RRR ಚಿತ್ರ ವೀಕ್ಷಿಸುತ್ತಿದ್ದ ಅಭಿಮಾನಿ ಸಾವು: ಸಿನಿಮಾ ಮಧ್ಯದಲ್ಲೇ ನಡೆದ ಘಟನೆ ನೋಡಿ ಬೆಚ್ಚಿಬಿದ್ದ ಫ್ಯಾನ್ಸ್​!

RRR Fan
Published on

ಹೈದರಾಬಾದ್​: ನಿನ್ನೆ (ಮಾ. 25) ವಿಶ್ವದಾದ್ಯಂತ ತೆರೆಕಂಡ ಆರ್​ಆರ್​ಆರ್​ ಸಿನಿಮಾ ಅದ್ಭುತ ಪ್ರತಿಕ್ರಿಯೆಯೊಂದಿಗೆ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿದೆ. ಆರ್​ಆರ್​ಆರ್​ ಸಿನಿಮಾ ನೋಡಿದ ಜೂ. ಎನ್​ಟಿಆರ್​ ಮತ್ತು ರಾಮ್​ಚರಣ್​ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿದೆ. ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬರುತ್ತಿದ್ದು, ಸಂಭ್ರಮ ಮನೆ ಮಾಡಿರುವ ಮಧ್ಯೆಯೇ ದುರಂತ ಘಟನೆಯಿಂದ ನಡೆದು ಹೋಗಿದೆ.

ಆಂಧ್ರ ಪ್ರದೇಶದ ಅನಂತಪುರದಲ್ಲಿರುವ ಎಸ್​ವಿ ಮ್ಯಾಕ್ಸ್​ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಣೆ ಮಾಡುವಾಗ ಅಭಿಮಾನಿಯೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ. ಸಿನಿಮಾ ನೋಡಲು ಕಾತುರರಾಗಿದ್ದ ಅಭಿಮಾನಿಯೊಬ್ಬರು ತಮ್ಮ ನೆಚ್ಚಿನ ನಾಯಕನನ್ನು ಫೋನ್‌ನಲ್ಲಿ ಚಿತ್ರೀಕರಿಸುತ್ತಿದ್ದಾಗ ಮಧ್ಯದಲ್ಲಿ ಏಕಾಏಕಿ ಕುಸಿದು ಬಿದ್ದಿದ್ದಾರೆ. ಈ ದುರಂತ ಘಟನೆ ಎಲ್ಲಾ ಅಭಿಮಾನಿಗಳನ್ನು ಕೂಡ ಬೆಚ್ಚಿಬೀಳಿಸಿದೆ.

ಸಾವಿಗೂ ಮುನ್ನ ಆತನ ಸ್ನೇಹಿತರು ಆತನನ್ನು ಆಸ್ಪತ್ರೆಗೆ ಕರೆದೊಯ್ದರು, ಆದರೆ ವೈದ್ಯರು ಹೃದಯಾಘಾತದಿಂದ ಈಗಾಗಲೇ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದರು. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ. ನೆಚ್ಚಿನ ನಾಯಕನ ಸಿನಿಮಾ ನೋಡಲು ಕಾತರರಾಗಿದ್ದ ಅಭಿಮಾನಿಯೊಬ್ಬರನ್ನು ಕಳೆದುಕೊಂಡಿರುವುದು ಹಲವರ ಬದುಕಿಗೆ ನೋವುಂಟು ಮಾಡಿದೆ.

ಇನ್ನೊಂದೆಡೆ ಚಿತ್ರಕ್ಕೆ ಮೊದಲ ದಿನವೇ ಪಾಸಿಟಿವ್ ಟಾಕ್ ಸಿಕ್ಕಿದ್ದು, ಹಿಂದೆಂದೂ ಕಾಣದಷ್ಟು ಹೊಸ ಬಾಕ್ಸಾಫೀಸ್ ದಾಖಲೆಗಳನ್ನು ಸೃಷ್ಟಿಸಿದೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net