VIDEO| ಅತ್ತ ಅಪ್ಪ-ಅಮ್ಮ ಯುಗಾದಿ ಶಾಪಿಂಗ್; ಇತ್ತ ಕಾರಿನಲ್ಲಿ ಉಸಿರುಗಟ್ಟಿ ಮಗು ನರಳಾಟ

Child Car 1
Published on

ಬೆಂಗಳೂರು: ಯುಗಾದಿ ಹಬ್ಬದ ಶಾಪಿಂಗ್​ ಬಿಜಿಯಲ್ಲಿದ್ದ ದಂಪತಿ ತಮ್ಮ ಮಗುವನ್ನು ಕಾರಿನಲ್ಲೇ ಬಿಟ್ಟು ಹೋಗಿದ್ದರ ಪರಿಣಾಮ ಉಸಿರುಗಟ್ಟಿ ಮಗು ಪ್ರಾಣ ಕಳೆದುಕೊಳ್ಳುವಷ್ಟರಲ್ಲಿ ಸ್ಥಳೀಯರ ಸಮಯಪ್ರಜ್ಞೆಯಿಂದ ಮಗುವಿನ ಪ್ರಾಣ ಉಳಿದ ಘಟನೆ ನಗರದ ಜಾಲಹಳ್ಳಿಯ ನ್ಯೂ ಬಿಇಎಲ್​ನಲ್ಲಿ ನಡೆದಿದೆ.

ಸೋಮವಾರ ರಾತ್ರಿ ನಾಲ್ಕು ವರ್ಷದ ಮಗುವನ್ನು ಕಾರಿನಲ್ಲೇ ಬಿಟ್ಟು ದಂಪತಿ ಯುಗಾದಿ ಹಬ್ಬದ ಶಾಪಿಂಗ್​ಗೆ ತೆರಳಿದ್ದರು. ಕೀ ಕಾರಿನಲ್ಲೇ ಇದ್ದಿದ್ರಿಂದ ಆಟೋಮೆಟಿಕ್ ಲಾಕ್ ಆಗಿತ್ತು.

ಇದಾದ ಕೆಲವೊತ್ತಿನಲ್ಲೇ ಉಸಿರುಗಟ್ಟಲು ಆರಂಭಿಸಿ ಮಗು ಚೀರಾಡಲು ಶುರು ಮಾಡಿತು. ಇದೇ ವೇಳೆ ರಸ್ತೆಯಲ್ಲಿ ಸಾಗುತ್ತಿದ್ದ ಸ್ಥಳೀಯರು ಕಾರಿನ ಕಿಟಕಿ ಬಳಿ ಮಗು ಅಳುವುದನ್ನು ನೋಡಿದ್ದಾರೆ.

ತಕ್ಷಣವೇ ಕಾರಿನ ಗಾಜು ಒಡೆದು ಮಗುವನ್ನು ರಕ್ಷಿಸಿರುವ ಸ್ಥಳಿಯರು ದಂಪತಿಗೆ ಬುದ್ಧಿವಾದ ಹೇಳಿ ಕಳುಹಿಸಿದರು. ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆಯಿತು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net