ವಿಶ್ವಕಪ್​ ಸೋಲಿನ ಬಳಿಕವೂ ಭವಿಷ್ಯದ ಗುಟ್ಟು ಬಿಟ್ಟುಕೊಡದ ದ್ರಾವಿಡ್!​

dravid web
Published on

ಅಹಮದಾಬಾದ್​: ಟೀಮ್​ ಇಂಡಿಯಾದ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ಒಪ್ಪಂದ ವಿಶ್ವಕಪ್​ನೊಂದಿಗೆ ಕೊನೆಗೊಂಡಿದೆ. ಆದರೆ ಹುದ್ದೆಯಲ್ಲಿ ಮುಂದುವರಿಯುವ ಅಥವಾ ಪದತ್ಯಾಗ ಮಾಡುವ ಕುರಿತು ಅವರು ಫೈನಲ್​ ಬಳಿಕವೂ ಗುಟ್ಟುಬಿಟ್ಟುಕೊಡಲಿಲ್ಲ.

"ಆ ಬಗ್ಗೆ ನಾನಿನ್ನೂ ಯೋಚಿಸಿಲ್ಲ. ಯಾಕೆಂದರೆ ಇದುವರೆಗೆ ನನ್ನ ಗಮನ ವಿಶ್ವಕಪ್​ ಮೇಲೆ ಮಾತ್ರ ಇತ್ತು' ಎಂದು 50 ವರ್ಷದ ದ್ರಾವಿಡ್​ ಹೇಳಿದ್ದಾರೆ. ಟೂರ್ನಿಯುದ್ದಕ್ಕೂ ಬಹುತೇಕ ತೆರೆಮರೆಯಲ್ಲಿದ್ದ ದ್ರಾವಿಡ್​, ಭಾನುವಾರ ಫೈನಲ್​ ಸೋಲಿನ ಬಳಿಕ ಬೇರೆಯವರನ್ನು ಕಳುಹಿಸುವ ಬದಲಾಗಿ ತಾವೇ ಸುದ್ದಿಗೋಷ್ಠಿಗೆ ಹಾಜರಾಗಿದ್ದು ವಿಶೇಷ ಮೆಚ್ಚುಗೆಗೂ ಪಾತ್ರವಾಗಿದೆ.

ಐಸಿಸಿ ಟ್ರೋಫಿ ಗೆಲುವೊಂದನ್ನು ಬಿಟ್ಟು ದ್ರಾವಿಡ್​ ಅವಧಿಯಲ್ಲಿ ಭಾರತ ಉತ್ತಮ ಯಶಸ್ಸನ್ನೇ ಕಂಡಿದೆ. ಹೀಗಾಗಿ ಅದೊಂದನ್ನು ಸಾಧಿಸುವವರೆಗೆ ದ್ರಾವಿಡ್​ ಹುದ್ದೆಯಲ್ಲಿ ಮುಂದುವರಿದರೆ ಅಚ್ಚರಿಯೂ ಇಲ್ಲ. ದ್ರಾವಿಡ್​ ಮನಸ್ಸು ಮಾಡದಿದ್ದರೆ ಎನ್​ಸಿಎ ಮುಖ್ಯಸ್ಥ ವಿವಿಎಸ್​ ಲಕ್ಷ$್ಮಣ್​ ಕೋಚ್​ ಆಗಿ ಪೂರ್ಣ ಪ್ರಮಾಣದ ಅಧಿಕಾರ ವಹಿಸಿಕೊಳ್ಳುವ ನಿರೀಕ್ಷೆಯೂ ಹೆಚ್ಚಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net