ಸಂಶೋಧನೆಗೆ ಜೀವನ ಮುಡಿಪಿಟ್ಟ ಲಕ್ಷ್ಮಣಯ್ಯ: ರೈತರ ಆದಾಯ ದ್ವಿಗುಣಗೊಳಿಸುವ ಸಮಿತಿ ಅಧ್ಯಕ್ಷ ಅಶೋಕ ದಳವಾಯಿ ಹೇಳಿಕೆ

Ragi Lakshmanaiah Memorial Lecture Programme Mandya

ಮಂಡ್ಯ: ರಾಗಿ ಬೆಳೆ ಸಂಶೋಧನೆಗಾಗಿ ಲಕ್ಷ್ಮಣಯ್ಯ ಅವರು ತಮ್ಮ ಜೀವನವನ್ನೇ ಮುಡುಪಿಟ್ಟರು. ರಾಗಿಬ್ರಹ್ಮ ಎಂಬ ಹೆಸರು ಪಡೆದ ಅವರನ್ನು ಇಂದು ಮರೆಯುತ್ತಿರುವುದು ದುರಂತ ಎಂದು ರೈತರ ಆದಾಯ ದ್ವಿಗುಣಗೊಳಿಸುವ ಸಮಿತಿ ಅಧ್ಯಕ್ಷ ಅಶೋಕ ದಳವಾಯಿ ಬೇಸರ ವ್ಯಕ್ತಪಡಿಸಿದರು.
ನಗರದ ಗಾಂಧಿಭವನದಲ್ಲಿ ರಾಗಿ ಲಕ್ಷ್ಮಣಯ್ಯ ಸ್ಮಾರಕ ಸಮಿತಿಯಿಂದ ಆಯೋಜಿಸಿದ್ದ 28ನೇ ವರ್ಷದ ಸ್ಮಾರಕ ಉಪನ್ಯಾಸ ಮತ್ತು ಸನ್ಮಾನ ಸಮಾರಂಭದಲ್ಲಿ ‘ಸಾರ್ವಕಾಲಿಕ ಕೃಷಿ ಮಹತ್ವ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದ ಅವರು, ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ರಾಗಿ ಲಕ್ಷ್ಮಣಯ್ಯ ಅವರ ಬಗ್ಗೆ ಹೆಚ್ಚು ತಿಳಿದುಕೊಂಡು ಅಧ್ಯಯನ ಮಾಡಬೇಕು. ಆ ವ್ಯಕ್ತಿಯ ವಿಶಿಷ್ಟತೆಯನ್ನು ಗಮನಿಸಬೇಕಿದೆ. ಭೂಮಿ ಮೇಲೆ ಜನರು ಜನ್ಮ ತಾಳುತ್ತಾರೆ. ಆದರೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಿ ಹೋಗುವ ಜನರ ಸಂಖ್ಯೆ ಕಡಿಮೆ ಇದೆ. ಅಂತಹ ಕೊಡುಗೆ ನೀಡಿದ ಮಹನೀಯರಲ್ಲಿ ನಮ್ಮ ರಾಗಿ ಲಕ್ಷ್ಮಣಯ್ಯ ಅವರು ಕೂಡ ಒಬ್ಬರು ಎಂದು ಶ್ಲಾಘಿಸಿದರು.
ನಾಗರಿಕತೆ ಹುಟ್ಟಲು ಕಾರಣವೇ ಕೃಷಿ ಎಂದರೆ ತಪ್ಪಾಗಲಾರದು. ರಾಗಿ, ಭತ್ತ ಸೇರಿದಂತೆ ದ್ವಿದಳ ಧಾನ್ಯಗಳು ಸೇರಿದಂತೆ ಕುರಿ, ಮೇಕೆ ಅಂತಹ ಪ್ರಾಣಿಗಳನ್ನು ಆಹಾರ ಭದ್ರತೆಗಾಗಿ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದ ಸನ್ನಿವೇಶವನ್ನು ಆರಂಭದ ನಾಗರಿಕತೆಯಲ್ಲಿಯೇ ಕಾಣುತ್ತೇವೆ. ಜತೆಗೆ ಆಹಾರ ಭದ್ರತೆಯು ಜನಸಂಖ್ಯೆ ಹೆಚ್ಚಳವಾದಂತೆಲ್ಲಾ ಗ್ರಾಮಗಳ ಸಂಖ್ಯೆಯು ಹೆಚ್ಚಾಯಿತು. ಆಹಾರವಿಲ್ಲದೇ ಇದ್ದರೆ ಯಾವ ಜೀವ ಸಂಕುಲವು ಉಳಿಯಲು ಸಾಧ್ಯವಿಲ್ಲ. ಅದನ್ನ ಅರಿತೇ ಲಕ್ಷ್ಮಣಯ್ಯ ಅವರು ಆಹಾರ ಭದ್ರತೆಗೆ ಪ್ರಾಧಾನ್ಯತೆ ನೀಡಿದ್ದರು ಎಂದು ತಿಳಿಸಿದರು.
ಇಂತಹ ಮಹನೀಯರನ್ನು ನಮ್ಮ ದೇಶ ಗುರುತಿಸಿಲ್ಲ. ಆದಾಗ್ಯೂ ಅವರ ಹೆಸರಿನಲ್ಲಿ ಸಮಿತಿ ರಚಿಸಿಕೊಂಡು ಕಾರ್ಯಕ್ರಮದ ಮೂಲಕ ಮಾಹಿತಿ ಸಿಗುವಂತೆ ಮಾಡುತ್ತಿರುವುದು ಮೆಚ್ಚುವ ಕೆಲಸ. ಸಾಧಾರಣ ವ್ಯಕ್ತಿ ಎಲ್ಲವನ್ನು ಬಿಟ್ಟು ರಾಗಿ ಸಂಶೋಧನೆಗಾಗಿ ಜೀವ ಮುಡಿಪಿಟ್ಟ ಲಕ್ಷ್ಮಣಯ್ಯ ಅವರು ಇಂದಿಗೂ ಪ್ರಸ್ತುತವಾಗಿ ನಿಲ್ಲುತ್ತಾರೆ. ಇನ್ನಾದರೂ ಅವರ ಹೆಸರು ಉಳಿಸುವ ಕೆಲಸವನ್ನು ಸಂಬಂಧಪಟ್ಟವರು ಮಾಡಲಿ ಎಂದು ಮನವಿ ಮಾಡಿದರು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಶಿಕ್ಷಣ ನಿರ್ದೇಶಕ ಕೆ.ಸಿ.ನಾರಾಯಣಸ್ವಾಮಿ, ಕೃಷಿ ಮಹತ್ವವನ್ನು ರೈತರ ಜತೆಗೂಡಿ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್.ಸ್ವಾಮಿನಾಥನ್, ಹೈನುಗಾರಿಕೆ ಕ್ರಾಂತಿಕಾರ ಕುರಿಯನ್ ವರ್ಗೀಸ್ ಎಂದು ಹೇಳುತ್ತೇವೆಯೋ ಅದೇ ರೀತಿ ಸಿರಿಧಾನ್ಯಗಳ ಕ್ರಾಂತಿಕಾರ ಲಕ್ಷ್ಮಣಯ್ಯ ಎಂದರು.
ಸಮಿತಿಯ ಅಧ್ಯಕ್ಷ ಕೆ.ಬೋರಯ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ರೈತ ಹೋರಾಟಗಾರ್ತಿ ಸುನಂದಾ ಜಯರಾಂ ಮಾತನಾಡಿದರು. ವಿ.ಸಿ ಫಾರ್ಮ್ ಕೃಷಿ ಕಾಲೇಜಿನ ಡೀನ್ ಪಿ.ಎಸ್.ಫಾತಿಮಾ ಇತರರಿದ್ದರು. ಇದೇ ಸಂದರ್ಭದಲ್ಲಿ ಕೆ.ಕೆ.ಅವಧಾನಿ ವಿದ್ಯಾರ್ಥಿ ಪ್ರಶಸ್ತಿಯನ್ನು ಸೌಜನ್ಯಾ, ದೇವಮ್ಮ ಮತ್ತು ಎಚ್.ಹೊನ್ನಯ್ಯ ಇಂಡುವಾಳು ವಿದ್ಯಾರ್ಥಿ ಪ್ರಶಸ್ತಿಯನ್ನು ಬಿ.ನಂದಿತಾ, ಕೆ.ಆರ್.ಪೇಟೆ ಲಕ್ಷ್ಮಮ್ಮ ಮತ್ತು ಕೆ.ರಾಮೇಗೌಡ ರೈತ ಪ್ರಶಸ್ತಿ(ರಾಗಿ)ಯನ್ನ ಗೌರಮ್ಮ ನಂಜುಂಡಯ್ಯ ಹಾಗೂ ಎಚ್.ಕೋಡಿಹಳ್ಳಿ ನಾಗಮ್ಮ ಮತ್ತು ಕೆ.ಮಂಚೇಗೌಡ ರೈತ ಪ್ರಶಸ್ತಿ(ಭತ್ತ)ಯನ್ನ ಟಿ.ನಾರಾಯಣ ಅವರಿಗೆ ಪ್ರದಾನ ಮಾಡಲಾಯಿತು.

Share This Article

ಈ ದಿನಾಂಕದಂದು ಜನಿಸಿದವರ ಮೇಲೆ ಲಕ್ಷ್ಮೀ ಕೃಪೆ ಹೆಚ್ಚು! ಹಣದ ಕೊರತೆ ಕಾಡುವುದಿಲ್ಲ, ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಪ್ರತಿದಿನ ಬೆಳಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿಯುತ್ತೀರಾ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ…

ಕೆಲವರು ಬೆಳಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿಯುತ್ತಾರೆ. ಈ ರೀತಿ ಕುಡಿಯುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು…

ಕೇವಲ 7 ತಿಂಗಳಲ್ಲಿ 114 ಕೆಜಿ ತೂಕ ಇಳಿಕೆ ಹೇಗೆ ಸಾಧ್ಯ? ವೈರಲ್​ ಸ್ಟಾರ್​ ಬಿಚ್ಚಿಟ್ಟ ರಹಸ್ಯವಿದು…

ನವದೆಹಲಿ: ಯೂಟ್ಯೂಬರ್ ನಿಕೊಕಾಡೊ ಅವಕಾಡೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸ್ಟಾರ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ನಿಕೋಲಸ್…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ