ಕೆಮಿಕಲ್ ಮಿಶ್ರಿತ ತ್ಯಾಜ್ಯ ನೀರು ಸಾಗಿಸುತ್ತಿದ್ದ ಟ್ಯಾಂಕರ್ ಲಾರಿ ವಶಕ್ಕೆ

Lorry
Published on

ರಾಯಚೂರು: ರಾಸಾಯನಿಕ ಮಿಶ್ರಿತ ತ್ಯಾಜ್ಯ ನೀರನ್ನು ಕೆರೆ, ಹಳ್ಳಗಳಿಗೆ ಸುರಿಯಲು ಹೊರಟ್ಟಿದ್ದ ಟ್ಯಾಂಕರನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ನಗರದ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಯಗಸನಹಳ್ಳಿ ಗ್ರಾಮದ ಬಳಿ ಜರುಗಿದೆ.

ಸೆ.20ರ ಬೆಳಿಗ್ಗೆ 5.30ಕ್ಕೆ ಕೆಮಿಕಲ್ ಫ್ಯಾಕ್ಟರಿಗಳಿಂದ ಹೊರಬರುವ ರಾಸಾಯನಿಕ ಮಿಶ್ರಿತ ತ್ಯಾಜ್ಯ ನೀರನ್ನು ಕೆರೆ, ಹಳ್ಳಗಳಿಗೆ ಬಿಡಲು ಕೆಎ 56-6760 ಸಂಖ್ಯೆಯ ಟ್ಯಾಂಕರ್‌ನಲ್ಲಿ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಹೆಗಸನಹಳ್ಳಿ ಗ್ರಾಮದ ಹತ್ತಿರ ಲಾರಿಯನ್ನು ತಡೆದಿದ್ದಾರೆ.

ವಿಚಾರಿಸಲು ಮುಂದಾದಾಗ ಪೊಲೀಸರನ್ನು ಕಂಡು ಚಾಲಕ ಪರಾರಿಯಾಗಿದ್ದಾನೆ. ಟ್ಯಾಂಕರನ್ನು ಪೊಲೀಸರು ಠಾಣೆಗೆ ತಂದಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಟ್ಯಾಂಕರ್ ಚಾಲಕ, ಟ್ಯಾಂಕರ್ ಮಾಲೀಕ ಹಾಗೂ ಕೆಮಿಕಲ್ ಫ್ಯಾಕ್ಟರಿ ಮಾಲೀಕರ ಪತ್ತೆಗೆ ತನಿಖೆ ಮುಂದುವರೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net