More

    ಜುಲೈ 28ಕ್ಕೆ ಗುಮ್ಮನ ಆಗಮನ: ವಿಕ್ರಾಂತ್​ ರೋಣನ ಟೀಸರ್​ ನೋಡಿದ್ರೆ ಗೂಸ್​ಬಂಪ್ಸ್​ ಗ್ಯಾರೆಂಟಿ!

    ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ‘ವಿಕ್ರಾಂತ್ ರೋಣ’ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಉತ್ತರಕ್ಕೆ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ. ಕಿಚ್ಚನ ಅಭಿಮಾನಿಗಳಿಗೆ ಇಂದು ಯುಗಾದಿಯ ಜತೆಗೆ ಡಮಲ್​ ಧಮಾಕವು ಹೌದು.

    ಇಷ್ಟು ದಿನ ಅಪ್​ಡೇಟ್​ಗಾಗಿ ಕಾದು ಕುಳಿತಿದ್ದ ಅಭಿಮಾನಿಗಳು ಇಂದು ವಿಕ್ರಾಂತ್​​ ರೋಣನ ಸಣ್ಣ ಝಲಕ್​ ಅನ್ನು ಕಣ್ತುಂಬಿಕೊಂಡಿದ್ದಾರೆ. ಇಂದು ಕನ್ನಡ, ಇಂಗ್ಲಿಷ್​, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ವಿಕ್ರಾಂತ್​ ರೋಣನ ರಿಲೀಸ್​ ಡೇಟ್​​​ ಟೀಸರ್​ ಬಿಡುಗಡೆಯಾಗಿದ್ದು, ಇಷ್ಟು ದಿನ ಚಿತ್ರ ಬಿಡುಗಡೆ ಯಾವಾಗ ಎಂದು ಕಾದು ಕುಳಿತಿದ್ದ ಅಭಿಮಾನಿಗಳಿಗೆ ಟೀಸರ್​ ಮೂಲಕ ಉತ್ತರ ಸಿಕ್ಕಿದೆ. ಅಂದಹಾಗೆ ಚಿತ್ರವು ಜುಲೈ 28ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

    ಇಂದು ಬಿಡುಗಡೆಯಾದ ಟೀಸರ್​ ಅನ್ನು ಕನ್ನಡದಲ್ಲಿ ನಟ ಕಿಚ್ಚ ಸುದೀಪ್​ ಬಿಡುಗಡೆ ಮಾಡಿದರೆ, ಇಂಗ್ಲಿಷ್​ ಟೀಸರ್​ ಅನ್ನು ಟೀಮ್​ ಇಂಡಿಯಾದ ಕ್ರಿಕೆಟ್​ ದಿಗ್ಗಜ ಹಾಗೂ ಮಾಜಿ ಸ್ಫೋಟಕ ಆಟಗಾರ ವೀರೇಂದ್ರ ಸೆಹ್ವಾಗ್​ ಬಿಡುಗಡೆ ಮಾಡಿದರು. ಉಳಿದಂತೆ ತೆಲುಗಿನಲ್ಲಿ ಮೆಗಾಸ್ಟಾರ್​ ಚಿರಂಜೀವಿ, ತಮಿಳಿನಲ್ಲಿ ಸಿಲಂಬರಸನ್​ ಸಿಂಬು, ಮಲಯಾಳಂನಲ್ಲಿ ಮೋಹನ್​ ಲಾಲ್​ ಮತ್ತು ಹಿಂದಿನಲ್ಲಿ ಸೂಪರ್​ಸ್ಟಾರ್​ ಸಲ್ಮಾನ್​ ಖಾನ್​ ಟೀಸರ್​ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

    ಇನ್ನು ಟೀಸರ್​ ನೋಡಿದ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ. ಕೇವಲ 1.35 ನಿಮಿಷದ ಟೀಸರ್​ ತುಂಬಾ ಅದ್ಧೂರಿಯಾಗಿ ಮೂಡಿ ಬಂದಿದ್ದು ಹಾಲಿವುಡ್​ ಮಟ್ಟದ ಮೇಕಿಂಗ್​ ನೋಡಿ ಎಲ್ಲರೂ ಫಿದಾ ಆಗಿದ್ದಾರೆ.

    ವಿಕ್ರಾಂತ್​ ರೋಣ ಚಿತ್ರದಲ್ಲಿ ಕಿಚ್ಚ ಸುದೀಪ್​, ಜಾಕ್ವೆಲಿನ್​ ಫರ್ನಾಂಡೀಸ್​, ನಿರೂಪ್​ ಭಂಡಾರಿ ಮತ್ತು ನೀತಾ ಅಶೋಕ್​ ನಟಿಸಿದ್ದು, ಜಾಕ್​ ಮಂಜು ನಿರ್ಮಾಣ ಮಾಡಿದ್ದಾರೆ. ಶಾಲಿನಿ ಆರ್ಟ್ಸ್​ ಪ್ರೊಡಕ್ಷನ್​ ಅಡಿಯಲ್ಲಿ ಜೀ ಸ್ಟುಡಿಯೋಸ್​ ಚಿತ್ರವನ್ನು ಅರ್ಪಿಸುತ್ತಿದೆ. ಚಿತ್ರಕ್ಕೆ ಅಲಂಕಾರ್​ ಪಾಂಡಿಯನ್​ ಸಹ ನಿರ್ಮಾಣವಿದೆ. ಅನುಪ್​ ಭಂಡಾರಿ ಅವರು ನಿರ್ದೇಶನ ಮಾಡಿದ್ದಾರೆ.

    ಹೀಗೂ ಮೋಸ ಮಾಡ್ತಾರೆ ಹುಷಾರ್​! ಕುಕ್ಕರ್‌ನಲ್ಲಿ ಬಿಸಿ ಮಾಡಲು ಇಟ್ಟ 70 ಗ್ರಾಂ ಮಾಂಗಲ್ಯ ಸರ ಮಂಗಮಾಯ

    ನಿಲ್ಲದ ದರ ಏರಿಕೆ ಬರೆ: ಯುಗಾದಿ ಹಬ್ಬದಂದು ಮತ್ತೆ ದುಬಾರಿಯಾಯ್ತು ಇಂಧನ, ಇಂದಿನ ದರ ಹೀಗಿದೆ…

    ಗುಪ್ತಾಂಗದ ಫೋಟೋ ಕಳುಹಿಸಿ ಎಂದವನಿಗೆ ಫೋಟೋವೊಂದನ್ನು ಸೆಂಡ್​ ಮಾಡಿ ಶಾಕ್​ ಕೊಟ್ಟ ಯಶಿಕಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts