ಮತದಾರರ ಪಟ್ಟಿಯಲ್ಲಿ ತಮ್ಮ ಕುಟುಂಬದ ಹೆಸರಿಲ್ಲವೆಂದಿದ್ದ ಮಹಿಳೆ ಈಗ ಯೂಟರ್ನ್; ಅವರು ಹೇಳಿಕೊಟ್ಟಂತೆ ಹೇಳಿದ್ದೇನೆ ಎಂದ ರಂಜು ದೇವಿ ! |​​ vote chori

Rahul Gandhi
Published on

Vote chori: ಬಿಹಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮತದಾರ ಅಧಿಕಾರ ಯಾತ್ರೆಯು ವಿವಾದಕ್ಕೆ ಸಿಲುಕಿದ್ದು, ತನ್ನ ಕುಟುಂಬದ ಹೆಸರುಗಳು ಮತದಾರರ ಪಟ್ಟಿಯಲ್ಲಿ ಕಾಣೆಯಾಗಿವೆ ಎಂದು ಆರೋಪಿಸಿದ್ದ ಮಹಿಳೆಯೊಬ್ಬರು ಈಗ ಯೂಟರ್ನ್​​ ಹೊಡೆದಿದ್ದಾರೆ.

ಬಿಹಾರದ ಮತದಾರರ ಪಟ್ಟಿಯಲ್ಲಿನ ಅಕ್ರಮಗಳನ್ನು ಎತ್ತಿ ತೋರಿಸಲು ಪಾದಯಾತ್ರೆ ನಡೆಸುತ್ತಿದ್ದ ರಾಹುಲ್ ಗಾಂಧಿ, ಚಾಪ್ಲಾ ಗ್ರಾಮದ ನಿವಾಸಿ ರಂಜು ದೇವಿ ಅವರಿಗೆ ಆಗಸ್ಟ್ 17ರಂದು ಭೇಟಿಯಾದರು ಈ ವೇಳೆ ಕ್ಯಾಮೆರಾಗಳ ಮುಂದೆ ತಮ್ಮ ಕುಟುಂಬದ ಆರು ಸದಸ್ಯರ ಹೆಸರುಗಳನ್ನು ಅಳಿಸಲಾಗಿದೆ ಎಂದು ಅವರು ಹೇಳಿಕೊಂಡಿದ್ದರು. ಇದಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಂಜು ದೇವಿ, ಈ ವಿಷಯದಲ್ಲಿ ತಮ್ಮ ಕುಟುಂಬವನ್ನು ದಾರಿ ತಪ್ಪಿಸಲಾಗಿದ್ದು, ಮತದಾರರ ಪಟ್ಟಿಯಲ್ಲಿ ಅವರ ಪರಿವಾರದ ಎಲ್ಲರ ಹೆಸರುಗಳು ಇವೆ, ನಾವು ಹಳ್ಳಿ ಜನರಾಗಿದ್ದು, ನಮಗೆ ಹೇಳಿಕೊಟ್ಟಂತೆ ನಾವು ಹೇಳಿದ್ದೇವೆ ಎಂದರು.

ನಮ್ಮ ಕುಟುಂಬದ ಹೆಸರುಗಳು ಮತದಾರರ ಪಟ್ಟಿಯಲ್ಲಿಲ್ಲ ಎಂದು ವಾರ್ಡ್ ಸದಸ್ಯರು ಮತ್ತು ವಾರ್ಡ್ ಕಾರ್ಯದರ್ಶಿ ನಮಗೆ ಹೇಳಿದರು, ನಂತರ ಅವರೆ ತಮ್ಮನ್ನು ರಾಹುಲ್ ಗಾಂಧಿ ಬಳಿಗೆ ಕರೆದೊಯ್ದಿರುವುದಾಗಿ ತಿಳಿಸಿದರು.

ಈ ಘಟನೆಯು ಮತ ಕಳ್ಳತನ ಆರೋಪ ಮಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಮುಜುಗರವನ್ನುಂಟು ಮಾಡಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net