More

    ಜೈಲಿನ ಅಧಿಕಾರಿಗೇ ಗ್ರೀಟಿಂಗ್​ ಕೊಟ್ಟ ರಾಗಿಣಿ; ಇಬ್ಬರ ನಡವಳಿಕೆ ಹೇಗಿದೆ ಗೊತ್ತಾ?

    ಬೆಂಗಳೂರು: ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣದ ಮುಖ್ಯ ಆರೋಪಿಗಳಾದ ರಾಗಿಣಿ ಮತ್ತು ಸಂಜನಾ ಜೈಲು ಸೇರಿ ಎರಡು ತಿಂಗಳಿಗೂ ಹೆಚ್ಚಾಗಿದೆ. ರಾಗಿಣಿಗೆ ಜಾಮೀನು ನೀಡಲು ಹೈ ಕೋರ್ಟ್​ ಒಪ್ಪದ ಹಿನ್ನೆಲೆಯಲ್ಲಿ ಇನ್ನೂ ಜೈಲೂಟವನ್ನೇ ತಿನ್ನುವಂತಹ ಪರಿಸ್ಥಿತಿ ನಟಿಗೆ ಬಂದೊದಗಿದೆ. ಈ ನಟಿಯರು ಜೈಲಿನಲ್ಲಿ ಏನು ಮಾಡುತ್ತಿದ್ದಾರೆ? ಹೇಗಿದ್ದಾರೆ? ಎನ್ನುವ ಪ್ರಶ್ನೆಗಳಿಗೆ ಇಲ್ಲಿದೆ ಮಾಹಿತಿ.

    ಇದನ್ನೂ ಓದಿ: ವಿಧಾನಸಭೆಯ ಮುಂದೆಯೇ ಬೆಂಕಿ ಹಚ್ಚಿಕೊಂಡ ತಾಯಿ-ಮಗ! ನ್ಯಾಯ ಕೊಡಿಸದ ಪೊಲೀಸರು

    ‘ ತುಪ್ಪ ಬೇಕಾ ತುಪ್ಪಾ’ ಎಂದು ಪಡ್ಡೆ ಹುಡುಗರ ನಿದ್ದೆ ಕದ್ದಿದ್ದ ರಾಗಿಣಿ ಜೈಲಿನಲ್ಲಿ ಅತ್ಯಂತ ಸಭ್ಯ ಮಹಿಳೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆರ್ಟ್​ ಮತ್ತು ಕ್ರಾಫ್ಟ್​ ಎಕ್ಸ್​ಪರ್ಟ್​ ಆಗಿ ಹೊರಹೊಮ್ಮುತ್ತಿದ್ದಾರೆ. ನಟಿ ಹಳೆಯ ಪೇಪರ್​ ಮತ್ತು ಕೆಲ ಬೇರೆ ಬೇರೆ ವಸ್ತುಗಳನ್ನು ಬಳಸಿಕೊಂಡು ಗ್ರೀಟಿಂಗ್​​ಗಳನ್ನು ಮಾಡುತ್ತಿದ್ದಾರೆ. ಜೈಲಿನ ಅಧಿಕಾರಿಗಳಿಗೂ ಗ್ರೀಟಿಂಗ್​ ಕೊಟ್ಟಿದ್ದಾರೆ. ರಾಗಿಣಿ ಗ್ರೀಟಿಂಗ್​ ಕೊಟ್ಟಾಕ್ಷಣ ಅಧಿಕಾರಿಗಳು ಅದನ್ನು ತೆಗೆದುಕೊಂಡಿಲ್ಲ. ಆದರೆ ಹಠ ಬಿಡದ ರಾಗಿಣಿ ಹಲವಾರು ಬಾರಿ ಒತ್ತಾಯಿಸಿದ ಹಿನ್ನೆಲೆಯಲ್ಲಿ ಅವರು ಗ್ರೀಟಿಂಗ್​ ತೆಗೆದುಕೊಂಡಿದ್ದಾರೆ. ಜೈಲುವಾಸದ ಬಹುತೇಕ ಸಮಯವನ್ನು ಇಂತಹ ಕೆಲಸದಲ್ಲೇ ಕಳೆಯುತ್ತಿರುವ ನಟಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದ್ದಾರೆ.

    ಇದನ್ನೂ ಓದಿ: ಹೆಲ್ಮೆಟ್​ ಹಾಕಿದ್ರೂ ಇನ್ಮುಂದೆ ಕಟ್ಟಬೇಕಾಗಬಹುದು ದಂಡ! ಏಕೆ ಗೊತ್ತಾ?

    ಇನ್ನೊಂದತ್ತ ಸಂಜನಾ ಕೂಡ ಜೈಲು ಅಧಿಕಾರಿಗಳ ಬಳಿ ಗುಡ್​ ಗರ್ಲ್​ ಎನಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಯಾವುದೇ ಹವ್ಯಾಸಗಳಿಗೆ ಅವರು ಮೊರೆ ಹೋಗಿಲ್ಲ. ಜೈಲಿನ ಕೊಠಡಿಯ ಹೊರಭಾಗದ ಇತರೆ ಕೈದಿಗಳ ಕೆಲಸ‌ ಮಾಡುತ್ತಿರುವ ಕಡೆನ ಓಡಾಡಿಕೊಂಡು ಎಲ್ಲರೊಂದಿಗೆ ಅನ್ಯೋನ್ಯದಿಂದ ಕಾಲ ಕಳೆಯುತ್ತಿದ್ದಾರೆ.

    ತಾಯಿಯನ್ನು ಬಲಿ ಪಡೆದಿದ್ದ ಉಮಾಶ್ರೀ ಕಾರಿಗೆ ಮಗಳ ಜೀವವೂ ಹೋಯ್ತು!

    ಲಾಡ್ಜ್​ಗೆ ಬರುವಾಗ ಇಬ್ಬರು, ಹೋಗುವಾಗ ಒಬ್ಬನೇ: ಮುಚ್ಚಿದ್ದ ಕೊಠಡಿ ತೆರೆದವರಿಗೆ ಕಾದಿತ್ತು ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts