ವಿದ್ಯಾರ್ಥಿನಿಯೊಂದಿಗೆ ಪುಶ್​ಅಪ್​ ಚಾಲೆಂಜ್​ನಲ್ಲಿ ರಾಹುಲ್​ ಗಾಂಧಿ! ಫಿಟ್​ ರಾಹುಲ್​ ಅದೆಷ್ಟು ಫಾಸ್ಟ್​ ಆಗಿದ್ದಾರೆ ನೋಡಿ..

rahu;
Published on

ಚೆನ್ನೈ: ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಯ ಆ್ಯಬ್ಸ್​ ಫೋಟೋ ಸಕತ್​ ವೈರಲ್​ ಆಗಿತ್ತು. ಮೀನುಗಾರರೊಂದಿಗೆ ಸಮುದ್ರಕ್ಕೆ ಹಾರಿ ಒದ್ದೆ ಬಟ್ಟೆಯಲ್ಲಿದ್ದ ರಾಹುಲ್​ರ ಫೋಟೊಕ್ಕೆ ಜನರು ಫಿದಾ ಆಗಿದ್ದರು. ರಾಜಕೀಯದಲ್ಲಿ ತೊಡಗಿಸಿಕೊಂಡಿರುವ ರಾಹುಲ್​ ಇಷ್ಟೊಂದು ಫಿಟ್​ ಇದ್ದಾರಾ ಎಂದು ಹುಬ್ಬೇರಿಸಿಕೊಂಡು ನೋಡಿದ್ದರು. ರಾಹುಲ್​ರ ಫಿಟ್​ನೆಸ್​ ಪ್ರದರ್ಶನ ಅಷ್ಟಕ್ಕೇ ಸೀಮಿತವಾಗಿಲ್ಲ. ಇದೀಗ ಅವರ ಪುಶ್​ಅಪ್​ ಪ್ರದರ್ಶನವನ್ನೂ ನೀವು ನೋಡಬಹುದು.

ರಾಹುಲ್​ ಗಾಂಧಿ ತಮಿಳುನಾಡು ಪ್ರವಾಸದಲ್ಲಿದ್ದಾರೆ. ಈ ವೇಳೆ ಅವರು ಮುಲಗುಮುಡುವಿನ ಸೇಂಟ್ ಜೋಸೆಫ್ಸ್ ಮೆಟ್ರಿಕ್ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಅದರಲ್ಲಿ 10ನೇ ತರಗತಿಯ ಮೆರೋಲಿನ್ ಶೆನಿಘಾ ಹೆಸರಿನ ವಿದ್ಯಾರ್ಥಿನಿ ಎದ್ದು ನಿಂತು, "ನೀವು ನನ್ನೊಂದಿಗೆ 15 ಪುಶ್​ಅಪ್​ ಮಾಡುವ ಸವಾಲನ್ನು ಸ್ವೀಕರಿಸಬಲ್ಲಿರೇ" ಎಂದು ಪ್ರಶ್ನಿಸಿದ್ದಾಳೆ. ಅದಕ್ಕೆ ಒಪ್ಪಿದ ರಾಹುಲ್​ ಆಕೆಯೊಂದಿಗೆ ಪುಶ್​ಅಪ್​ ಮಾಡಿದ್ದಾರೆ. ವಿದ್ಯಾರ್ಥಿನಿ ನಿಧಾನವಾಗಿ ಪುಶ್​ಅಪ್​ ಮಾಡಿದರೆ, ರಾಹುಲ್​ ಅತ್ಯಂತ ವೇಗವಾಗಿ ಪುಶ್​ಅಪ್​ ಮಾಡಿ ಮುಗಿಸಿದ್ದಾರೆ.

ಅದಾದ ಮೇಲೆ ಪುಶ್​ಅಪ್​ ನಿಲ್ಲಿಸಿ, ಆಕೆ ವಿನ್​ ಆಗಿದ್ದಾಳೆ ಎಂದು ರಾಹುಲ್​ ಹೇಳಿದ್ದಾರೆ. ಅದಾದ ಮೇಲೆ ರಾಹುಲ್​ ವಿದ್ಯಾರ್ಥಿನಿಗೆ ಸವಾಲೊಂದನ್ನು ಎಸೆದಿದ್ದಾರೆ. ನೀವು ಒಂದೇ ಕೈನಲ್ಲಿ ಪುಶ್​ಅಪ್​ ಮಾಡಬಲ್ಲಿರೇ ಎಂದು ಕೇಳಿದ್ದಾರೆ. ನಂತರ ತಾವು ಒಂದೇ ಕೈನಲ್ಲಿ ಒಂದು ಪುಶ್​ಅಪ್​ ಮಾಡಿದ್ದಾರೆ. ಈ ವಿಡಿಯೋವನ್ನು ಸ್ವತಃ ರಾಹುಲ್​ ಗಾಂಧಿಯವರೇ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್​)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net