More

    ಮುಂಬೈ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ಕೋವಿಡ್​ ಪರೀಕ್ಷೆ ಒಂದು ಹಗರಣ: ಪ್ರಯಾಣಿಕನ ಆರೋಪ

    ಮುಂಬೈ: ಭಾರತೀಯ ಮೂಲದ ಯುನೈಟೆಡ್​ ಕಿಂಗ್​ಡಮ್​ ಪ್ರಜೆಯೊಬ್ಬರು ಗಂಭೀರ ಆರೋಪ ಮಾಡಿದ್ದು, ಮುಂಬೈ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ಕೋವಿಡ್​ ಪರೀಕ್ಷೆ ಮತ್ತು ಕ್ವಾರೆಂಟೈನ್​ ಪ್ರೊಟೋಕಾಲ್​ ಹಣ ಮಾಡುವ ಹಗರಣ ಎಂದು ದೂರಿದ್ದಾರೆ.

    ಮಾವನ ಅಂತ್ಯಕ್ರಿಯೆಯಲ್ಲಿ ಪಾಲ್ಗೋಳ್ಳಲು ಮನೋಜ್​ ಲಾಡ್ವಾ ಎಂಬುವರು ತನ್ನ ಪತ್ನಿ ಜತೆ ಡಿಸೆಂಬರ್​ 30ರಂದು ಮುಂಬೈಗೆ ಬಂದಿಳಿದರು. ವಿಮಾನ ನಿಲ್ದಾಣದ ಕೋವಿಡ್​ ಕೇಂದ್ರದಲ್ಲಿ ಪರೀಕ್ಷಿಸಿದಾಗ ಮನೋಜ್​ ಅವರಿಗೆ ಕರೊನಾ ಪಾಸಿಟಿವ್​ ವರದಿ ಬಂದಿತು. ಆದರೆ, ಲಂಡನ್​ನ ಹೀಥ್ರೋ ವಿಮಾನ ನಿಲ್ದಾಣದಲ್ಲಿ ಹೊರಡುವ ಮುನ್ನ ತೆಗೆದುಕೊಂಡಿದ್ದ ಕೋವಿಡ್​ ವರದಿಯಲ್ಲಿ ನೆಗಿಟಿವ್​ ಇತ್ತು. ಹೀಗಾಗಿ ಖಚಿತತೆಗಾಗಿ ಮತ್ತೊಮ್ಮೆ ಪರೀಕ್ಷೆ ಮಾಡುವಂತೆ ಮನೋಜ್​ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಕೇಳಿಕೊಂಡರು. ಆದರೆ, ಅದನ್ನು ನಿರಾಕರಿಸಲಾಯಿತು. ಇದಾದ ತಕ್ಷಣ ಮನೋಜ್​ ಅವರನ್ನು ಸರ್ಕಾರಿ ನಿರ್ಮಿತ ಕ್ವಾರೆಂಟೈನ್​ ಕೇಂದ್ರಕ್ಕೆ ಸ್ಥಳಾಂತರಿಸಿದ್ದರಿಂದ ಅವರು ಮಾವನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಆಗಲಿಲ್ಲ. ಲಂಡನ್​ನಿಂದ ಬಂದ ಉದ್ದೇಶವೇ ಈಡೇರಲಿಲ್ಲ. ಸಮಯದ ಜತೆಗೆ ಹಣವೂ ವ್ಯರ್ಥವಾಯಿತು.

    ಇದಾದ ಬಳಿಕ ತೀವ್ರವಾಗಿ ಬೇಸರಗೊಂಡಿದ್ದ ಮನೋಜ್​ ಅವರು ಫೇಸ್​ಬುಕ್​ ಲೈವ್​ ಬಂದು ವಿಮಾನ ನಿಲ್ದಾಣದ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ಹೊರಹಾಕುವ ಮೂಲಕ ಗಂಭೀರ ಆರೋಪಗಳನ್ನು ಮಾಡಿದರು. ಬಾಂಬೆ ವಿಮಾನ ನಿಲ್ದಾಣದಲ್ಲಿ ನನಗೆ ಮಾಂತ್ರಿಕವಾಗಿ ಕರೊನಾ ಪಾಸಿಟಿವ್​ ವರದಿ ಬಂದಿತು. ನಾವು ಪ್ರಯಾಣಿಸಿದ ವಿಮಾನದಲ್ಲೇ ಯುವಕ-ಯುವತಿಯರಿದ್ದರು. ಅವರೆಲ್ಲರಿಗೂ ಲಂಡನ್​ ಏರ್​ಪೋರ್ಟ್​ನಲ್ಲಿ ನೆಗಿಟಿವ್​ ಇದ್ದ ವರದಿ ಮುಂಬೈ ವಿಮಾನ ನಿಲ್ದಾಣದಲ್ಲಿ ಪಾಸಿಟಿವ್​ ಬಂದಿದೆ. ಇದನ್ನೆ ಪ್ರಶ್ನೆ ಮಾಡಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಪ್ರಶ್ನಿಸುವಂತೆ ಆಪ್ತರ ಬಳಿ ಒತ್ತಾಯಿಸಿದ್ದಾರೆ.

    ನಾನು ನನ್ನ ಮಾವ ಅವರ ಅಂತ್ಯಕ್ರಿಯೆಗೆ ಹೋಗಲು ಪ್ರಯತ್ನಿಸುತ್ತಿದ್ದೇನೆ. ಪತ್ನಿ ಶರ್ಮಿಲಿ ಅವರ ತಂದೆ 24 ಗಂಟೆಗಳ ಹಿಂದೆ ನಿಧನರಾದರು. ನಾವು ಭಾರತಕ್ಕೆ ಹೋಗಲು ಧಾವಿಸಿದೆವು ಮತ್ತು ಈ ಜನರು ನಮ್ಮಿಂದ ಹೆಚ್ಚಿನ ಹಣವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಇದು ಕೇವಲ ಅವಾಸ್ತವವಾಗಿದೆ ಎಂದು ಲಾಡ್ವಾ ಆರೋಪಿಸಿದ್ದಾರೆ. (ಏಜೆನ್ಸೀಸ್​)

    ಹೆದರಿಸಲು ಬಂದ್ರು ಅನುಶ್ರೀ; ನಾಲ್ಕು ವರ್ಷಗಳ ನಂತರ ನಟನೆಗೆ..

    ಭೋಜಪುರಿಯಲ್ಲಿ ಹರ್ಷಿಕಾ ಹ್ಯಾಟ್ರಿಕ್; ‘ಸನಮ್ ಮೇರೆ ಹಮ್​ರಾಝ್​’ ಚಿತ್ರದಲ್ಲಿ ನಟನೆ

    ಆರ್​ಆರ್​ಆರ್ ಪ್ರಚಾರ ವ್ಯರ್ಥ; ಬಿಡುಗಡೆ ಮುಂದೂಡಿಕೆಯಿಂದಾಗಿ 20 ಕೋಟಿ ರೂಪಾಯಿ ನಷ್ಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts