ಸೋನಿಯಾಗಾಂಧಿಗೆ ಪಪ್ಪಿ ಗಿಫ್ಟ್​ ಕೊಟ್ಟ ರಾಹುಲ್!

rahul
ಸೋನಿಯಾಗಾಂಧಿ ಅವರಿಗೆ ರಾಹುಲ್ ನಾಯಿಮರಿ ಉಡುಗೊರೆಯಾಗಿ ಕೊಟ್ಟರು. ​
Published on

ನವದೆಹಲಿ: ಕಾಂಗ್ರೆಸ್​ ಸಂಸದ ರಾಹುಲ್ ಗಾಂಧಿ ತಮ್ಮ ತಾಯಿ ಸೋನಿಯಾ ಗಾಂಧಿ ಅವರಿಗೆ ಬುಧವಾರ ಪಪ್ಪಿ(ನಾಯಿಮರಿ) ಉಡುಗೊರೆಯಾಗಿ ಕೊಟ್ಟಿದ್ದಾರೆ.

ನಾಯಿ ಮರಿ ಹೆಸರು ನೂರಿ. ತನ್ನ ತಾಯಿಗೆ ನೂರಿಯನ್ನು ಗಿಫ್ಟ್ ಕೊಟ್ಟು, ವೀಡಿಯೋವನ್ನು ಯೂಟೂಬ್​ ಮತ್ತಿತರ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

ರಾಹುಲ್​ ಗೋವಾ ಪ್ರವಾಸವು ಆಗಸ್ಟ್‌ನಲ್ಲಿ ನಡೆದಿತ್ತು. ಆಗ ಕುಟುಂಬವೊಂದನ್ನು ಭೇಟಿಯಾಗಿದ್ದರು. ಜ್ಯಾಕ್ ರಸೆಲ್ ಟೆರಿಯರ್‌ ತಳಿಯ ನಾಯಿ ಅವರ ಬಳಿ ಇದ್ದುದು ಗೊತ್ತಾಗಿ ಅದರ ಮರಿಯನ್ನು ದೆಹಲಿಗೆ ತರರಿಸಿಕೊಂಡಿದ್ದಾರೆ. ಬಳಿಕ ತನ್ನ ತಾಯಿಗೆ ಅವರ ಮನೆಗೆ ತೆರಳಿ ಮುದ್ದಾದ ನೂರಿಯನ್ನು ಕೊಟ್ಟಿದ್ದಾರೆ.

ಅಮ್ಮನಿಗೆ ಕೊಟ್ಟ ಉಡುಗೊರೆಯ ವೀಡಿಯೋವನ್ನು ಯೂಟೂಬ್​ನಲ್ಲಿ ಅಪ್​ಲೋಡ್​ ಮಾಡುವ ಮೂಲಕ ತಮ್ಮ ಕುಟುಂಬದ ಹೊಸ ಸದಸ್ಯ ನೂರಿಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಸೋನಿಯಾಗಾಂಧಿ ನೂರಿಯನ್ನು ಮಗುವಿನಂತೆ ಎತ್ತಿಕೊಂಡಿರುವುದು ವೀಡಿಯೋದಲ್ಲಿ ಕಂಡುಬಂದಿದೆ.

ಗೋವಾ ಮೂಲದ ನಾಯಿ ಸಾಕಣೆದಾರರಾದ ಶರ್ವಾಣಿ ಪಿತ್ರೆ ಮತ್ತು ಪತಿ ಸ್ಟಾನ್ಲಿ ಬ್ರಗಾಂಕಾ ಅವರಿಂದ ಈ ನಾಯಿಮರಿಯನ್ನು ರಾಹುಲ್​ ಪಡೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net