ರಾಘವೇಂದ್ರ ನಾಯ್ಕ, ನಂದಿನಿ ಜಿ. ಅವರಿಗೆ ರೋಟರಿ ಆನಂತಮಿತ್ರ ಕಲ್ಬಾವಿ ಯುವ ಸಾಧಕ ಪ್ರಶಸ್ತಿ ಪ್ರದಾನ

mng--23 May Rotary award
Published on

ಮಂಗಳೂರು: ಕಲ್ಬಾವಿ ಪ್ರತಿಷ್ಠಾನ ಮತ್ತು ರೋಟರಿ ಮಂಗಳೂರು ಸಿಟಿ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಪ್ರಾಯೋಜಿಸಿದ 4ನೇ ವಾರ್ಷಿಕ ಪ್ರತಿಷ್ಠಿತ ರೋಟರಿ ಅನಂತಮಿತ್ರ ಕಲ್ಬಾವಿ ಯುವ ಸಾಧಕ ಪ್ರಶಸ್ತಿ-2025ಯನ್ನು ರಾಜ್ಯ ಮಟ್ಟದ ಕ್ರೀಡಾ ಸಾಧಕರಾದ ರಾಘವೇಂದ್ರ ನಾಯ್ಕ ಮತ್ತು ಯುವ ನಂದಿನಿ ಜಿ. ಅವರಿಗೆ ಆಫೀಸರ್ಸ್‌ ಕ್ಲಬ್ ಸಭಾಂಗಣದಲ್ಲಿ ಗುರುವಾರ ಪ್ರದಾನ ಮಾಡಲಾಯಿತು.

ಸಂಸ್ಥೆಯ ಅಧ್ಯಕ್ಷ ಗಣೇಶ್ ಕೊಡ್ಲಮೊಗರು ಸ್ವಾಗತಿಸಿ, ನಗರದ ದ.ಕ. ಜಿಲ್ಲಾ ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲ್ಬಾವಿ ಅವರು ಅವರ ಪೋಷಕರಾದ ದಿ.ಕಲ್ಬಾವಿ ಅನಂತ ಪದ್ಮನಾಭ ರಾವ್ ಹಾಗೂ ದಿ.ಸುಮಿತ್ರ ರಾವ್ ಸ್ಮರರ್ಣಾರ್ಥ ಜಿಲ್ಲೆಯ ಯುವ ಪ್ರತಿಭಾ ಮತ್ತು ಯುವ ಸಾಧಕರಿಗೆ ವಾರ್ಷಿಕ ಪ್ರಶಸ್ತಿ ಪ್ರಾಯೋಜಿಸಿದ್ದಾರೆ. ಸಂಸ್ಥೆಯ ಯುವಜನ ಸೇವಾ ಯೋಜನೆಯ ಅಂಗವಾಗಿ ಯುವ ಸಾಧಕ ರಾಘವೇಂದ್ರ ನಾಯ್ಕ (ಜಾವಲಿನ್ ಎಸೆತ) ಮತ್ತು ನಂದಿನಿ ಜಿ. (ದೂರ ಅಂತರದ ಓಟ) ಅವರ ಗಣನೀಯ ಸಾಧನೆಯನ್ನು ಪರಿಗಣಿಸಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ಫಲಕ, ಪ್ರಮಾಣ ಪತ್ರ ಮತ್ತು ನಗದು 10,000 ರೂ. ಒಳಗೊಂಡಿದೆ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ರೋಟರಿ ವಲಯ ಸಹಾಯಕ ಗವರ್ನರ್ ಕೆ. ಎಂ. ಹೆಗ್ಡೆ ಅವರು, ಯುವ ಸಾಧಕರ ಕ್ರೀಡಾ ಉತ್ಸಾಹಕ್ಕೆ ಸಂಘ ಸಂಸ್ಥೆಗಳು ಪ್ರೋತ್ಸಾಹ ನೀಡಿ ಯಶಸ್ಸು ಸಾಧಿಸಲು ಪ್ರೇರೇಪಿಸಬೇಕು ಎಂದರು.

ರೋಟರಿ ಸಂಸ್ಥೆಯ ಸ್ಥಾಪನಾ ಅಧ್ಯಕ್ಷ ಹಾಗೂ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಡಾ. ರಂಜನ್ ರಾವ್ ಮತ್ತು ಪ್ರಶಸ್ತಿಯ ಪ್ರಾಯೋಜಕರಾದ ರಾಜೇಂದ್ರ ಕಲ್ಬಾವಿ ಅವರು ಅಭಿನಂದನಾ ಭಾಷಣ ಮಾಡಿದರು. ರೋಟರಿ ಸಂಸ್ಥೆಯ ಯುವಜನ ಸೇವಾ ಯೋಜನೆಯ ನಿರ್ದೇಶಕರಾದ ಸುಮಿತ್ ರಾವ್ ಪ್ರಶಸ್ತಿ ವಿಜೇತರ ಪರಿಚಯ, ಅಪ್ರತಿಮ ಪ್ರತಿಭೆ ಮತ್ತು ಅವರು ರಾಜ್ಯ ಮಟ್ಟದ ಕ್ರೀಡಾ ಕ್ಷೇತ್ರದಲ್ಲಿ ಸಾಧಿಸಿದ ಗಮನಾರ್ಹ ಸಾಧನೆಯ ಮಾಹಿತಿ ನೀಡಿದರು. ಪ್ರಶಸ್ತಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಪ್ರಶಸ್ತಿ ವಿಜೇತರು ರೋಟರಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯದರ್ಶಿ ಸುದೇಶ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net