ಬಂಡೆ ಕಲ್ಲು ಕುಸಿದು ಇಬ್ಬರು ಮಕ್ಕಳು ಸೇರಿ ಮೂವರ ಸಾವು

IMG-20241015-WA0020
Published on

ರಾಯಚೂರು: ಹೊಲದಲ್ಲಿ ಆಟವಾಡುತ್ತಿದ್ದ ವೇಳೆ ಬೃಹತ್ ಬಂಡೆಕಲ್ಲು ಉರುಳಿಬಿದ್ದು ಇಬ್ಬರು ಮಕ್ಕಳು ಮತ್ತು ಒಬ್ಬ ಯುವಕ ಸಾವನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೌಡೂರು ತಾಂಡಾದಲ್ಲಿ ಮಂಗಳವಾರ ಸಂಭವಿಸಿದೆ.

3ನೇ ತರಗತಿ ವಿದ್ಯಾರ್ಥಿ ಮಂಜುನಾಥ(9), ಒಂದನೇ ತರಗತಿಯಲ್ಲಿ ಓದುತ್ತಿದ್ದ ವೈಶಾಲಿ(7) ಘಟನಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಲಿಂಗಸುಗೂರಿನಲ್ಲಿ ಪದವಿ ಮೂರನೇ ಸೆಮಿಸ್ಟರ್‌ನಲ್ಲಿ ಅಭ್ಯಾಸ ಮಾಡುತ್ತಿದ್ದ ರಾಘವೇಂದ್ರ (18) ಎಂಬ ಯುವಕ ಕಾಲು ಮುರಿದುಕೊಂಡಿದ್ದು, ಲಿಂಗಸುಗೂರಿಗೆ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.

ಶಾಲೆ ರಜೆ ಇದ್ದಿದ್ದರಿಂದ ಪಾಲಕರು ಮಕ್ಕಳನ್ನು ಹೊಲಕ್ಕೆ ಕರೆದುಕೊಂಡು ಹೋಗಿದ್ದರು. ಹೊಲದಲ್ಲಿದ್ದ ಬೃಹತ್ ಬಂಡೆ ಕಲ್ಲಿನ ಮೇಲೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಕಲ್ಲು ಬಂಡೆ ಉರುಳಿದೆ. ಬಂಡೆಯ ಕೆಳಗೆ ಮಕ್ಕಳು ಸಿಲುಕಿ ಸಾವನಪ್ಪಿದ್ದಾರೆ.

ಜೆಸಿಬಿ ಸಹಾಯದಿಂದ ಬಂಡೆ ಕೆಳಗೆ ಸಿಲುಕಿದ್ದ ಮಕ್ಕಳ ಮೃತದೇಹವನ್ನು ಹೊರತೆಗೆಯಲಾಗಿದ್ದು, ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net