಿದೆ. ಈ ಮಳೆಯಿಂದ ರಸ್ತೆಯಲ್ಲಿರುವ ಗುಂಡಿಯಲ್ಲಿ ನೀರು ನಿಂತಿದ್ದು, ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಬೆಳಗ್ಗೆ ಹಾಲು, ಪತ್ರಿಕೆ ಹಾಕಲು ಸಮಸ್ಯೆ ಉಂಟಾಗಿದೆ, ಸತತ ಬಿಟ್ಟು ಬಿಡದೆ ಮಳೆ ಸುರಿಯುತ್ತಿರುವುದರಿಂದ ಜನರು ಮನೆಯಿಂದ ಹೋರ ಬಾರದಂತ ಪರಿಸ್ಥಿತಿ. ತರಕಾರಿ ಮಾರುಕಟ್ಟೆಗೆ ಜನರ ಬಾರದೇ ಇರುವುದರಿಂದ ಅಲ್ಲಲ್ಲಿ ಮಾತ್ರ ಜನರು ಕಂಡರು.ಮಳೆಯ ನಡುವೆ ಕೆಲವರು ಮಾರುಕಟ್ಟೆಗೆ ಬಂದು ತರಕಾರಿ ಖರೀದಿಸಿ ತೆರಳಿಸಿದರು.

ನಗರದಲ್ಲಿನ ಕಿರಾಣಿ ಅಂಗಡಿಗಳು, ಬಟ್ಟೆ ಅಂಗಡಿ, ಸೇರಿ ಇತರೆ ಅಂಗಡಿ ಮುಗ್ಗಟ್ಟುಗಳು 11 ಗಂಟೆ ಬಳಿಕ ನಿಧಾನವಾಗಿ ತೆಗೆದರು. ರಸ್ತೆಯಲ್ಲಿ ವಾಹನಗಳ ಸಂಚಾರ ಕೊಂಚ ಇಳಿಕೆಯಾಗಿದೆ, ಬಸ್ ನಿಲ್ದಾಣದಲ್ಲಿ ಮಾತ್ರ ಜನರು ಬೇರೆ ಊರುಗಳಿಗೆ ತೆರಳಲು ಬಸ್‌ಗಾಗಿ ಕಾದು ಕುಳಿತರು.

ಗ್ರಾಮೀಣ ಭಾಗದಲ್ಲಿ ಜಿಟಿಜಿಟಿ ಮಳೆ ಜನರು ಹೊರಬಾರದೆ ಮನೆಯಲ್ಲಿದ್ದರೆ ಕೆಲ ರೈತರು ಜಮೀನುಗಳಿಗೆ ತೆರಳಿದ್ದರು, ಜಿಟಿಜಿಟಿ ಮತ್ತು ಜೋರಾದ ಮಳೆಯಿಂದಾಗಿ ಜಮೀನುಗಳಲ್ಲಿ ನೀರು ನಿಂತುಕೊಂಡಿದ್ದು, ನೀರು ನಿಲ್ಲದಂತೆ ಬೆಳೆ ರಕ್ಷಣೆ ಮಾಡಿಕೊಳ್ಳಲು ಕಾಲುವೆ ಮಾಡಿ ನೀರು ಹೊರ ಹೋಗಿವಂತೆ ಮಾಡಿದರು.

ಕಳೆದ 24 ಗಂಟೆಯಲ್ಲಿ ಜಿಲ್ಲೆಯ ಮಾನ್ವಿ ತಾಲೂಕಿನ ಬಲ್ಲಟಗಿಯಲ್ಲಿ 32.5 ಮಿ.ಮೀ,ಬಾಗಲವಾಡದಲ್ಲಿ 31.5ಮಿ.ಮೀ, ಹಿರೇಹಣಗಿಯಲ್ಲಿ 27 ಮಿ.ಮೀ,ಲಿಂಗಸುಗೂರಿನ ಪೈದೊಡ್ಡಿ ಗ್ರಾಮದಲ್ಲಿ 31 ಮಿ.ಮೀ,ಕೋಟದಲ್ಲಿ 28.5ಮಿ.ಮೀ,ಗೌಡೂರು ಗ್ರಾಮದಲ್ಲಿ 24 ಮಿ.ಮೀ,ಸಿರವಾರ ತಾಲೂಕಿನ 20ಮಿ.ಮೀ, ಮಳೆಯಾಗಿದೆಂದು ಹವಮಾನ ಇಲಾಖೆ ಮಾಹಿತಿ ನೀಡಿದೆ.

 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net