ಅರ್ಜುನ್ ಸರ್ಜಾ, ರಾಧಿಕಾ ಕುಮಾರಸ್ವಾಮಿ ಅಭಿನಯದ 'ಒಪ್ಪಂದ' ಚಿತ್ರದ ರಿಲೀಸ್ ಡೇಟ್?

Published on
ನಟಿ ರಾಧಿಕಾ ಕುಮಾರಸ್ವಾಮಿ ಮತ್ತು ನಟ ಅರ್ಜುನ್ ಸರ್ಜಾ ಅವರ ಮುಂಬರುವ 'ಒಪ್ಪಂದ' ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. ಆರಂಭದಲ್ಲಿ 'ಕಾಂಟ್ರಾಕ್ಟ್' ಎಂಬ ಹೆಸರು ಈ ಸಿನಿಮಾಗೆ ನೀಡಲಾಗಿದ್ದು, ಬಳಿಕ ಹೆಸರನ್ನು ಬದಲಾಯಿಸಲಾಗಿತ್ತು. ಈಗ, ಈ ಸಿನಿಮಾ ಫೆಬ್ರವರಿ 11 ರಂದು ತೆರೆಗಪ್ಪಳಿಸಲಿದೆ. ಅಂದಹಾಗೆ, ಸಮೀರ್ ನಿರ್ದೇಶನದ ಈ ಸಿನಿಮಾ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂಬ ಮಾಹಿತಿಯನ್ನು ಚಿತ್ರರಂಡವೇ ಹಂಚಿಕೊಂಡಿದೆ.
ತಮಿಳಿನಲ್ಲಿ 'ಇರುವರ್ ಒಪ್ಪಂತಂ', ತೆಲುಗಿನಲ್ಲಿ 'ಇದ್ದರು' ಎಂಬ ಹೆಸರಿನಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾದ ಮೂಲಕ ಬಾಲಿವುಡ್ ನಟ ಫೈಸಲ್ ಖಾನ್ ಅವರು ದಕ್ಷಿಣ ಸಿನಿರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ನಟಿ ಸೋನಿ ಚರಿಷ್ಟಾ, ನಟ ಜೆ.ಡಿ.ಚಕ್ರವರ್ತಿ, ನಟ ವಿಶ್ವನಾಥ್ ಅವರು ಕೂಡಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸುಭಾಷ್ ಆನಂದ್ ಸಂಗೀತವಿರುವ ಈ ಸಿನಿಮಾಗೆ ಚಿತ್ರಕ್ಕೆ ಅಮೀರ್ ಲಾಲ್ ಛಾಯಾಗ್ರಹಣವಿದೆ. ರಿಲೀಸ್​ಗೂ ಮುನ್ನವೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದ ಈ ಸಿನಿಮಾ ಅಭಿಮಾನಿಗಳನ್ನು ರಂಜಿಸುತ್ತಾ ಎಂದು ಕಾದು ನೋಡಬೇಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net