ನವದೆಹಲಿ : ಕರೊನಾ ಚಿಕಿತ್ಸೆಯಲ್ಲಿ ಹೆಚ್ಚಾಗಿ ಅಗತ್ಯ ಬೀಳುವ ಮೆಡಿಕಲ್ ಆಕ್ಸಿಜನ್ (ಆಮ್ಲಜನಕ)ಅನ್ನು ಮತ್ತು ಆಕ್ಸಿಜನ್ ಸಿಲಿಂಡರ್ಗಳನ್ನು ದೇಶದ ವಿವಿಧ ಭಾಗಗಳಿಗೆ ತಲುಪಿಸಲು, ಭಾರತೀಯ ರೈಲ್ವೆಯು “ಆಕ್ಸಿಜನ್ ಎಕ್ಸ್ಪ್ರೆಸ್” ವಿಶೇಷ ರೈಲು ಸೇವೆಯನ್ನು ಆರಂಭಿಸಲಿದೆ. ಈ ಬಗ್ಗೆ ಇಂದು ರೈಲ್ವೆ ಇಲಾಖೆಯು ಸುದ್ದಿಗಾರರಿಗೆ ಮಾಹಿತಿ ನೀಡಿದೆ.
ಮುಂಬೈನ ಕಲಂಬೋಳಿ ರೈಲು ನಿಲ್ದಾಣ ಮತ್ತು ಬೋಯಿಸಾರ್ ರೈಲು ನಿಲ್ದಾಣಗಳಿಂದ ಸೋಮವಾರ ಖಾಲಿ ಟ್ಯಾಂಕರ್ಗಳು ಪ್ರಯಾಣ ಆರಂಭಿಸಲಿವೆ. ಇವು ವಿಜಾಗ್, ಜಮ್ಶೇಡ್ಪುರ, ರೂರ್ಕೆಲಾ ಮತ್ತು ಬೊಕಾರೋಗಳಿಗೆ ಹೋಗಿ ದ್ರವರೂಪದ ಮೆಡಿಕಲ್ ಆಕ್ಸಿಜನ್ಅನ್ನು ಲೋಡ್ ಮಾಡಿಸಿಕೊಳ್ಳಲಿವೆ. ಅಲ್ಲಿಂದ ದೇಶದ ವಿವಿಧ ಭಾಗಗಳಿಗೆ ಸರಬರಾಜು ಮಾಡಲು ತೆರಳಲಿವೆ ಎನ್ನಲಾಗಿದೆ. (ಏಜೆನ್ಸೀಸ್)
‘ಎಷ್ಟು ಲಸಿಕೆ ಆರ್ಡರ್ ಮಾಡಿದ್ದೀರಿ ?’ – ಮೋದಿಗೆ ಮನಮೋಹನ್ ಸಿಂಗ್ ಪ್ರಶ್ನೆ
ಓಡಿಹೋಗಿದ್ದ ಪ್ರೇಮಿಗಳನ್ನು ಹಿಡಿದುತಂದ ಪೊಲೀಸ್; ಯುವತಿ ಮನೆಗೆ, ಯುವಕ ಮಸಣಕ್ಕೆ !