More

    ವಯಸ್ಸಾದ ಮಾವನ ಮೇಲೆ ಹಲ್ಲೆ: ವಿಡಿಯೋ ವೈರಲ್ ಆದ​ ಬೆನ್ನಲ್ಲೇ ಮಹಿಳಾ ಎಸ್​ಐಗೆ ಎದುರಾಯ್ತು ಸಂಕಷ್ಟ

    ನವದೆಹಲಿ: ದೆಹಲಿಯ ಮಹಿಳಾ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ ಒಬ್ಬರು ತನ್ನ ತಾಯಿ ಮತ್ತು ಮತ್ತೊಬ್ಬ ಪೊಲೀಸ್​ ಸಿಬ್ಬಂದಿ ಮುಂದೆಯೇ ತನ್ನ ವಯಸ್ಸಾದ ಮಾವನ ಕೆನ್ನೆಗೆ ಬಾರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಈ ಘಟನೆ ಲಕ್ಷ್ಮೀ ನಗರದ ಹಲ್ಲೆಗೊಳಗಾದ ವಯಸ್ಸಾದ ವ್ಯಕ್ತಿಯ ನಿವಾಸದಲ್ಲಿ ಭಾನುವಾರ ನಡೆದಿದೆ. ಪೊಲೀಸ್​ ಸಿಬ್ಬಂದಿಯೊಬ್ಬರು ಮಧ್ಯ ಪ್ರವೇಶಿಸುವವರೆಗೂ ತನ್ನ ಮಾವನಿಗೆ ಮಹಿಳಾ ಎಸ್​ಐ ಅನೇಕ ಬಾರಿ ಕಪಾಳ ಮೋಕ್ಷ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯದಲ್ಲಿದೆ.

    ಹಲ್ಲೆ ಮಾಡುವ ಮುನ್ನ ಎಸ್​ಐ ಮತ್ತು ಅವರ ತಾಯಿ, ವಯಸ್ಸಾದ ವ್ಯಕ್ತಿಯ ಜೊತೆ ವಾಗ್ವಾದ ನಡೆಸಿದ್ದಾರೆ. ಮಾತಿಗೆ ಮಾತು ಬೆಳೆದು ಕೊನೆಗೆ ತಾಳ್ಮೆ ಕಳೆದುಕೊಂಡ ಮಹಿಳಾ ಎಸ್​ಐ, ತನ್ನ ಮಾವನ ಮೇಲೆ ಹಲ್ಲೆ ಮಾಡಿದ್ದಾರೆ. ಆಕೆಯ ತಾಯಿಯು ಕೂಡ ಇದಕ್ಕೆ ಸಾಥ್​ ನೀಡಿದ್ದಾರೆ.

    ಆರೋಪಿ ಮಹಿಳಾ ಎಸ್​ಐರನ್ನು ದೆಹಲಿಯ ಡಿಫೆನ್ಸ್​ ಕಾಲನಿ ಪೊಲೀಸ್​ ಠಾಣೆಯಲ್ಲಿ ನಿಯೋಜಿಸಲಾಗಿದೆ. ಇದರ ನಡುವೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ ಮಾವನ ವಿರುದ್ಧ ಕೋರ್ಟ್​ನಲ್ಲಿ ದಾವೆ ಹೂಡಿದ್ದು, ಈ ವಿಚಾರವಾಗಿ ಜಗಳ ನಡೆದಿದೆ ಎಂದು ತಿಳಿದುಬಂದಿದೆ.

    ಸದ್ಯ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದ್ದು, ಆರೋಪಿ ಎಸ್​ಐ ವಿರುದ್ಧ ಇಲಾಖಾ ಕ್ರಮಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

    ಭಾರಿ ಮಳೆಗೆ ಸಿಲಿಕಾನ್​ ಸಿಟಿ ತತ್ತರ: ಬೆಂಗಳೂರು ಪ್ರವಾಹ ಕುರಿತು ತೆಲಂಗಾಣ ಸಚಿವ ಮಾಡಿದ ಟ್ವೀಟ್​ ವೈರಲ್​​

    ನಮ್ಮನ್ನು ಬದುಕಲು ಬಿಡಿ: ನೆಟ್ಟಿಗರ ಕಾಟ ಸಹಿಸದೇ ನಟಿ, ನಿರ್ಮಾಪಕಿ ಚಾರ್ಮಿ ಕೌರ್​ ತೆಗೆದುಕೊಂಡ ನಿರ್ಧಾರವಿದು…

    ಪ್ರವೀಣ್ ನೆಟ್ಟಾರ್​ ಹತ್ಯೆ ಪ್ರಕರಣ: ಸುಳ್ಯ, ಪುತ್ತೂರಿನ ವಿವಿಧ ಕಡೆಗಳಲ್ಲಿ ಎನ್​ಐಎ ದಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts