More

    ಭೋಜಪುರಿಯಲ್ಲಿ ಹರ್ಷಿಕಾ ಹ್ಯಾಟ್ರಿಕ್; ‘ಸನಮ್ ಮೇರೆ ಹಮ್​ರಾಝ್​’ ಚಿತ್ರದಲ್ಲಿ ನಟನೆ

    ಬೆಂಗಳೂರು: ಸ್ಯಾಂಡಲ್​ವುಡ್ ನಟಿ ಹರ್ಷಿಕಾ ಪೂಣಚ್ಚ ಕನ್ನಡದ ಜತೆಗೆ ಪರಭಾಷೆಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಈಗಾಗಲೇ ಎರಡು ಭೋಜಪುರಿ ಸಿನಿಮಾಗಳಲ್ಲಿ ನಟಿಸಿದ್ದ ಹರ್ಷಿಕಾ, ಹೊಸ ವರ್ಷದ ದಿನದಂದೇ ಮೂರನೇ ಭೋಜಪುರಿ ಸಿನಿಮಾ ಘೋಷಣೆ ಮಾಡಿ, ಶೂಟಿಂಗ್ ಸಲುವಾಗಿ ಲಂಡನ್​ಗೆ ಹಾರಿದ್ದಾರೆ.

    ಭೋಜಪುರಿಯ ‘ಹಮ್ ಹೈ ರಾಹಿ ಪ್ಯಾರ್ ಕೇ’ ಮತ್ತು ‘ಸಜನ್ ರೇ ಜೂಟ್ ಮತ್ ಬೋಲೋ’ ಸಿನಿಮಾಗಳನ್ನು ಮುಗಿಸಿರುವ ಹರ್ಷಿಕಾ, ಇದೀಗ ‘ಸನಮ್ ಮೇರೆ ಹಮ್​ರಾಝ್​’ ಚಿತ್ರ ಒಪ್ಪಿಕೊಂಡಿದ್ದಾರೆ. ಅಲ್ಲಿನ ಸ್ಟಾರ್ ನಟ ರಿತೇಶ್ ಪಾಂಡೆ ನಾಯಕನಾಗಿ ನಟಿಸುತ್ತಿರುವ ಈ ಚಿತ್ರವನ್ನು ಯಶಿ ಫಿಲಂಸ್ ಪ್ರೊಡಕ್ಷನ್ ನಿರ್ವಿುಸುತ್ತಿದೆ. ಈ ಹಿಂದಿನ ಹರ್ಷಿಕಾ ನಟನೆಯ ಎರಡು ಚಿತ್ರಕ್ಕೂ ಇದೇ ಸಂಸ್ಥೆ ಬಂಡವಾಳ ಹೂಡಿತ್ತು. ಈ ಸಂಸ್ಥೆಯ ಮೂರನೆಯ ಚಿತ್ರದಲ್ಲಿ ನಟಿಸುವ ಮೂಲಕ ಹರ್ಷಿಕಾ ಹ್ಯಾಟ್ರಿಕ್ ಹೊಡೆದಿದ್ದಾರೆ.

    ಈ ಚಿತ್ರದ ಪಾತ್ರ ಮತ್ತು ಕಥೆ ಬಗ್ಗೆ ‘ವಿಜಯವಾಣಿ’ಜತೆಗೆ ಹಲವು ವಿಷಯಗಳನ್ನು ಹಂಚಿಕೊಂಡ ಹರ್ಷಿಕಾ, ‘ಈ ಹಿಂದಿನ ನನ್ನ ಎರಡು ಸಿನಿಮಾಗಳು ರೊಮ್ಯಾಂಟಿಕ್ ಲವ್ ಸ್ಟೋರಿ ಕಥಾಹಂದರ ಹೊಂದಿದ್ದವು. ಆದರೆ, ‘ಸನಮ್ ಮೇರೆ ಹಮ್​ರಾಝ್​’ ಥ್ರಿಲ್ಲರ್ ಶೈಲಿಯದ್ದಾಗಿರ ಲಿದೆ. ಲಂಡನ್​ನಲ್ಲಿ ಅದ್ದೂರಿ ವೆಚ್ಚದಲ್ಲಿಯೇ ಶೂಟಿಂಗ್ ನಡೆಯುತ್ತಿದೆ. ಚಿಂಟು ಪಾಂಡೆ ಈ ಚಿತ್ರದ ನಿರ್ದೇಶಕರು. ನನ್ನಗಿಲ್ಲಿ ಆಗರ್ಭ ಶ್ರೀಮಂತ ಕುಟುಂಬದ ಮಗಳ ಪಾತ್ರ. ಬ್ರಿಟಿಷ್ ರಾಣಿಯ ರೀತಿಯ ಡ್ರೆಸ್ ಧರಿಸುವ ಅವಕಾಶವೂ ಈ ಸಿನಿಮಾದಲ್ಲಿ ನನಗೆ ಸಿಕ್ಕಿದೆ. ಒಟ್ಟಿನಲ್ಲಿ ಕಮರ್ಷಿಯಲ್ ಅಂಶಗಳಿಂದ ಕೂಡಿರುವ ಚಿತ್ರವಾಗಿರಲಿದೆ’ ಎಂದು ಹೇಳಿದ್ದಾರೆ.

    ಜ. 31ರವರೆಗೂ ಶಾಲೆಗಳಿಗೆ ರಜೆ; 1ರಿಂದ 9ರ ವರೆಗಿನ ತರಗತಿಗಳಿಗಷ್ಟೇ ಅನ್ವಯ: ಬಿಎಂಸಿ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts