More

    ಯಶ್​ ಫ್ಯಾನ್ಸ್​ಗೆ ಬೇಸರ ತರಿಸಿದ ಬಾಲಿವುಡ್​ ಬೋಲ್ಡ್​ ಬ್ಯೂಟಿ ಉರ್ಫಿ ಜಾವೇದ್​ ಹೇಳಿಕೆ!

    ಮುಂಬೈ: ಅತ್ಯಂತ ಕಡಿಮೆ ಉಡುಗೆ ತೊಟ್ಟು ವಿಭಿನ್ನ ರೀತಿಯಲ್ಲಿ ಪೋಸ್‌ ಕೊಟ್ಟು ಖ್ಯಾತಿ ಗಳಿಸಲು ಹವಣಿಸುವ ಕೆಲವು ತಾರೆಗಳ ಪೈಕಿ ನಟಿ ಉರ್ಫಿ ಜಾವೇದ್‌ ಕೂಡ ಒಬ್ಬಳು. ತಾನು ತೊಡುವ ಡ್ರೆಸ್‌ಗಳಿಂದಲೇ ಟ್ರೋಲ್‌ ಆಗುವ ಈಕೆ ಬಾಲಿವುಡ್​ ಟಿಲಿ ವಿಷನ್​ ಇಂಡಸ್ಟ್ರಿಯಲ್ಲಿ ಹೆಚ್ಚು ಖ್ಯಾತಿ ಪಡೆದಿದ್ದಾರೆ. ಇತ್ತೀಚೆಗೆ ಉರ್ಫಿ ಅವರಿಗೆ ಪಾಪರಾಜಿಗಳು ಯಶ್​ ಅಭಿನಯದ ಬಹುನಿರೀಕ್ಷಿತ ಪ್ಯಾನ್​ ಇಂಡಿಯಾ ಸಿನಿಮಾ ಕೆಜಿಎಫ್​ ಚಾಪ್ಟರ್​ 2 ಬಗ್ಗೆ ಕೇಳಿದರು. ಈ ವೇಳೆ ಉರ್ಫಿ ನೀಡಿರುವ ಉತ್ತರ ಯಶ್​ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

    ಇಡೀ ದೇಶವೇ ಕೆಜಿಎಫ್​ ಸಿನಿಮಾಗಾಗಿ ಎದುರು ನೋಡುತ್ತಿರುವಾಗ ಉರ್ಫಿ ನೀಡಿದ ಹೇಳಿಕೆ ಯಶ್​ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ನೀವು ಕೆಜಿಎಫ್​ ಚಾಪ್ಟರ್​ 2 ಟ್ರೇಲರ್​ ಅನ್ನು ನೋಡಿದ್ದೀರಾ ಎಂದು ಫೋಟೋಗ್ರಾಫರ್​ ಒಬ್ಬರು ಪ್ರಶ್ನಿಸಿದರು. ಇದಕ್ಕೆ ಉತ್ತರ ನೀಡಿದ ಉರ್ಫಿ, ಇಲ್ಲ ನಾನು ನೋಡಿಲ್ಲ. ಅದಿರಲಿ ಕೆಜಿಎಫ್​ ಚಾಪ್ಟರ್​ ಒಂದನ್ನೇ ಇನ್ನೂ ನೋಡಿಲ್ಲ ಎಂದಿದ್ದಾರೆ. ಮುಂದುವರಿದು ಮಾತನಾಡಿದ ಉರ್ಫಿ, ನನಗೆ ತುಂಬಾ ಬೇಸರವಾಗುತ್ತಿದೆ. ಹಾಗಾಗಿ ಎಲ್ಲರೂ ಆ ಸಿನಿಮಾವನ್ನು ಒಟ್ಟಿಗೆ ನೋಡುವ ಯೋಜನೆ ಹಾಕಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

    ಇದೇ ವೇಳೆ ದಕ್ಷಿಣ ಭಾರತದ ನಿಮ್ಮ ನೆಚ್ಚಿನ ನಟನ್ಯಾರು ಎಂದು ಪ್ರಶ್ನಿಸಿದಾಗ, ಟಾಲಿವುಡ್​ ಸೂಪರ್​ಸ್ಟಾರ್​ ರಾಮ್​ಚರಣ್​ ಹೆಸರೇಳಿದ ಉರ್ಫಿ, ರಾಮ್​ಚರಣ್​ ತುಂಬಾ ಹ್ಯಾಂಡ್​ಸಮ್​ ಆಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಉರ್ಫಿ ಹೇಳಿಕೆಯನ್ನು ಕೇಳಿ ರಾಮ್​ಚರಣ್​ ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ.

    ಇನ್ನು ಬಿಗ್​ ಬಾಸ್​ ಒಟಿಟಿ ಷೋನಲ್ಲಿ ಸ್ಪರ್ಧಿಸಿ ಬಂದ ಬಳಿಕ ಭಾರಿ ಪ್ರಸಿದ್ಧಿ ಪಡೆದಿರುವ ಈ ಉರ್ಫಿ ಜಾವೇದ್, ಯಾವುದಕ್ಕೂ ಕೇರ್‌ ಮಾಡದೇ ತನ್ನ ಮೈಮಾಟ ಪ್ರದರ್ಶನ ಮಾಡುವಲ್ಲಿ ಎತ್ತಿದ ಕೈ. ಪ್ರತಿದಿನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪಡ್ಡೆ ಹುಡುಗರ ಮೈ ಬಿಸಿಯೇರಿಸುವಂತಹ ಫೋಟೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಅವರ ಹಾಟ್​ ಅವತಾರಕ್ಕೆ ಫಿದಾ ಆಗಿರುವ ಅಭಿಮಾನಿಗಳು ಪ್ರತಿದಿನ ಅವರ ಫೋಟೋ ಅಥವಾ ವಿಡಿಯೋಗಳಿಗೆ ಎದುರು ನೋಡುತ್ತಲೇ ಇರುತ್ತಾರೆ. (ಏಜೆನ್ಸೀಸ್​)

    ಕೆಲವೇ ದಿನದಲ್ಲಿ ಹಸಮಣೆ ಏರಬೇಕಿದ್ದ ಪೊಲೀಸ್​ ಪೇದೆ ದುರಂತ ಸಾವು! ಅಯ್ಯೋ, ವಿಧಿಯೇ ನೀನೆಷ್ಟು ಕ್ರೂರಿ?

    ನಿನಗಿಂತ ನಾನೇನು ಕಮ್ಮಿ ಇಲ್ಲ! ಹೃತಿಕ್​ಗೆ ಸೆಡ್ಡೊಡೆದು ಗೌಪ್ಯ ಸಂಬಂಧಕ್ಕೆ ಅಧಿಕೃತ ಮುದ್ರೆ ಒತ್ತಿದ ಮಾಜಿ ಪತ್ನಿ

    ನಿಮಗೋಸ್ಕರ ಟೀ ಶರ್ಟ್​ ಬಿಚ್ತೀನಿ: ವೀಕ್ಷಕರಿಗೆ ಕೊಟ್ಟ ಭರವಸೆ ಉಳಿಸಿಕೊಂಡ ಪೂನಂ ಪಾಂಡೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts