

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿನ್ನೆ ಚೀನಾದ ಸ್ಟ್ರಾಟೆಜಿಕ್ ಮತ್ತು ಟ್ಯಾಕ್ಟಿಕ್ ಯೋಜನೆಗಳ ವಿವರ ನೀಡಿದ್ರು. ಇವತ್ತು ಬೆಳಗ್ಗೆಯೇ ಕೇಂದ್ರ ಸರ್ಕಾರದ ಕಾಲೆಳೆದ ಅವರು, ಫೆಬ್ರವರಿ ತಿಂಗಳಿಂದೀಚೆಗೆ ಸಾಧನೆಯ ಪಟ್ಟಿಯನ್ನು ಪ್ರಕಟಿಸಿ ಪ್ರತಿಕ್ರಿಯೆಯನ್ನು ಎದುರು ನೋಡ್ತಿದ್ದಾರೆ!
ಕರೊನಾ ವೈರಸ್ ಸೋಂಕು ದೇಶವ್ಯಾಪಿ ಹೆಚ್ಚಾಗುತ್ತಿರುವಂತೆ ಕೇಂದ್ರ ಸರ್ಕಾರ ಹೇಗೆ ಕೆಲಸ ಮಾಡಿತ್ತು. ಜನರ ಅಗತ್ಯಗಳಿಗೆ ಹೇಗೆ ಸ್ಪಂದಿಸಿತ್ತು ಎಂಬುದನ್ನು ಹಿಂದಿ ಭಾಷೆಯಲ್ಲಿ ಮಾಡಿದ ಟ್ವೀಟ್ನಲ್ಲಿ ಹೇಳಿಕೊಂಡಿದ್ದಾರೆ. ಇದರಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮದಿಂದ ಹಿಡಿದು ರಾಜಸ್ಥಾನದ ರಾಜಕೀಯ ಬೆಳವಣಿಗೆ ತನಕದ ರಾಜಕಾರಣವನ್ನು ಪಟ್ಟಿ ಮಾಡಿದ್ದಾರೆ.
ರಾಜಸ್ಥಾನದ ರಾಜಕೀಯ ಬೆಳವಣಿಗೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ನೀಡಿದ ಮೊದಲ ಪ್ರತಿಕ್ರಿಯೆ ಇದು ಎಂದು ವಿಶ್ಲೇಷಿಸಲಾಗುತ್ತಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಪಕ್ಷದ ಆಂತರಿಕ ಭಿನ್ನಮತದಿಂದಾಗಿ ಬಳಲಿದ್ದು, ಅಲ್ಲಿನ್ನೂ ಪರಿಸ್ಥಿತಿ ಸುಧಾರಿಸಿಲ್ಲ. ಏತನ್ಮಧ್ಯೆ ರಾಹುಲ್ ಗಾಂಧಿ ಅವರ ಈ ಪ್ರತಿಕ್ರಿಯೆ ರಾಜಕೀಯವಾಗಿ ಗಮನಸೆಳೆದಿದೆ. (ಏಜೆನ್ಸೀಸ್)