ರಸ್ತೆ ಸಂಚಾರದಿಂದ ನರಕಯಾತನೆ: ದುರಸ್ತಿಗೆ ಮನವಿ

Dalitasene
ರಾಯಚೂರಿನ ಡಿಸಿ ಕಚೇರಿ ಎದುರು ಚಿಕ್ಕಸುಗೂರಿನ ಕೈಗಾರಿಕಾ ಪ್ರದೇಶದ ರಸ್ತೆ ದುರಸ್ತಿಗೆ ಒತ್ತಾಯಿಸಿ ಮಂಗಳವಾರ ಡಿಸಿ ಕಚೇರಿ ಸ್ಥಾನಿಕ ಅಧಿಕಾರಿ ವೇಣುಗೋಪಾಲಗೆ ಮನವಿ ಸಲ್ಲಿಸಿದರು. ಆಂಜನೇಯ್ಯ, ಭೀಮರಾಯ, ಪ್ರಮುಖರಾದ ಜಿಂದಪ್ಪ, ಸೂಗರೆಡ್ಡಿ, ಭೀಮಣ್ಣ ವತ್ತೂರು, ನಿಂಗಪ್ಪ ಕುಂಬಾರ, ದೇವೇಂದ್ರಪ್ಪ, ಶಾಂತಕುಮಾರ ಇದ್ದರು.
Published on

ರಾಯಚೂರು: ತಾಲೂಕಿನ ಚಿಕ್ಕಸೂಗೂರಿನ ವಡ್ಲೂರು ಕೆಐಎಡಿಬಿ ಗ್ರೂಥ್ ಸೆಂಟರ್ ಮುಖ್ಯ ರಸ್ತೆಯಿಂದ ಕೈಗಾರಿಕೆ ಕಾರ್ಖಾನೆಗಳಿಗೆ ಹೋಗುವ ಡಾಂಬಾರು ರಸ್ತೆಯನ್ನು ದುರಸ್ತಿಗೊಳಿಸಬೇಕೆಂದು ದಲಿತ ಸೇನೆ ಮುಖಂಡರು ಮಂಗಳವಾರ ನಗರದ ಡಿಸಿ ಕಚೇರಿ ಎದುರು ಕಚೇರಿಯ ಸ್ಥಾನಿಕ ಅಧಿಕಾರಿ ವೇಣುಗೋಪಾಲಗೆ ಮನವಿ ಸಲ್ಲಿಸಿದರು.

ಕಾರ್ಖಾನೆಗಳಿಗೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ತಗ್ಗು ದಿನ್ನೆಗಳಿಂದ ಕೂಡಿದೆ. ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ನಿತ್ಯ ಶಾಲೆಗೆ ಹಾಗೂ ಇತರ ಕೆಲಸಗಳಿಗೆ ತೆರಳಲು ತೀವ್ರ ತೊಂದರೆ ಅನುಭವಿಸುವಂತಾಗಿದ್ದು, ಅಪಘಾತಗಳೂ ಸಂಭವಿಸಿವೆ. ಈ ಕುರಿತು ಕೈಗಾರಿಕೆ ಇಲಾಖೆ ಅಧಿಕಾರಿಗಳ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ. ರಸ್ತೆಯಲ್ಲಿ ಸಂಚರಿಸುವವರು ನರಕಯಾತನೆ ಅನುಭವಿ ಸುತ್ತಿದ್ದಾರೆ. ಕೂಡಲೇ ಹದಗೆಟ್ಟ ರಸ್ತೆ ದುರಸ್ಥಿಗೆ ಮುಂದಾಗಬೇಕೆಂದು ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ತಾಲ್ಲೂಕ ಅಧ್ಯಕ್ಷ ಆಂಜನೇಯ್ಯ, ಗ್ರಾಮ ಘಟಕ ಅಧ್ಯಕ್ಷ ಭೀಮರಾಯ, ಪ್ರಮುಖರಾದ ಜಿಂದಪ್ಪ, ಸೂಗರೆಡ್ಡಿ, ಭೀಮಣ್ಣ ವತ್ತೂರು, ನಿಂಗಪ್ಪ ಕುಂಬಾರ, ದೇವೇಂದ್ರಪ್ಪ, ಶಾಂತಕುಮಾರ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net