More

    ಒಂದೆಡೆ ಪಾಕ್​ ವಿಜಯೋತ್ಸವದಲ್ಲಿದ್ರೆ ತಂಡದ ನಾಯಕ ಬಾಬರ್​ಗೆ ಬಿಸಿ ತುಪ್ಪವಾದ ಈ ಯುವತಿ ಯಾರು?

    ಇಸ್ಲಮಾಬಾದ್​: ಟಿ20 ವಿಶ್ವಕಪ್​ ಪಂದ್ಯದ ಮೊದಲ ಪಂದ್ಯದಲ್ಲೇ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಗೆಲುವು ಸಾಧಿಸಿದ ಖುಷಿಯಲ್ಲಿ ಪಾಕಿಸ್ತಾನ ತೇಲಾಡುತ್ತಿದೆ. ಅದರಲ್ಲೂ ಪಾಕ್​ ತಂಡದ ನಾಯಕ ಬಾಬರ್​ ಅಜಾಮ್​ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿದಾಡುತ್ತಿದೆ. ಅಲ್ಲದೆ, ಅವರನ್ನು ಹೀರೋ ಎಂದು ಬಿಂಬಿಸಲಾಗುತ್ತಿದೆ. ಆದರೆ, ಇದೇ ಸಂದರ್ಭದಲ್ಲಿ ಅವರ ವಿರುದ್ಧದ ಗಂಭೀರ ಆರೋಪ ಮುನ್ನೆಲೆಗೆ ಬಂದಿದ್ದು, ಹೀರೋ ಅಲ್ಲ ಖಳನಾಯಕ ಎಂದು ಯುವತಿಯೊಬ್ಬಳು ಆರೋಪಿಸಿದ್ದಾಳೆ.

    ಹಮೀಜಾ ಮುಕ್ತಾರ್, ಈ ಹೆಸರು ಪಾಕ್​ನಲ್ಲಿ ಇದೀಗ ಕೋಲಾಹಲ ಸೃಷ್ಟಿಸಿದೆ. ಒಂದೆಡೆ ಪಾಕ್​ ವಿಜಯೋತ್ಸವದ ಅಮಲಿನಲ್ಲಿದ್ದರೆ, ಅವರ ತಂಡದ ನಾಯಕನಿಗೆ ಮುಕ್ತಾರ್​ ಬಿಸಿ ತುಪ್ಪವಾಗಿ ಪರಿಣಮಿಸಿದ್ದಾರೆ. ಬಾಬರ್​ ಅವರ ವಿರುದ್ಧ ಬಹು ದಿನಗಳ ಹಿಂದೆಯೇ ಮುಕ್ತಾರ್​ ಮಾಡಿದ್ದ ಗಂಭೀರ ಆರೋಪ ಮತ್ತೆ ಮುನ್ನೆಲೆ ಬಂದಿದೆ. ತನ್ನನ್ನು ತಾನು ಬಾಬರ್​ ಗರ್ಲ್​ಫ್ರೆಂಡ್​ ಎಂದು ಹೇಳಿಕೊಂಡಿರುವ ಮುಕ್ತಾರ್​, ನನ್ನನ್ನು ಲೈಂಗಿಕವಾಗಿ ಬಳಸಿಕೊಂಡು ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾರೆಂದು ಆರೋಪ ಮಾಡಿದ್ದಾರೆ.

    ಏನಿದು ಪ್ರಕರಣ?
    ಪಾಕ್​ ನಾಯಕನಾಗಿ ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿರುವ ಬಾಬಾರ್​ ಪಾಕ್​ ಪಾಲಿಗೆ ಸದ್ಯ ಹೀರೋ ಆಗಿದ್ದಾರೆ. ಆದರೆ, ಕೆಲವರ್ಷಗಳ ಹಿಂದೆಯೇ ಬಾಬರ್​ ವಿವಾದ ಒಂದಕ್ಕೆ ಸಿಲುಕಿದ್ದಾರೆ. ಬಾಬರ್​ ಸುದ್ದಿಯಾದಗಲೆಲ್ಲ ಅವರ ಮೇಲಿನ ಗಂಭೀರ ಆರೋಪವೂ ಕೂಡ ಸುದ್ದಿಯಾಗುತ್ತಲೇ ಇರುತ್ತದೆ. ಮದುವೆ ಹೆಸರಲ್ಲಿ ನಂಬಿಸಿ, ಲೈಂಗಿಕವಾಗಿ ಬಳಸಿಕೊಂಡು ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾರೆ ಎಂದು ಕೈಯಲ್ಲಿ ಕುರಾನ್​ ಹಿಡಿದು ಯುವತಿ ಆರೋಪಿಸಿದ್ದಾಳೆ. ಇದಿಷ್ಟು ಮಾಹಿತಿಯನ್ನು ಪಾಕ್​ ಮಾಧ್ಯಮ ಸಂದರ್ಶನದಲ್ಲಿ ಮುಕ್ತಾರ್​ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ, ಬಾಬರ್​ ವಿರುದ್ಧ ಮುಕ್ತಾರ್​ ನ್ಯಾಯಾಲಯದಲ್ಲಿ ದಾವೆ ಸಹ ಹೂಡಿದ್ದಾರೆ. ಪ್ರಕರಣ ಹಿಂಪಡೆದುಕೊಳ್ಳಲು ಬಾಬರ್​ ಕುಟುಂಬ 20 ಲಕ್ಷ ರೂಪಾಯಿ ಆಫರ್​ ನೀಡಿತು ಎಂದು ಮತ್ತೊಂದು ಆರೋಪ ಮಾಡಿದ್ದಾಳೆ. ಅಲ್ಲದೆ, ಹಣವನ್ನು ಪಡೆದುಕೊಂಡು ಹಿಂತಿರುಗಿಸದೆ ವಂಚನೆ ಮಾಡಿದ್ದಾರೆ ಅಂತಲೂ ದೂರಿದ್ದಾರೆ.

    ನಾನು ಮತ್ತು ಬಾಬರ್​ ಪರಸ್ಪರ ಪ್ರೀತಿ ಮಾಡುತ್ತಿದ್ದೆವು. 2011ರಲ್ಲಿ ಇಬ್ಬರ ಮನೆ ಬಿಟ್ಟು ಓಡಿ ಹೋಗಿದ್ದೆವು. ಈ ಸಮಯದಲ್ಲಿ ಇಬ್ಬರು ಲಾಹೋರ್​ನಲ್ಲಿ ಲಿವಿಂಗ್​ ಟುಗೆದರ್​ನಲ್ಲಿದ್ದೆವು. ಇದಕ್ಕೆ ಸಂಬಂಧಿಸಿದ ಸಾಕಷ್ಟು ದಾಖಲಾತಿಗಳು ಮತ್ತು ಸಾಕ್ಷಿಗಳು ನನ್ನ ಬಳಿ ಇವೆ ಎಂದು ಮುಕ್ತಾರ್​ ಹೇಳಿಕೊಂಡಿದ್ದಾರೆ, ಇದೀಗ ಬಾಬರ್​ ಹೆಸರು ಹೆಚ್ಚಾಗಿ ಕೇಳಿಬರುತ್ತಿರುವುದರಿಂದ, ಅವರ ವಿರುದ್ಧದ ಆರೋಪವೂ ಮತ್ತೆ ಚರ್ಚೆಗೆ ಗ್ರಾಸವಾಗಿದೆ. (ಏಜೆನ್ಸೀಸ್​)

    ಮದ್ವೆಯಾಗಲು ತೋರಿದ ಉತ್ಸಾಹ ಜೀವನದಲ್ಲಿ ತೋರದ ನವದಂಪತಿಯ ಬದುಕು ದುರಂತ ಅಂತ್ಯ!

    ಮಧ್ಯರಾತ್ರಿ ಗರ್ಲ್​ಫ್ರೆಂಡ್ ಬೆಡ್​ರೂಮ್​ ಬಾಗಿಲು ಬಡಿದ ಯುವಕ: ಕದ ತೆರೆದವಳಿಗೆ ಕಾದಿತ್ತು ಶಾಕ್​..!

    ‘ಸಲಗ’ ಸಿನಿಮಾದ ಹಾಡಿನೊಂದಿಗೆ ಏರಿಯಾಕ್ಕೆ ಗ್ರ್ಯಾಂಡ್​ ಎಂಟ್ರಿ ಕೊಟ್ಟ ನಟೋರಿಯಸ್ ರೌಡಿ ಮರುದಿನವೇ ದುರಂತ ಅಂತ್ಯ

    ಮಣಿಪಾಲ್​ನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts