

ರಾಯಚೂರು: ನಗರದ ಓಪೆಕ್ ಆಸ್ಪತ್ರೆಯ ಕರೊನಾ ನಿಯಂತ್ರಣ ಚಿಕಿತ್ಸೆ ವಿಭಾಗದ ಐಸೋಲೇಷನ್ ಘಟಕದಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಜಿಲ್ಲೆಯ ವಿವಿಧ ಗ್ರಾಮಗಳ 34 ಜನರನ್ನು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ, ಎಸ್ಪಿ ಡಾ. ಸಿ.ಬಿ.ವೇದಮೂರ್ತಿ ಇನ್ನಿತರ ಅಧಿಕಾರಿಗಳು ಭಾನುವಾರ ಪುಷ್ಪಾರ್ಚನೆ ಮಾಡುವ ಮೂಲಕ ಶುಭ ಕೋರಿ ಆಂಬುಲೆನ್ಸ್‌ನಲ್ಲಿ ಮನೆಗೆ ಕಳುಹಿಸಿದರು.
ಮನೆಗೆ ಹೋದ ನಂತರ 14 ದಿನ ಕಡ್ಡಾಯವಾಗಿ ಹೋಮ್ ಕ್ವಾರಂಟೈನ್‌ನಲ್ಲಿರಬೇಕು, ಆರೋಗ್ಯದಲ್ಲಿ ತೊಂದರೆ ಕಾಣಿಸಿದರೆ ತಕ್ಷಣ ಆಶಾ ಅಥವಾ ಪೊಲೀಸರ ಗಮನಕ್ಕೆ ತರುವಂತೆ ಜಿಲ್ಲಾಧಿಕಾರಿ ಸೂಚಿಸಿದರು. 34 ಜನರಲ್ಲೂ ಲಕ್ಷಣಗಳಿಲ್ಲದ ಕಾರಣ ಮನೆಗೆ ಕಳುಹಿಸಲಾಯಿತು. ಮನೆಯಲ್ಲೇ ಇರುವಂತೆ ಎಲ್ಲರ ಕೈಗೂ ಸೀಲ್ ಹಾಕಲಾಗಿದೆ. ಇವರೆಲ್ಲರ ಮೇಲೆ ಆಯಾ ವಾರ್ಡ್, ಗ್ರಾಮದಲ್ಲಿನ ಆಶಾ, ಆ ವ್ಯಾಪ್ತಿಯ ಪೊಲೀಸರು ನಿಗಾ ವಹಿಸಲಿದ್ದಾರೆ ಎಂದರು.
ಎಸ್ಪಿ ಡಾ. ಸಿ.ಬಿ.ವೇದಮೂರ್ತಿ, ಡಿಎಚ್‌ಒ ಡಾ.ರಾಮಕೃಷ್ಣ, ರಿಮ್ಸ್ ಡೀನ್ ಡಾ.ಬಸವರಾಜ ಪೀರಾಪುರ, ಓಪೆಕ್ ವಿಶೇಷಾಧಿಕಾರಿ ಡಾ.ನಾಗರಾಜ ಗದ್ವಾಲ್, ಜಿಲ್ಲಾ ಸರ್ಜನ್ ಡಾ.ವಿಜಯ ಶಂಕರ್, ಡಿಎಸ್‌ಒ ಡಾ. ಕೆ.ನಾಗರಾಜ ಇತರರಿದ್ದರು.