VIRAL | ರಸ್ತೆ ಬದಿ ಪೊದೆಯಲ್ಲಿ ರಾಹುಲ್: ವಿಡಿಯೋ ವೈರಲ್​.. ಹಿನ್ನೆಲೆ ಏನು..?

rahul
Published on

ಬೆಂಗಳೂರು: ಉತ್ತರ ಪ್ರದೇಶದ ಪೊದೆಯೊಂದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಬಿದ್ದ ವಿಡಿಯೋವೊಂದು ಇದೀಗ ವೈರಲ್​ ಆಗುತ್ತಿದೆ. ಮತ್ತೊಂದೆಡೆ ರಾಹುಲ್​ ಹಾಗೆ ಪೊದೆಯಲ್ಲಿ ಕಾಣಿಸಿದ ಹಿನ್ನೆಲೆಯ ಬಗ್ಗೆಯೂ ಭಾರಿ ಚರ್ಚೆ ನಡೆಯುತ್ತಿದೆ.

ಉತ್ತರ ಪ್ರದೇಶದ ಹತ್ರಾಸ್​ನಲ್ಲಿ ನಡೆದ ಅತ್ಯಾಚಾರ ಪ್ರಕರಣ ಸಂಬಂಧ ಸೋದರಿ ಪ್ರಿಯಾಂಕಾ ವಾಧ್ರಾ ಹಾಗೂ ಕಾಂಗ್ರೆಸ್​ನ ಇತರ ಹಲವು ನಾಯಕರೊಂದಿಗೆ ರಾಹುಲ್​ ಗುರುವಾರ ಅಲ್ಲಿಗೆ ತೆರಳಿದ್ದರು. ಆದರೆ ಮಾರ್ಗಮಧ್ಯೆ ಪೊಲೀಸರು ಅವರ ವಾಹನ ತಡೆದಿದ್ದರು. ಅದಾಗ್ಯೂ ವಾಹನದಿಂದ ಇಳಿದು ಹತ್ರಾಸ್​ನತ್ತ ಸಾಗಿದ ರಾಹುಲ್​ ಮತ್ತಿತರರನ್ನು ಪೊಲೀಸರು ತಡೆಯುವ ಸಂದರ್ಭದಲ್ಲಿ ಮಾತಿನ ಚಕಮಕಿ ಜತೆಗೆ ನೂಕಾಟವೂ ಉಂಟಾಗಿತ್ತು.

ಪೊಲೀಸರು ತಡೆದರೂ ಮುಂದೆ ಹೋಗಲು ಯತ್ನಿಸಿದ ರಾಹುಲ್​ ಕೆಲವೇ ಕ್ಷಣದಲ್ಲಿ ಪಕ್ಕದ ಪೊದೆಗೆ ಬಿದ್ದ ದೃಶ್ಯ ವೈರಲ್​ ಆಗುತ್ತಿರುವ ವಿಡಿಯೋದಲ್ಲಿ ಸೆರೆಯಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರಾಹುಲ್​ ತಮ್ಮನ್ನು ಪೊಲೀಸರು ತಳ್ಳಿದರು ಎಂದು ಆರೋಪಿಸಿದ್ದಾರೆ. ಆದರೆ ಪೊಲೀಸರು ತಳ್ಳಿಲ್ಲ, ರಾಹುಲ್​ ಅವರೇ ಪೊದೆಗೆ ನೆಗೆದಿದ್ದಾರೆ ಎಂದು ನೆಟ್ಟಿಗರು ಹೇಳುತ್ತಿದ್ದು, ವಿಡಿಯೋ ಕೂಡ ಅದಕ್ಕೆ ಪುಷ್ಟಿ ನೀಡುವಂತೆಯೇ ಇದೆ. ಇನ್ನೂ ಈ ಬಗ್ಗೆ ಚರ್ಚೆ ಆಗುತ್ತಿದ್ದು, ವಿಡಿಯೋ ವೈರಲ್​ ಆಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net