ಚಿತ್ರಮಂದಿರಗಳಲ್ಲಿ 'ವಿಜಯಾನಂದ' ಅಬ್ಬರ

091222 Raichur Vijayananda Film
ರಾಯಚೂರಿನ ಮಿರಾಜ್ ಸಿನೆಮಾಸ್‌ನಲ್ಲಿ ಶುಕ್ರವಾರ ವಿಜಯಾನಂದ ಚಲನಚಿತ್ರ ವೀಕ್ಷಣೆಗೆ ಬಂದಿದ್ದ ಯುವಕರು.
Published on

ರಾಯಚೂರು: ವಿಆರ್‌ಎಲ್ ಸಮೂಹ ಸಂಸ್ಥೆಯ ಚೇರಮನ್ ಡಾ.ವಿಜಯ ಸಂಕೇಶ್ವರರ ಜೀವನಾಧರಿತ ವಿಜಯಾನಂದ ಚಲನಚಿತ್ರಕ್ಕೆ ಜಿಲ್ಲೆಯಲ್ಲಿ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ದೊರೆತಿದ್ದು, ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲೆಯ ಎಂಟು ಚಿತ್ರಮಂದಿರಗಳಲ್ಲಿ ಚಿತ್ರ ಶುಕ್ರವಾರ ಬಿಡುಗಡೆಗೊಂಡಿದ್ದು, ಜೀವನಾಧಾರಿತ ಕಥೆ ನಿರ್ದೇಶನ, ಛಾಯಾಗ್ರಹಣ, ಸಂಗೀತ ಸೇರಿದಂತೆ ಎಲ್ಲ ವಿಭಾಗಗಳ ಮೂಲಕ ಮನ ಗೆದ್ದಿದೆ ಎಂದು ಪ್ರೇಕ್ಷಕರು ಪ್ರಶಂಸೆ ವ್ಯಕ್ತಪಡಿಸಿದರು. ಒಂದು ಲಾರಿಯಿಂದ ದೇಶದಲ್ಲಿ ಅತಿದೊಡ್ಡ ಲಾಜಿಸ್ಟಿಕ್ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ ಡಾ.ವಿಜಯ ಸಂಕೇಶ್ವರ ಜೀವನದ ಹಾದಿ ಇಂದಿನ ಯುವ ಜನಾಂಗಕ್ಕೆ ಸ್ಫೂರ್ತಿದಾಯಕವಾಗಿದ್ದು, ಪ್ರತಿಯೊಬ್ಬರೂ ನೋಡಲೇ ಬೇಕು ಎಂದು ವೀಕ್ಷಕರು ಹೇಳಿದರು.

ಚಿತ್ರಕಥೆ, ಡಾ.ವಿಜಯ ಸಂಕೇಶ್ವರ ಪಾತ್ರದಲ್ಲಿ ಅಭಿನಯಿಸಿರುವ ನಟ ನಿಹಾಲ್ ಅಭಿನಯ ಹಾಗೂ ಹಾಡುಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಎಲ್ಲ ಪಾತ್ರಧಾರಿಗಳು ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ನಿಹಾಲ್ ಪಾತ್ರಕ್ಕೆ ಜೀವ ತುಂಬಿದ್ದಾರೆ ಎಂದು ಪ್ರೇಕ್ಷಕರು ತಿಳಿಸಿದರು. ರಾಯಚೂರಿನ ಮಿರಾಜ್ ಸಿನೆಮಾಸ್, ಸಿಂಧನೂರಿನ ಮಂಜುನಾಥ, ಲಿಂಗಸುಗೂರಿನ ಎಂಪೈರ್, ದೇವದುರ್ಗದ ಭರತ್, ಮಾನ್ವಿಯ ಅಪರ್ಣ, ಸಿರವಾರದ ಶಿವಮಾತಾ, ಮಸ್ಕಿಯ ಶರಣಬಸವೇಶ್ವರ ಹಾಗೂ ಪೋತ್ನಾಳದ ಎಸ್‌ಎ ಚಿತ್ರಮಂದಿರಗಳಲ್ಲಿ ವಿಜಯಾನಂದ ಬಿಡುಗಡೆಯಾಗಿದ್ದು, ಎಲ್ಲೆಡೆ ಉತ್ತಮ ಆರಂಭ ದೊರೆತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net