More

    ಕಾಂಗ್ರೆಸ್ ಕೂಡ ಚುನಾವಣಾ ಬಾಂಡ್ ಹಗರಣದ ಪಾಲುದಾರ; ಎಸ್‌ಯುಸಿಐ ರಾಜ್ಯ ಸಮಿತಿ ಸದಸ್ಯ ರಾಮಾಜಿನಪ್ಪ ಆಲ್ದಳ್ಳಿ ಆರೋಪ

    ಹಾವೇರಿ: ಚುನಾವಣಾ ಬಾಂಡ್ ಹಗರಣ ದೇಶ ಕಂಡ ಅತ್ಯಂತ ದೊಡ್ಡ ಹಗರಣವಾಗಿದೆ. ಇದರಲ್ಲಿ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಅನೇಕ ಪಕ್ಷಗಳು ಫಲಾನುಭವಿಗಳಾಗಿವೆ ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) (ಎಸ್‌ಯುಸಿಐ) ರಾಜ್ಯ ಸಮಿತಿ ಸದಸ್ಯ ರಾಮಾಂಜನಪ್ಪ ಆಲ್ದಳ್ಳಿ ಆರೋಪಿಸಿದರು.
    ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾರದರ್ಶಕವಾಗಿ ಚುನಾವಣೆ ನಡೆಸಬೇಕಿದ್ದ ಕೇಂದ್ರ ಸರ್ಕಾರ ಅದನ್ನು ಮರೆಮಾಚಿ ಚುನಾವಣಾ ಬಾಂಡ್‌ನಲ್ಲಿ ಬಹುದೊಡ್ಡ ಹಗರಣ ನಡೆಸಿದೆ. ಈ ಬಾಂಡ್‌ಗಳ ದೊಡ್ಡ ಫಲಾನುಭವಿ ಬಿಜೆಪಿಯಾಗಿದ್ದು, ಕಾಂಗ್ರೆಸ್, ಡಿಎಂಕೆ, ಇನ್ನಿತರ ಪಕ್ಷಗಳೂ ಇದರ ಪಾಲುದಾರರಾಗಿವೆ. ಆದ್ದರಿಂದ ಈ ಹಗರಣದ ಬಗ್ಗೆ ಕಾಟಾಚಾರಕ್ಕೆ ಎಂಬಂತೆ ಮಾತನಾಡುತ್ತಿವೆ ಎಂದು ಆರೋಪಿಸಿದರು.
    ಈ ದೇಶದ ಸಂಪತ್ತು ಹೀಗೆ ಹಗರಣಗಳ ಮೂಲಕ ಲೂಟಿ ಮಾಡುತ್ತಿರುವ ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಂದ ದೇಶವನ್ನು ರಕ್ಷಿಸಬೇಕಿದೆ. ಇದೇ ಕಾರಣಕ್ಕೆ ಎಸ್‌ಯುಸಿಐ ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷಗಳೊಂದಿಗೆ ಯಾವುದೇ ಕಾರಣಕ್ಕೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಸ್ವತಂತ್ರವಾಗಿ ಸ್ಪರ್ಧಿಸುತ್ತದೆ. ಕಾರ್ಮಿಕರು, ಬಡವರ ಒಳಿತಿಗಾಗಿ ನಮ್ಮ ಅಭ್ಯರ್ಥಿಗಳನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
    ಸುದ್ದಿಗೋಷ್ಠಿಯಲ್ಲಿ ಗಂಗಾಧರ ಬಡಿಗೇರ, ಮಧುಲತಾ ಗೌಡರ, ಭವಾನಿಶಂಕರ ಗೌಡ, ಮಂಜುನಾಥ ನೆಗಳೂರ, ರಾಜು ಆಲದಹಳ್ಳಿ, ಯೋಗಪ್ಪ ಜಾಲಹಳ್ಳಿ, ಚಂದ್ರಪ್ಪ ಕೆ., ಇತರರಿದ್ದರು.
    ಹಾವೇರಿ ಸೇರಿ 19 ಕ್ಷೇತ್ರಗಳಲ್ಲಿ ಸ್ಪರ್ಧೆ
    ಎಸ್‌ಯುಸಿಐ ವತಿಯಿಂದ ಹಾವೇರಿ ಸೇರಿದಂತೆ 19 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಾಗುತ್ತಿದೆ. ಈಗಾಗಲೇ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದ್ದು, ಹಾವೇರಿಯಿಂದ ಗಂಗಾಧರ ಬಡಿಗೇರ ಅಭ್ಯರ್ಥಿಯಾಗಿದ್ದಾರೆ ಎಂದು ರಾಮಾಂಜಿನಪ್ಪ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts