More

    ಕೊನೇ ಎಸೆತದಲ್ಲಿ ಭಾರತಕ್ಕೆ ರೋಚಕ ಗೆಲುವು: ರಾಹುಲ್​ ಡ್ರಾವಿಡ್​ ಸಂಭ್ರಮಿಸಿದ ಪರಿ ಕಂಡು ಹುಬ್ಬೇರಿಸಿದ ನೆಟ್ಟಿಗರು

    ನವದೆಹಲಿ: ನಿನ್ನೆ (ಅ.24) ಆಸ್ಟ್ರೇಲಿಯಾದ ಮೆಲ್ಬೋರ್ನ್​ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್​ ಟೂರ್ನಿಯ ಸೂಪರ್​ 12 ಹಂತದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ರೋಚಕ ಗೆಲುವು ದಾಖಲಿಸಿದ್ದು, ಹಲವು ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು. ಅದ್ಭುತ ಆಟವಾಡಿದ ವಿರಾಟ್​ ಕೊಹ್ಲಿ ಜಯದ ಬೆನ್ನಲ್ಲೇ ಮೈದಾನದಲ್ಲೇ ಭಾವುಕರಾದ ಕ್ಷಣ ಕ್ರೀಡಾಭಿಮಾನಿಗಳ ಹೃದಯ ತಟ್ಟಿತು. ಇನ್ನೊಂದೆಡೆ ಟೀಮ್​ ಇಂಡಿಯಾದ ಮುಖ್ಯ ತರಬೇತುದಾರ ರಾಹುಲ್​ ಡ್ರಾವಿಡ್​ ಅವರು ಗೆಲುವನ್ನು ಸಂಭ್ರಮಿಸಿದ ವಿಡಿಯೋ ಇದೀಗ ನೆಟ್ಟಿಗರ ಗಮನ ಸೆಳೆದಿದೆ.

    ಕೊನೆಯ ಎಸೆತದಲ್ಲಿ ರವಿಚಂದ್ರನ್​ ಅಶ್ವಿನ್​ ಅವರು ಬಾಲನ್ನು ಬೌಂಡರಿಗೆ ಅಟ್ಟುವ ಮೂಲಕ ಗೆಲುವನ್ನು ಖಾತರಿ ಪಡಿಸುತ್ತಿದ್ದಂತೆ ಡಗ್​ಔಟ್​ನಲ್ಲಿದ್ದ ರಾಹುಲ್​ ಡ್ರಾವಿಡ್​ ಅವರು ಎದ್ದುನಿಂತು ಸಂಭ್ರಮಿಸಿದ್ದು, ವಿಶೇಷವಾಗಿತ್ತು. ಏಕೆಂದರೆ, ಶಾಂತ ಸ್ವಭಾವದ ರಾಹುಲ್​, ತುಂಬಾ ಆಕ್ರೋಶಭರಿತರಾಗಿ ಸಂಭ್ರಮಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರ ಮನ ಗೆದ್ದಿದೆ.

    ನಿನ್ನೆ ನಡೆದ ಪಂದ್ಯದಲ್ಲಿ ಟಾಸ್​​ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ರೋಹಿತ್ ಶರ್ಮಾ ಪಡೆ, ಎದುರಾಳಿ ಪಾಕಿಸ್ತಾನ ತಂಡದ 8 ವಿಕೆಟ್ ಕಬಳಿಸಿ 159 ರನ್​ಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಬಳಿಕ 160ರನ್​ಗಳ ಗುರಿ ಬೆನ್ನು ಹತ್ತಿದ ಭಾರತ, ಕೇವಲ 31 ರನ್​ಗೆ ಪ್ರಮುಖ 4 ವಿಕೆಟ್​ ಕಳೆದುಕೊಳ್ಳುವ ಮೂಲಕ ಸೋಲಿನ ದವಡೆಗೆ ಸಿಲುಕಿತು. ಆದರೆ, ಈ ಹಂತದಲ್ಲಿ ವಿರಾಟ್​ ಕೊಹ್ಲಿ ಜೊತೆಯಾದ ಹಾರ್ದಿಕ್​ ಪಾಂಡ್ಯ ನೂರು ರನ್​ಗಳ ಜೊತೆಯಾಟ ಮೂಲಕ ಪಂದ್ಯವನ್ನು ಮತ್ತೆ ಭಾರತ ಕಡೆಗೆ ತಿರುಗಿಸಿದರು.

    ವಿರಾಟ್​ ಕೊಹ್ಲಿ (53 ಎಸೆತಗಳಲ್ಲಿ ಅಜೇಯ 82) ಮತ್ತು ಹಾರ್ದಿಕ್​ ಪಾಂಡ್ಯ (40) ಅವರ ಅಮೋಘ ಬ್ಯಾಟಿಂಗ್​ ನೆರವಿನಿಂದ ಟೀಮ್​ ಇಂಡಿಯಾ ಅದ್ಭುತ ಗೆಲುವು ದಾಖಲಿಸಿತು. ಈ ಮೂಲಕ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. (ಏಜೆನ್ಸೀಸ್​)

    ಬ್ರಿಟನ್​ ಪ್ರಧಾನಿ ರೇಸ್​ನಿಂದ ಹಿಂದೆ ಸರಿದ ಬೋರಿಸ್​ ಜಾನ್ಸನ್​: ರಿಷಿಗೆ ಪ್ರಧಾನಿ ಪಟ್ಟ ಒಲಿಯುವ ಸಾಧ್ಯತೆ

    ಕೊಹ್ಲಿಯಿಂದ ಮಾತ್ರ ಅಂತಹ ಸಿಕ್ಸರ್ ಸಿಡಿಸೋದಕ್ಕೆ ಸಾಧ್ಯ; ಹಾರ್ದಿಕ್ ಪಾಂಡ್ಯಾ

    ಕುಮಾರಣ್ಣ ಸಿಎಂ ಆದ್ರೆ ಮೊದಲು ಸಂತೋಷ ಪಡೋದು ನಾನೇ… ಎಂದ ಬಿಜೆಪಿ ಶಾಸಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts