ನವದೆಹಲಿ: ಖ್ಯಾತ ಮಾಜಿ ಕ್ರಿಕೆಟಿಗ ಹಾಗೂ ಟೀಮ್ ಇಂಡಿಯಾದ ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತೊಮ್ಮೆ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಆದರೆ, ಈ ಬಾರಿ ಟೀಮ್ ಇಂಡಿಯಾಗೆ ಅಲ್ಲ ಬದಲಾಗಿ ಐಪಿಎಲ್ನಲ್ಲಿ ತಂಡವೊಂದರ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಈ ವಿಚಾರ ಬಹಳ ಸಮಯದಿಂದ ಸುದ್ದಿಯಲ್ಲಿದ್ದರೂ ಈಗ ಕೆಲವು ವರದಿಗಳು ಇದನ್ನು ಬಲಪಡಿಸುತ್ತಿವೆ.
ಇಎಸ್ಪಿಎನ್ ಕ್ರಿಕ್ ಇನ್ಫೋ ಪ್ರಕಾರ ರಾಜಸ್ಥಾನ ರಾಯಲ್ಸ್ ತಂಡ ತನ್ನ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರನ್ನು ನೇಮಿಸಿದೆ. ಮುಂದಿನ ಐಪಿಎಲ್ 2025ರ ಸೀಸನ್‌ನಿಂದ ದ್ರಾವಿಡ್ ಅವರು ರಾಜಸ್ಥಾನ ರಾಯಲ್ಸ್ ತಂಡದ ಮುಖ್ಯ ಕೋಚ್ ಆಗಲಿದ್ದಾರೆ. ಆರ್‌ಆರ್ ಮ್ಯಾನೇಜ್‌ಮೆಂಟ್‌ನಿಂದ ಅಧಿಕೃತ ಪ್ರಕಟಣೆ ಇನ್ನಷ್ಟೇ ಬರಬೇಕಿದೆ ಎಂದು ವರದಿಯಾಗಿದೆ.
ರಾಹುಲ್ ದ್ರಾವಿಡ್ ಈ ಹಿಂದೆ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಮತ್ತು ಮೆಂಟರ್ ಆಗಿ ಸೇವೆ ಸಲ್ಲಿಸಿದ್ದರು. ಕ್ರಿಕೆಟ್ನಲ್ಲಿ ಮುಖ್ಯ ಕೋಚ್ ಆಗಿ ದ್ರಾವಿಡ್ ಅವರ ದಾಖಲೆ ಉತ್ತಮವಾಗಿದೆ. ಅಂಡರ್ 19 ವಿಶ್ವಕಪ್ನಿಂದ ಹಿಡಿದು ಈ ವರ್ಷ ಟಿ20 ವಿಶ್ವಕಪ್ ಗೆಲ್ಲುವವರೆಗೂ ದ್ರಾವಿಡ್ ಕೋಚ್ ಆಗಿ ಯಶಸ್ವಿಯಾಗಿದ್ದಾರೆ. ದ್ರಾವಿಡ್ ಅವರ ಕೋಚಿಂಗ್ ಅಡಿಯಲ್ಲಿ ಟೀಮ್ ಇಂಡಿಯಾ 2022ರ ಟಿ20 ವಿಶ್ವಕಪ್ ಸೆಮಿಫೈನಲ್, ಹಾಗೆಯೇ 2023ರಲ್ಲಿ WTC ಫೈನಲ್ ಮತ್ತು ಅದೇ ವರ್ಷದಲ್ಲಿ ಏಕದಿನ ವಿಶ್ವಕಪ್ ಫೈನಲ್ ಆಡಿತು. ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಒಂದೇ ಒಂದು ಸೋಲನ್ನು ಕಾಣದೆ ಫೈನಲ್ ತಲುಪಿ, ಕೊನೆಯ ಹಂತದಲ್ಲಿ ಟೀಮ್ ಇಂಡಿಯಾ ಮುಗ್ಗರಿಸಿತು.
ರಾಹುಲ್ ದ್ರಾವಿಡ್ ಅವರ ಕೋಚಿಂಗ್‌ನಲ್ಲಿ ರೋಹಿತ್ ಪಡೆ ಏಷ್ಯಾಕಪ್ ಗೆದ್ದಿತ್ತು. ಆ ಬಳಿಕ 2024ರ ಪ್ರತಿಷ್ಠಿತ ಟಿ20 ವಿಶ್ವಕಪ್ ಗೆದ್ದು ಚಾಂಪಿಯನ್ ಆಯಿತು. ವಿಶ್ವಕಪ್‌ನೊಂದಿಗೆ ಅವರ ಅಧಿಕಾರಾವಧಿ ಮುಗಿದ ಕಾರಣ, ದ್ರಾವಿಡ್ ಪ್ರಸ್ತುತ ಯಾವುದೇ ಜವಾಬ್ದಾರಿ ಇಲ್ಲದೇ ಖಾಲಿ ಕುಳಿತಿದ್ದಾರೆ. ಸಾಕಷ್ಟು ಅನುಭವದ ಜೊತೆಗೆ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಟಿ20 ವಿಶ್ವಕಪ್ ಗೆದ್ದು ಬೀಗಿರುವ ದ್ರಾವಿಡ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಲು ರಾಜಸ್ಥಾನ ರಾಯಲ್ಸ್ ತೀರ್ಮಾನಿಸಿದೆ. ಅಲ್ಲದೆ, ಕುಮಾರ ಸಂಗಕ್ಕಾರ ಅವರನ್ನು ತಂಡದ ನಿರ್ದೇಶಕರಾಗಿ ಮುಂದುವರಿಸಿದರೆ, ವಿಕ್ರಮ್ ರಾಥೋಡ್ ಅವರನ್ನು ಸಹಾಯಕ ಕೋಚ್ ಆಗಿ ಆರ್‌ಆರ್ ಮ್ಯಾನೇಜ್‌ಮೆಂಟ್ ನೇಮಿಸಿಕೊಳ್ಳಲಿದೆ ಎಂದು ವರದಿಯಾಗಿದೆ. (ಏಜೆನ್ಸೀಸ್)
RAJASTHAN ROYALS UPDATES…!!!! [Espn Cricinfo]
– Rahul Dravid as Head Coach.
– Kumar Sangakkara as Director of cricket.
– Vikram Rathour as Assistant Coach. pic.twitter.com/4ryChbUA5m— Johns. (@CricCrazyJohns) September 4, 2024
ನಮ್ಮತ್ರ ಇದೆಲ್ಲ ನಡೆಯಲ್ಲ… ಟ್ರೋಫಿ ಜತೆ ಮಲಗಿ ಭಾರತಕ್ಕೆ ವಾರ್ನಿಂಗ್ ಕೊಟ್ರಾ ಬಾಂಗ್ಲಾ ಕ್ಯಾಪ್ಟನ್?